ಸಿದ್ಧವಾಗ್ತಿದೆ 'ಚುಟು ಚುಟು..' ಶೈಲಿಯ ಮತ್ತೊಂದು ಹಾಡು

'ಚುಟು ಚುಟು...' ಹಾಡು ಕನ್ನಡದ ದೊಡ್ಡ ಹಿಟ್ ಹಾಡಾಗಿದೆ. ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ನಂಬರ್ ಒನ್ ಹಾಡು ಇದಾಗಿದೆ.

ಇದೀಗ ಮತ್ತೆ ಚುಟು ಚುಟು ರೀತಿಯ ಮತ್ತೊಂದು ಹಾಡು ಸಿದ್ಧವಾಗುತ್ತಿದೆ. ಆದರೆ, ಈ ಬಾರಿ ಅರ್ಜುನ್ ಜನ್ಯ ಬದಲು ಚರಣ್ ರಾಜ್ ಇದಕ್ಕೆ ಸಂಗೀತ ನೀಡಲಿದ್ದಾರೆ.

'ಅವತಾರ್ ಪುರುಷ' ಸಿನಿಮಾದ ಹಾಡುಗಳ ಕೆಲಸ ಸದ್ಯ ನಡೆಯುತ್ತಿದೆ. ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ಜೋಡಿ ಒಂದಾಗಿದ್ದು, ಇಬ್ಬರನ್ನು ಕುಣಿಸಲು ಒಂದು ಮಸ್ತ್ ಹಾಡು ಚಿತ್ರದಲ್ಲಿದೆ.

get ready for one more dance number like chutu chutu

ಚುಟು ಚುಟು ಹಾಡಿಗೆ ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದ, ಶರಣ್ ಹಾಗೂ ಆಶಿಕಾ ಗಾಗಿ ಈ ಹಾಡು ಮಾಡಲಾಗುತ್ತಿದೆ. ಸುನಿ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ.

ಚರಣ್ ರಾಜ್ ಅವರ 'ಟಗರು' ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಈ ಸಿನಿಮಾದ ಹಾಡುಗಳ ಮೇಲೆ ನಿರೀಕ್ಷೆ ಇದೆ. ವಿಭಿನ್ನ ಶೈಲಿಯ ಮ್ಯೂಸಿಕ್ ನೀಡುವ ಚರಣ್ ಈ ಸಿನಿಮಾದಲ್ಲಿ ಯಾವ ರೀತಿಯ ಹಾಡು ನೀಡುತ್ತಾರೆ ಎನ್ನುವ ಕುತೂಹಲ ಇದೆ.

'ಅವತಾರ್ ಪುರುಷ' ಎಂಬ ಟೈಟಲ್ ಸಖತ್ ಫನ್ನಿಯಾಗಿದ್ದು, ಚಿತ್ರ ಕೂಡ ಸಖತ್ ಕಾಮಿಡಿಯಾಗಿ ಇರಲಿದೆ. ಹಾಡುಗಳ ಕೆಲಸದ ಜೊತೆಗೆ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ.

More from Filmibeat

English summary
Get ready for one more dance number like Chutu Chutu in 'Avathara Purusha' kannada movie. The movie is directed by Suni.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X