For Quick Alerts
  ALLOW NOTIFICATIONS  
  For Daily Alerts

  ನಯನಾತಾರ ಸಿನಿ ಜೀವನದಲ್ಲಿ 'ಆ ಸಿನಿಮಾ' ಮಾಡಬಾರದಿತ್ತಂತೆ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಯನಾತಾರ. ಮಲಯಾಳಂ ಚಿತ್ರರಂಗದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಯನಾತಾರ 17 ವರ್ಷಗಳಲ್ಲಿ ಸುಮಾರು 70ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಚಿತ್ರಾಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ನಯನಾ ಆ ಒಂದು ಸಿನಿಮಾ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಸೌತ್ ಸಿನಿ ಇಂಡಸ್ಟ್ರಿಯ ಎಲ್ಲಾ ಭಾಷೆಯಲ್ಲೂ ಮಿಂಚಿರುವ ನಯನಾ ಸೂಪರ್ ಹಿಟ್ ಸಿನಿಮಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನ ಒಂದರಲ್ಲಿ ಮಾತಾಡಿದ ನಯನಾ ತನ್ನ ಸಿನಿ ಜೀವನದಲ್ಲೆ ಅಂತಹ ಪಾತ್ರ ಮಾಡಬಾರದಿತ್ತು ಎಂದು ಪಾತ್ರದ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಬೇಸರ ಹೊರಹಾಕಿದ್ದಾರೆ.

  ಶೂಟಿಂಗ್ ವೇಳೆ ರಜನಿ ತಂಡಕ್ಕೆ ಕಲ್ಲು ಎಸೆದ ವಿದ್ಯಾರ್ಥಿಗಳು

  ನಯನಾ ಬೇಸರಕ್ಕೆ ಕಾರಣವಾದ ಸಿನಿಮಾ ಟಾಲಿವುಟ್ ಸ್ಟಾರ್ ಸೂರ್ಯ ಅಭಿನಯದ 'ಗಜನಿ' ಸಿನಿಮಾ. 'ಗಜನಿ' ಚಿತ್ರದಲ್ಲಿ ನಯನಾತಾರ ಎರಡನೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಟಾಲಿವುಡ್ ನಸೂಪರ್ ಹಿಟ್ಸಿನಿಮಾಗಳಲ್ಲಿ ಒಂದು 'ಗಜನಿ'. ನಟಿ ಆಸಿನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಆದ್ರೆ ನಯನಾ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ನಿರ್ದೇಶಕರ ಎ.ಆರ್ ಮುರುಗದಾಸ್ ಮೊದಲು ಕತೆ ಬಗ್ಗೆ ಹೇಳುವಾಗ ಪಾತ್ರ ಚೆನ್ನಾಗಿಯೆ ವಿವರಿಸಿದ್ರಂತೆ. ಆದ್ರೆ ಸಿನಿಮಾ ಆದ್ಮೇಲೆ ಸಂಪೂರ್ಣವಾಗಿ ಬದಲಾಗಿದೆಯಂತೆ. ಆ ನಂತರ ಈ ಪಾತ್ರ ಮಾಡಬಾರದಿತ್ತು ಅಂತ ಅನಿಸಿದೆಯಂತೆ. ಹಾಗಾಗಿ ಆ ನಂತರ ಬಹುತಾರಗಣದ ಚಿತ್ರ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಾರಂತೆ.

  ಸದ್ಯ ನಯನಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಜೊತೆ 'ದಳಪತಿ63', ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಈ ವರ್ಷದ ಕೊನೆಯಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  South film industry famous actress Nayantara said that, Ghajini movie was one of the worst career decisions. This movie directed by A.R Murugadas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X