ಘಿಬ್ಲಿ ಸ್ಟೈಲ್‌ಗೆ ಮಾರುಹೋದ ಸಿನಿಮಾ ತಾರೆಯರು; ನೀವು ಟ್ರೈ ಮಾಡಿ ಹೀಗೆ?
ಸೋಷಿಯಲ್ ಮೀಡಿಯಾದಲ್ಲಿ ಯಾವಾಗ ಯಾವ ರೀಲ್ಸ್, ಆಪ್ ಟ್ರೆಂಡ್ ಆಗುತ್ತದೆ ಎಂದು ಹೇಳೋಕೆ ಕಷ್ಟ. ಸದ್ಯ AI ಇಮೇಜ್ ಕ್ರಿಯೇಟರ್ ಸ್ಟುಡಿಯೋ ಘಿಬ್ಲಿ ಹಾಟ್ ಟಾಪಿಕ್ ಆಗಿದೆ. ಈ ಆಪ್ ಬಳಸಿ ಸಾಕಷ್ಟು ಜನ ತಮ್ಮ ಘಿಬ್ಲಿ ಸ್ಟೈಲ್ ಇಮೇಜ್‌ಗಳನ್ನು ರಚಿಸಿ ವೈರಲ್ ಮಾಡುತ್ತಿದ್ದಾರೆ.
ಸಿನಿಮಾ ತಾರೆಯರನ್ನು ಕೂಡ ಘಿಬ್ಲಿ ಸ್ಟೈಲ್ ಬಿಟ್ಟಿಲ್ಲ. ನಟ ಸುದೀಪ್ ತಮ್ಮ ಫ್ಯಾಮಿಲಿ ಫೋಟೊವನ್ನು ಘಿಬ್ಲಿ ಸ್ಟೈಲ್ AI ಇಮೇಜ್ ಕ್ರಿಯೇಟ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳನ್ನು ಅದನ್ನು ಮೆಚ್ಚಿ ವೈರಲ್ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ಕೆಜಿಎಫ್', 'ರಾಜಕುಮಾರ', 'ಸಲಾರ್' ಹಾಗೂ 'ಕಾಂತಾರ' ಐಕಾನಿಕ್ ಫೋಟೊಗಳಿಗೆ ಘಿಬ್ಲಿ ಸ್ಟೈಲ್ ಟಚ್ ಕೊಟ್ಟಿದೆ. ಸದ್ಯ ಆ ಫೋಟೊಗಳು ವೈರಲ್ ಆಗುತ್ತಿದೆ.

ಅಭಿಮಾನಿಗಳು ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಫೋಟೊಗಳನ್ನು ಸ್ಟುಡಿಯೋ ಘಿಬ್ಲಿ ಸ್ಟೈಲ್‌ನಲ್ಲಿ ಕ್ರಿಯೇಟ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಶೋಲೆ, ಡಿಡಿಎಲ್‌ಜೆ, ಓಂ ಶಾಂತಿ ಓಂ, ರಾಕ್‌ಸ್ಟರ್, ಪುಷ್ಪ ಹೀಗೆ ಹಲವು ಸಿನಿಮಾಗಳ ಫೋಟೊಗಳನ್ನು ಘಿಬ್ಲಿ ಸ್ಟೈಲ್‌ನಲ್ಲಿ ನೋಡಬಹುದು. ಈ ಚಿತ್ರಗಳು ಸಾಮಾನ್ಯ ಫೋಟೋಗಳ ರೀತಿ ಅಲ್ಲದೇ ಅನಿಮೇಟೆಡ್ ಗೇಮಿಂಗ್ ಚಿತ್ರಗಳನ್ನು ಹೋಲುವಂತಿವೆ.
ಜಪಾನ್ ಸೇರಿದಂತೆ ಕೆಲವು ಕಡೆ ಗೇಮರ್‌ಗಳು ಹಾಗೂ ಮತ್ತು ಡೆವಲಪರ್‌ಗಳು ಇದನ್ನು ಹೆಚ್ಚು ಬಳಸುತ್ತಾರೆ. ಒಟ್ಟಾರೆ ಘಿಬ್ಲಿ ಸ್ಟೈಲ್ ಚಿತ್ರಗಳು ಟ್ರೆಂಡ್ ಕ್ರಿಯೇಟ್ ಮಾಡಿದೆ. ಅದು ನಿಧಾನವಾಗಿ ಸಿನಿಮಾ ಸೆಲೆಬ್ರೆಗಳನ್ನು ಆಕರ್ಷಿಸುತ್ತಿವೆ. ಈಗಾಗಲೇ ಕೆಲ ನಟ, ನಟಿಯರು ತಮ್ಮ ಘಿಬ್ಲಿ ಸ್ಟೈಲ್ ಫೋಟೊಗಳನ್ನು ನೋಡಿ ಖುಷಿಪಟ್ಟಿದ್ದಾರೆ. ನೀವು ಕೂಡ ಇಂತಹ ಫೋಟೊಗಳನ್ನು ರಚಿಸಿಕೊಳ್ಳಬಹುದು.
ಎಲಾನ್ ಮಸ್ಕ್ ಗ್ರೋಕ್ 3 ಎದುರು ಓಪನ್ AIನಿಂದ ಈ GPT 4o ಇಮೇಜ್ ಜನರೇಷನ್ ಟೂಲ್ ಬಿಡುಗಡೆಯಾಗಿದೆ. ಅಂದಹಾಗೆ ಚಾಟ್ ಜಿಪಿಟಿ ಮೂಲಕ ಸ್ಟುಡಿಯೋ ಘಿಬ್ಲಿ ಚಿತ್ರಗಳನ್ನು ಉಚಿತವಾಗಿ ರಚಿಸಬಹುದು. ಆದರೆ ಅದಕ್ಕೆ ಕೆಲ ಮಿತಿಗಳಿವೆ.
ಘಿಬ್ಲಿ ಫೋಟೊ ಕ್ರಿಯೇಟ್ ಮಾಡುವುದು ಹೇಗೆ?
ChatGPTಯಲ್ಲಿ GPT-4o ಮಾಡಲ್ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಫೋಟೊ ಅಪ್‌ಲೋಡ್ ಮಾಡಬೇಕು. ಬಳಿಕ Transform This Photo into studio Ghibli style ಎಂದು ಸೂಚನೆ ನೀಡಬೇಕು. ಆ ಬಳಿಕ ಫೋಟೊ ಕ್ರಿಯೇಟ್ ಆಗುತ್ತದೆ. ಅದನ್ನು ನಿಮಗೆ ಬೇಕಾದಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಅವಕಾಶವೂ ಇದೆ.
ಆರ್ಟ್‌ಬ್ರೀಡರ್ ಮೂಲಕವೂ ನೀವು ಸಹ ಇಂತಹ ವಿಭಿನ್ನ ಚಿತ್ರಗಳನ್ನು ರಚಿಸಬಹುದು. ಆದರೆ ಕೆಲ ಫೀಚರ್‌ಗಳಿಗಾಗಿ ನೀವು ಹಣ ಪಾವತಿಸಬೇಕಾದ ಅನಿವಾರ್ಯತೆ ಇರುತ್ತದೆ. ಈಗಾಗಲೇ ಕೆಲವರ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸ್ಟೋರಿ, ಡಿಪಿಯಲ್ಲಿ ಇಂತಹ ಘಿಬ್ಲಿ ಸ್ಟೈಲ್ ಫೋಟೊಗಳನ್ನು ನೀವು ನೋಡಿರುತ್ತೀರಾ. ನಿಮಗೂ ಇಷ್ಟವಾಗಿದ್ದರೆ ಈಗ್ಲೇ ಕ್ರಿಯೇಟ್ ಮಾಡಿಕೊಳ್ಳಿ.
ಇತ್ತೀಚೆಗೆ ಇಂತಹ ಸಾಕಷ್ಟು ಆಪ್‌ಗಳು ಲಭ್ಯವಿದೆ. ನಿಮ್ಮ ಫೋಟೊಗಳನ್ನು ಬೇರೆ ರೂಪದಲ್ಲಿ ಕಲ್ಪಿಸಿಕೊಂಡು ಹೊಸ ರೂಪ ಕೊಡಬಹುದು. ಆದರೆ ಅದೆಲ್ಲಕ್ಕಿಂತ ಘಿಬ್ಲಿ ಸ್ಟೈಲ್ ಯಾಕೋ ಬಹಳ ವೈರಲ್ ಆಗುತ್ತಿದೆ. ಸಿನಿಮಾ ತಾರೆಯರ ಮನಸ್ಸನ್ನು ಸೆಳೆದಿದೆ. ಮುಂದೆ ಇದು ಹೇಗೆಲ್ಲಾ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











