2 ನಿಮಿಷದ ಬೆಂಕಿ ಕಿಡಿ: 'ಘೋಸ್ಟ್‌' ಬಿಗ್‌ಡ್ಯಾಡಿ ಟೀಸರ್ ಸೀಕ್ರೆಟ್ ಬಿಚ್ಚಿಟ್ಟ ಶ್ರೀನಿ

ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಫಸ್ಟ್ ಟೀಸರ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ಓಲ್ಡ್ ಮಾಂಕ್' ಶ್ರೀನಿ ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು. ಶಿವಣ್ಣನ ಅಭಿಮಾನಿಯೂ ಆಗಿರುವ ಶ್ರೀನಿ ತಮ್ಮ ನೆಚ್ಚಿನ ನಟನನ್ನು ಹೊಸ ರೀತಿಯಲ್ಲಿ ತೆರೆಮೇಲೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೊ ಹುಟ್ಟುಹಬ್ಬಕ್ಕೆ 'ಘೋಸ್ಟ್' ಬಿಗ್‌ಡ್ಯಾಡಿಯ ಪರಿಚಯ ಮಾಡಿಸುತ್ತಿದ್ದಾರೆ.

ಈ ವರ್ಷ ಶಿವಣ್ಣ ನಟನೆಯ ಯಾವುದೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. 'ಘೋಸ್ಟ್' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ದೊಡ್ಡ ದೊಡ್ಡ ಸೆಟ್‌ಗಳಲ್ಲಿ ಸಿನಿಮಾ ಕಟ್ಟಿಕೊಡಲಾಗಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಇಲ್ಲಿವರೆಗೆ ಚಿತ್ರದ ಅಫೀಷಿಯಲ್ ಪೋಸ್ಟರ್ ಕೂಡ ರಿಲೀಸ್ ಆಗಿಲ್ಲ. ಆದರೂ ಕೂಡ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

Ghost: Makers to release 2 minute teaser on Shivarajkumars birthday

ಈ ಬಾರಿ ಶಿವಣ್ಣನ ಹುಟ್ಟುಹಬ್ಬಕ್ಕೆ 'ಘೋಸ್ಟ್' ಟೀಂ ಬೊಂಬಾಟ್ ಗಿಫ್ಟ್ ಕೊಡೋಕೆ ಮುಂದಾಗಿದೆ. ಕಳೆದ ವರ್ಷ ಶಿವಣ್ಣ ಜನ್ಮದಿನ ಆಚರಣೆಗೆ ಬ್ರೇಕ್ ಹಾಕಿದ್ದರ. ಆದರೆ ಈ ಬಾರಿ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅಭಿಮಾನಿಗಳ ಸಂಭ್ರಮ ಡಬಲ್ ಮಾಡೋಕೆ 'ಘೋಸ್ಟ್' ಶಿವಣ್ಣನ ದರ್ಶನವಾಗಲಿದೆ.

2 ನಿಮಿಷದ ಜಬರ್ದಸ್ತ್ ಟೀಸರ್

ಈಗಾಗಲೇ 'ಘೋಸ್ಟ್' ಸಿನಿಮಾ ಟೀಸರ್ ಕಟ್ ಮಾಡಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್‌ಗೆ ನಿರ್ದೇಶಕ ಶ್ರೀನಿ ಮಾಹಿತಿ ನೀಡಿದ್ದು ಅಭಿಮಾನಿಗಳಿಗೆ ಇಷ್ಟವಾಗುವಂತಹ ಜಬರ್ದಸ್ತ್‌ ಸ್ಯಾಂಪಲ್ ಬರೋದು ಪಕ್ಕಾ ಆಗಿದೆ. ಟೈಟಲ್‌ನಿಂದಲೇ ಈ ಸಿನಿಮಾ ಇಂಡಸ್ಟ್ರಿಯಲ್ಲಿ ವೈಬ್ರೇಷನ್ ಕ್ರಿಯೇಟ್ ಮಾಡಿದೆ. ಆದರೆ ಕಥೆ ಏನು? ಶಿವಣ್ಣ ಪಾತ್ರ ಯಾವ ರೀತಿ ಇರುತ್ತದೆ? ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅದಕ್ಕೆಲ್ಲಾ ಟೀಸರ್‌ನಲ್ಲಿ ಉತ್ತರ ಸಿಗಲಿದೆ.

ಸಂತೋಷ್ ಥಿಯೇಟರ್‌ನಲ್ಲಿ ಸೆಲೆಬ್ರೇಷನ್

ಜುಲೈ 12ರಂದು ಕೆ. ಜಿ ರಸ್ತೆಯ ಸಂತೋಷ್ ಥಿಯೇಟರ್‌ನಲ್ಲಿ 'ಘೋಸ್ಟ್' ಸಿನಿಮಾ ಟೀಸರ್ ರಿಲೀಸ್ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಈ ಬಗ್ಗೆ ಶಿವಣ್ಣನ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಶ್ರೀನಿ ಹೇಳಿದ್ದಾರೆ. ಶಿವಣ್ಣ ಒಪ್ಪಿದರೆ ಅದಕ್ಕೆ ತಯಾರಿ ನಡೆಸುವ ಲೆಕ್ಕಾಚಾರದಲ್ಲಿದ್ದಾರೆ. ಯೂಟ್ಯೂಬ್‌ನಲ್ಲಿ ಟೀಸರ್ ರಿಲೀಸ್ ಆಗೋದು ಮಾಮೂಲಿ. ಆದರೆ ಥಿಯೇಟರ್‌ನಲ್ಲಿ ದೊಡ್ಡ ಪರದೆಯಲ್ಲಿ ಡಿಟಿಎಸ್‌ ಸೌಂಡ್‌ನಲ್ಲಿ ಆ ಕಿಕ್ ನೆಕ್ಸ್ಟ್ ಲೆವೆಲ್‌ನಲ್ಲಿ ಇರುತ್ತದೆ. ಅದೇ ಕಾರಣಕ್ಕೆ ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳ ಟೀಸರ್, ಟ್ರೈಲರ್ ಥಿಯೇಟರ್‌ಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

Ghost: Makers to release 2 minute teaser on Shivarajkumars birthday

3 ಭಾಷೆಗಳಲ್ಲಿ 'ಘೋಸ್ಟ್' ಆರ್ಭಟ

ಸದ್ಯ ಎಲ್ಲಾ ಇಂಡಸ್ಟ್ರಿಗಳಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಕನ್ನಡದಲ್ಲೂ ಸ್ಟಾರ್ ನಟರೆಲ್ಲಾ 5 ಭಾಷೆಗಳಲ್ಲಿ ತಮ್ಮ ಸಿನಿಮಾ ರಿಲೀಸ್‌ಗೆ ಪ್ರಯತ್ನಿಸುತ್ತಿದ್ದಾರೆ. ಸದ್ಯ ಶಿವಣ್ಣನ ಯಾವುದೇ ಸಿನಿಮಾ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿಲ್ಲ. 'ಘೋಸ್ಟ್' ಚಿತ್ರವನ್ನು ಕನ್ನಡ, ತಮಿಳು, ತೆಲುಗಿನಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. 3 ಭಾಷೆಗಳಲ್ಲಿ ಟೀಸರ್ ಕೂಡ ಬರಲಿದೆ. ಆದರೆ ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ.

ಘಟಾನುಘಟಿ ಕಲಾವಿದರ ದಂಡು

ಶಿವರಾಜ್‌ಕುಮಾರ್ ಜೊತೆಗೆ ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಜಯರಾಂ, ಅನುಪಮ್ ಕೇರ್ ತಾರಾಗಣದಲ್ಲಿದ್ದಾರೆ. 48 ಗಂಟೆಗಳಲ್ಲಿ ನಡೆಯುವ ಕಥೆ ಇದು ಎನ್ನಲಾಗ್ತಿದ್ದು ನಾಯಕಿ ಕೂಡ ಚಿತ್ರದಲ್ಲಿಲ್ಲ. ಬೆಂಗಳೂರಿನ ಮಿನರ್ವ ಮಿಲ್ ಹಾಗೂ ಮೈಸೂರಿನಲ್ಲಿ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ.

More from Filmibeat

English summary
Ghost: Makers to release 2 minute teaser on Shivarajkumar's birthday. Director Srini Reacts To filmibeat about Teaser Release Plans. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X