ಬಿಡುಗಡೆಗೂ ಮುನ್ನವೇ ತಲೆ ಎತ್ತಿದ ಘೋಸ್ಟ್ ಕಟ್‌ಔಟ್; ನಾಳೆ ಸಂತೋಷ್ ಚಿತ್ರಮಂದಿರದಲ್ಲಿ ಏನೆಲ್ಲಾ ಸೆಲೆಬ್ರೇಷನ್ಸ್?

ನಾಳೆ ( ಜುಲೈ 12 ) ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ 61ನೇ ವಸಂತಕ್ಕೆ ಕಾಲಿಡಲಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಶಿವ ರಾಜ್‌ಕುಮಾರ್ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಆಫ್‌ಲೈನ್ ಸೆಲೆಬ್ರೇಷನ್‌ಗೆ ಹೆಸರು ವಾಸಿಯಾಗಿರುವ ಶಿವಣ್ಣನ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋನ ಹುಟ್ಟುಹಬ್ಬಕ್ಕೆ ಮಾಡುವ ಆಚರಣೆಗಳ ಬಗ್ಗೆ ಕೇಳಬೇಕಾ?

ಅದರಲ್ಲಿಯೂ ಈ ಬಾರಿಯ ಹುಟ್ಟುಹಬ್ಬದಂದು ಶಿವ ರಾಜ್‌ಕುಮಾರ್ ನಟನೆಯ ಹಲವಾರು ಚಿತ್ರಗಳ ಅಪ್‌ಡೇಟ್ ಇರಲಿದ್ದು, ಹುಟ್ಟುಹಬ್ಬ ಮತ್ರಷ್ಟು ರಂಗೇರಲಿದೆ. ಇನ್ನು ಈಗಾಗಲೇ ಚಿತ್ರೀಕರಣ ಮುಕ್ತಾಯಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಘೋಸ್ಟ್ ಚಿತ್ರದ ವಿಶೇಷ ವಿಡಿಯೊ 'ಬಿಗ್ ಡ್ಯಾಡಿ' ಸಹ ನಾಳೆ ಬಿಡುಗಡೆಯಾಗಲಿದ್ದು, ಈ ಕಾರ್ಯಕ್ರಮ ಸದ್ಯ ಶಿವ ರಾಜ್‌ಕುಮಾರ್ ಅಭಿಮಾನಿಗಳಲ್ಲಿ ಕಿಕ್ ಹೆಚ್ಚಿಸಿದೆ.

ghost celebration

ಹೌದು, ಈ ಕಾರ್ಯಕ್ರಮವನ್ನು ಬೆಂಗಳೂರಿನ ಕೆ ಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರ ಸಂತೋಷ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಈ ಕುರಿತು ಚಿತ್ರದ ನಿರ್ದೇಶಕ ಶ್ರೀನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. "ಲೆಜೆಂಡರಿ ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಬೆಳಗ್ಗೆ 11.15ಕ್ಕೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ನಮ್ಮ ಚಿತ್ರದ ಥ್ರಿಲ್ಲಿಂಗ್ ಬಿಗ್ ಡ್ಯಾಡಿ ವಿಡಿಯೊವನ್ನು ಬಿಡುಗಡೆಯಾಗಲಿದೆ. ಈ ವಿಡಿಯೊವನ್ನು ಸ್ವತಃ ಶಿವ ರಾಜ್‌ಕುಮಾರ್ ಅವರೇ ಅನಾವರಣಗೊಳಿಸಲಿದ್ದು, ಈ ಮಹಾ ಕಾರ್ಯಕ್ರಮಕ್ಕೆ ಎಲ್ಲಾ ಅಭಿಮಾನಿಗಳು ಬರಬೇಕು ಎಂದು ಆಹ್ವಾನಿಸುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದರು.

ಹೀಗೆ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಸಂತೋಷ್ ಚಿತ್ರಮಂದಿರದ ಮುಂದೆ ಇಂದೇ ಘೋಸ್ಟ್ ಚಿತ್ರದ ಕಟ್‌ಔಟ್‌ಗಳನ್ನು ನಿಲ್ಲಿಸಲಾಗಿದೆ. ವೇದ ಚಿತ್ರದ ಬಳಿಕ ಕೆಜಿ ರಸ್ತೆಯಲ್ಲಿ ಶಿವಣ್ಣನ ಕಟ್ಔಟ್ ರಾರಾಜಿಸುತ್ತಿದೆ. ಇನ್ನು ಘೋಸ್ಟ್ ಬಿಗ್ ಡ್ಯಾಡಿ ವಿಡಿಯೊ ಬಿಡುಗಡೆ ಕಾರ್ಯಕ್ರಮ ಮಾತ್ರವಲ್ಲದೇ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಶಿವಣ್ಣನ ಅಭಿಮಾನಿಗಳು ನಾಳೆ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದು, ಅವುಗಳ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

* ಬೆಳಗ್ಗೆ 9.30ರಿಂದ ಸಂತೋಷ್ ಚಿತ್ರಮಂದಿರದ ಮುಂದೆ ಸೆಲೆಬ್ರೇಷನ್ ಆರಂಭಗೊಳ್ಳಲಿದೆ.

* ಸಂತೋಷ್ ಚಿತ್ರಮಂದಿರದಲ್ಲಿ ಶಿವರಾಜ್‌ಕುಮಾರ್ ಮ್ಯಾಷ್‌ಅಪ್ ಎಡಿಟ್ ವಿಡಿಯೊ ಪ್ರದರ್ಶಿಸಲಾಗುತ್ತದೆ.

* ಶಿವರಾಜ್‌ಕುಮಾರ್ ಅವರ ಹಳೇ ಚಿತ್ರಗಳ ಹಾಡುಗಳನ್ನು ಪ್ರದರ್ಶಿಸಲಾಗುತ್ತದೆ.

* ಇನ್ನು ಮಧ್ಯರಾತ್ರಿ ಶಿವ ರಾಜ್‌ಕುಮಾರ್ ಸ್ವಗೃಹದಲ್ಲಿ ಕೇಕ್ ಕತ್ತರಿಸಿ ಸಿಡಿಮದ್ದು ಸಿಡಿಸಿ ಹುಟ್ಟುಹಬ್ಬ ಆಚರಣೆ ಮಾಡಲು ತೀರ್ಮಾನಿಸಲಾಗಿದೆ.

More from Filmibeat

English summary
Ghost movie big daddy video release and Shivarajkumar birthday complete plans. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X