Shivarajkumar Birthday: ಶಿವಣ್ಣನ ಹುಟ್ಟುಹಬ್ಬಕ್ಕೆ ಘೋಸ್ಟ್ ಬಿಗ್ ಡ್ಯಾಡಿ ಸಿಡಿಪಿ ಬಿಡುಗಡೆ

ಜುಲೈ 12 ಬಂದೆಂತರೆ ಸಾಕು, ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಏಕೆಂದರೆ ಈ ದಿನದಂದು ಅವರ ನೆಚ್ಚಿನ ನಟನ ಹುಟ್ಟುಹಬ್ಬ. ಹೌದು, ನಾಳೆ ( ಜುಲೈ 12 ) ಹ್ಯಾಟ್ರಿಕ್ ಹೀರೊ 62ನೇ ವಸಂತಕ್ಕೆ ಕಾಲಿಡಲಿದ್ದಾರೆ.

ಹೀಗೆ ಶಿವಣ್ಣನ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದಿನಿಂದಲೇ ಅಭಿಮಾನಿಗಳು ಸಂಭ್ರಮ ಶುರುವಿಟ್ಟುಕೊಂಡಿದ್ದಾರೆ. ಇನ್ನು ಶಿವರಾಜ್‌ಕುಮಾರ್ ನಟಸಿ ಬಿಡುಗಡೆಗೆ ತಯಾರಾಗುತ್ತಿರುವ ಘೋಸ್ಟ್ ಚಿತ್ರತಂಡ ಶಿವ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷ ಸಿಡಿಪಿಯೊಂದನ್ನು ಬಿಡುಗಡೆ ಮಾಡಿದೆ.

shivarajkumar birthday cdp

ಘೋಸ್ಟ್ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಬಿಗ್ ಡ್ಯಾಡಿ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಹೆಸರಿನ್ನೇ ಬಳಸಿ ಕಾಮನ್ ಡಿಸ್‌ಪ್ಲೇ ಪಿಕ್ಚರ್ ಅನ್ನು ತಯಾರಿಸಲಾಗಿದೆ. ಶಿವ ರಾಜ್‌ಕುಮಾರ್ ಘೋಸ್ಟ್ ಚಿತ್ರದ ಸ್ಟಿಲ್ ಒಂದನ್ನು ಬಳಸಿ ಸಿಡಿಪಿಯ ಡಿಸೈನ್ ಮಾಡಲಾಗಿದ್ದು, "61ನೇ ಹುಟ್ಟುಹಬ್ಬದ ಶುಭಾಶಯಗಳು ಕರುನಾಡ ಚಕ್ರವರ್ತಿ ಡಾ ಶಿವಣ್ಣ, ಬಿಗ್ ಡ್ಯಾಡಿ" ಎಂದು ಬರಯಲಾಗಿದೆ.

ಕಿಂಗ್, ಲೀಡರ್ ಹಾಗೂ ಬಾಸ್ ಎಂಬ ಬರಹಗಳುಳ್ಳ ಬಾವುಟವನ್ನು ಹಾರಿಸುತ್ತಾ ಶಿವಣ್ಣನ ಸುತ್ತಲೂ ಅಭಿಮಾನಿ ಸಾಗರ ಸಂಭ್ರಮಿಸುತ್ತಿರುವ ಹಾಗೆ ಎಡಿಟ್ ಮಾಡಲಾಗಿದೆ. ಈ ಸಿಡಿಪಿಯನ್ನು ಘೋಸ್ಟ್ ಚಿತ್ರದ ನಿರ್ದೇಶಕ ಶ್ರೀನಿ ಹಾಗೂ ನಟಿ ಸಂಜನಾ ಆನಂದ್ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಬಿಡುಗಡೆ ಮಾಡಿದ್ದಾರೆ.

"ಮೊದಲು ಒಬ್ಬ ಅಭಿಮಾನಿಯಾಗಿ ಈಗ ನಿರ್ದೇಶಕನಾಗಿ ಕರುನಾಡಿನ ಚಕ್ರವರ್ತಿ ಡಾ:ಶಿವರಾಜ್ ಕುಮಾರ್ ಅವರ CDP ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ. ಈ 61 ವರ್ಷದಲ್ಲಿ 37 ವರ್ಷವನ್ನು ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಮೀಸಲಿಟ್ಟಿದ್ದೀರಿ..ಕನ್ನಡ ಚಲನಚಿತ್ರ ರಂಗಕ್ಕೆ ನಿಮ್ಮ ಕೊಡುಗೆ ಅಪಾರ.ನೂರ್ಕಾಲ ಹೀಗೆ ನಗುನಗುತ್ತಾ ಸಂತೋಷದಿಂದ ಇರಿ" ಎಂದು ಶ್ರೀನಿ ಟ್ವೀಟ್ ಮಾಡಿ ಸಿಡಿಪಿಯನ್ನು ಹಂಚಿಕೊಂಡಿದ್ದಾರೆ.

ಮೊನ್ನೆಯಷ್ಟೇ ಶ್ರೀನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಘೋಸ್ಟ್ ಚಿತ್ರದ ಅಪ್‌ಡೇಟ್ ಒಂದನ್ನು ಹಂಚಿಕೊಂಡಿದ್ದರು. ಬಿಗ್ ಡ್ಯಾಡಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದ ಶ್ರೀನಿ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಬೆಳಗ್ಗೆ 11.45ಕ್ಕೆ ಬಿಗ್ ಡ್ಯಾಡಿ ಸ್ಪೆಷಲ್ ವಿಡಿಯೊ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಟಿ ಸಿರೀಸ್ ಯುಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೊ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿತ್ತು. ಅದರಂತೆ ಇದೇ ಸಮಯಕ್ಕೆ ನಾಳೆ ಬಿಗ್ ಡ್ಯಾಡಿ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಸಂತೋಷ್ ಚಿತ್ರಮಂದಿರದಲ್ಲಿ ಈ ಬಿಗ್ ಡ್ಯಾಡಿ ವಿಡಿಯೊ ಬಿಡುಗಡೆಗೊಳ್ಳಲಿದೆ.

ಘೋಸ್ಟ್ ಬಿಗ್ ಡ್ಯಾಡಿ ವಿಡಿಯೊ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಚಿತ್ರತಂಡ ನಾಳೆ ಹಮ್ಮಿಕೊಂಡಿದ್ದು ಬೆಳಗ್ಗೆ 11.15ಕ್ಕೆ ಸ್ವತಃ ಶಿವ ರಾಜ್‌ಕುಮಾರ್ ಈ ವಿಡಿಯೊವನ್ನು ಬಿಡುಗಡೆ ಮಾಡಲಿದ್ದಾರೆ.

More from Filmibeat

English summary
Ghost movie team launched the Common DP for Shivarajkumar birthday. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X