Ghost: 'ನಾನು ನಂದಿನಿ' ಎಂದಿದ್ದ ವಿಕ್ಕಿಪಿಡಿಯಾ ವಿಕಾಸ್‌ಗೆ 'ಘೋಸ್ಟ್' ಶಿವಣ್ಣ ನರಸಿಂಹ ಸ್ಟೈಲ್‌ನಲ್ಲಿ ತಪರಾಕಿ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸಾಲು ಸಾಲು ಸಂದರ್ಶನಗಳಲ್ಲಿ ಶಿವಣ್ನ ಮಾತನಾಡುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಶ್ರೀನಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಅಕ್ಟೋಬರ್ 19ಕ್ಕೆ ದಸರಾ ಸಂಭ್ರಮದಲ್ಲಿ ತೆರೆಗಪ್ಪಳಿಸುತ್ತಿದೆ.
'ನಾನು ನಂದಿನಿ ಬೆಂಗಳೂರಿಗ್ ಬಂದಿನಿ' ಹಾಡಿನಿಂದ ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ವಿಕ್ಕಿಪಿಡಿಯಾ ವಿಕಾಸ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಗೊತ್ತೇತಿದೆ. ಈ ಹಾಡು ನಾನಾ ರೂಪದಲ್ಲಿ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ವಿಕಾಸ್ ಅಂಡ್ ಟೀಮ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. 'ನಾನು ನಂದಿನಿ' ಕ್ರೇಜ್ ಶಿವಣ್ಣವರೆಗೂ ಹೋಗಿ ತಲುಪಿದೆ. 'ಘೋಸ್ಟ್' ಸಿನಿಮಾ ಪ್ರಚಾರಕ್ಕಾಗಿ ವಿಕಾಸ್ ಜೊತೆ ಶಿವಣ್ಣ ಸ್ಪೆಷಲ್ ರೀಲ್ಸ್ ಮಾಡಿ ಕಾಣಿಸಿಕೊಂಡಿದ್ದಾರೆ.

'ಘೋಸ್ಟ್' ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆಗಿ ನಟಿಸಿರೋದು ಗೊತ್ತೇಯಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ. ವಿಕಾಸ್ ಜೊತೆ 'ಘೋಸ್ಟ್' ಟೀಂ ಸಣ್ಣ ಕಾಮಿಡಿ ಸ್ಕಿಟ್ ಮಾಡಿದೆ. ಶಿವಣ್ಣ ಖಡಕ್ ಲುಕ್‌ನಲ್ಲಿ ಟೀ ಕಪ್ ಹಿಡಿದು ಕುಳಿತಿರುತ್ತಾರೆ. ಎದುರಿಗೆ ವಿಕ್ಕಿ ಹಾಗೂ ಅಮಿತ್ ನಿಂತಿರುತ್ತಾರೆ. ನಿರ್ದೇಶಕ ಶ್ರೀನಿ 'ಬೆಳಗ್ಗೆ ನನಗೆ ಆವಾಜ್ ಹಾಕಿದ್ದು ಇವರೇ' ಎಂದು ಶಿವಣ್ಣನಿಗೆ ಕಂಪ್ಲೇಂಟ್ ಮಾಡುತ್ತಾರೆ.
ಬೆಳಗ್ಗೆ ಏನಾಯ್ತು ಅನ್ನೋದನ್ನು ಶಿವಣ್ಣನಿಗೆ ಹೇಳುತ್ತಾರೆ. ಆದರೆ ಶಿವಣ್ಣನನ್ನು ನೋಡುತ್ತಿದ್ದಂತೆ ವಿಕ್ಕಿ ಹಾಗೂ ಅಮಿತ್ ಸುಸ್ತಾಗಿರುತ್ತಾರೆ. 'ಜೈಲರ್' ಸಿನಿಮಾದಲ್ಲಿ ಶಿವಣ್ಣ ರಮ್ಯಾಕೃಷ್ಣಗೆ ಟಿಶ್ಯೂ ಕೊಟ್ಟಂತೆ ಇಲ್ಲಿ ವಿಕ್ಕಿ, ಅಮಿತ್‌ಗೆ ಕೊಡುದ್ದಾರೆ. ಹೆದರಿಕೊಂಡೇ ನಾವು ಹಾಗೆಲ್ಲಾ ಮಾಡಿಲ್ಲ ಎಂದು ಇಬ್ಬರು ವಿವರಣೆ ನೀಡುತ್ತಾರೆ. ಶಿವಣ್ಣ ಇಬ್ಬರಿಗೂ ಎಚ್ಚರಿಕೆ ಕೊಟ್ಟು ಕಳುಹಿಸುವಂತೆ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ನೋಡುಗರನ್ನು ನಗಿಸಲು ವಿಕಾಸ್ ಮತ್ತು ಅಮಿತ್ ಈ ರೀತಿ ಸಾಕಷ್ಟು ವಿಡಿಯೋಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಆದರೆ 'ನಾನು ನಂದಿನಿ' ಹಾಡು ದೊಡ್ಡಮಟ್ಟದಲ್ಲಿ ಗುರ್ತಿಸುವಂತೆ ಮಾಡಿಬಿಡ್ತು. ಅಲ್ಲಿಂದ ಮುಂದೆ ಇವರ ವಿಡಿಯೋಗಳು ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿದೆ. ಇದೀಗ 'ಘೋಸ್ಟ್' ಸಿನಿಮಾ ಪ್ರಚಾರಕ್ಕೂ ವಿಕಾಸ್ ಕೈ ಜೋಡಿಸಿದ್ದಾರೆ.
'ಘೋಸ್ಟ್' ಚಿತ್ರದಲ್ಲಿ ಶಿವಣ್ಣ 3 ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಬಲ್ ರೋಲ್ ಮಾಡಿದ್ದಾರಾ? ಎನ್ನುವ ಅನುಮಾನವೂ ಮೂಡಿದೆ. ಇನ್ನು 30 ವರ್ಷಗಳ ಹಿಂದಿನ ಲುಕ್‌ನಲ್ಲಿ ಅಭಿಮಾನಿಗಳಿಗೆ ಥ್ರಿಲ್ ಕೊಡೋಕೆ ಶಿವಣ್ಣ ಬರ್ತಿದ್ದಾರೆ. ಡೀ ಏಜಿಂಗ್ ತಂತ್ರಜ್ಞಾನ ಬಳಸಿ ಈ ರೀತಿ ಅವರನ್ನು ಯಂಗ್ ಲುಕ್‌ನಲ್ಲಿ ತೋರಿಸಲಾಗಿದೆ.
ಸಂದೇಶನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಘೋಸ್ಟ್' ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅನುಪಮ್ ಕೇರ್, ಜಯರಾಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ನಾಯಕಿ ಇಲ್ಲ. ಅಂದಹಾಗೆ ಶ್ರೀನಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸೀಕ್ವೆಲ್ ಮಾಡುವುದಾಗಿಯೂ ಶಿವಣ್ಣ ಈಗಾಗಲೇ ಹೇಳಿದ್ದಾರೆ. ಅಕ್ಟೋಬರ್ 18ರ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.
'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಸೆಂಚುರಿ ಸ್ಟಾರ್ ಅಕ್ಕಪಕ್ಕದ ಇಂಡಸ್ಟ್ರಿಯಲ್ಲೂ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಪರಭಾಷೆಯಲ್ಲಿ ನಟಿಸುವಂತೆ ಬೇಡಿಕೆ ಶುರುವಾಗಿದೆ. 'ಘೋಸ್ಟ್' ಸಿನಿಮಾವನ್ನು ಇದೀಗ ಬೇರೆ ಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ಭಾರೀ ನಿರೀಕ್ಷೆ ಶುರುವಾಗಿದೆ. ದಸರಾ ಸಂಭ್ರಮದಲ್ಲಿ ತೆಲುಗು, ತಮಿಳಿನ ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ 'ಘೋಸ್ಟ್' ಚಿತ್ರಕ್ಕೆ ಪೈಪೋಟಿ ಕೊಡುತ್ತಿವೆ.


Click it and Unblock the Notifications











