For Quick Alerts
  ALLOW NOTIFICATIONS  
  For Daily Alerts

  'ಗಿಮಿಕ್' ಚಿತ್ರದ ನಿರ್ಮಾಪಕ ದೀಪಕ್‌ ಸಾಮಿದೊರೈ ನಿಧನ

  |

  ಕನ್ನಡ ಚಿತ್ರರಂಗ ಮತ್ತೊಬ್ಬ ಕಲಾಬಂಧುವನ್ನು ಕಳೆದುಕೊಂಡಿದೆ. ಕನ್ನಡ ನಿರ್ಮಾಪಕ, ವಿತರಕ ದೀಪಕ್ ಸಾಮಿದೊರೈ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ತಿಳಿದು ಬಂದಿದೆ.

  ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ 'ಗಿಮಿಕ್' ಚಿತ್ರವನ್ನು ನಿರ್ಮಿಸಿದ್ದ ದೀಪಕ್‌ ಸಾಮಿದೊರೈ ಅವರು ಸಾವಿಗೆ ಚಿತ್ರರಂಗದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆನಂದ್ ಆಡಿಯೋ ಸಂಸ್ಥೆ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದೆ.

  ದೀಪಕ್ ಸಾಮಿದೊರೈ ಅವರ ನಿಧನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ದೀಪಕ್ ಅವರು ಸಾಮಿ ಪಿಕ್ಚರ್ಸ್ ಮತ್ತು ಸೌತ್‌ಸೈಡ್ ಸ್ಟುಡಿಯೋಗಳಲ್ಲಿ ನಿರ್ಮಾಪಕ ಹಾಗೂ ವಿತರಕರಾಗಿ ಕೆಲಸ ಮಾಡುತ್ತಿದ್ದರು.

  ನಾಗಣ್ಣ ನಿರ್ದೇಶನ ಮಾಡಿದ್ದ 'ಗಿಮಿಕ್' ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು. ಗಣೇಶ್, ರೋನಿಕಾ ಸಿಂಗ್, ಗುರುದತ್, ರವಿಶಂಕರ್ ಗೌಡ, ಶೋಭರಾಜ್, ಮಂಡ್ಯ ರಮೇಶ್, ಸುಂದರ್ ರಾಜ್, ವಿಜಯ್ ಚೆಂಡೂರ್ ಸೇರಿದಂತೆ ಹಲವರು ನಟಿಸಿದ್ದರು.

  ಕಳೆದ ಒಂದು ತಿಂಗಳಲ್ಲಿ ಸಿನಿಮಾ ಇಂಡಸ್ಟ್ರಿ ಅನೇಕ ಕಲಾವಿದರು, ಕಾರ್ಮಿಕರು, ತಂತ್ರಜ್ಞರನ್ನು ಕಳೆದುಕೊಂಡಿದೆ. ಕೊರೊನಾ ವೈರಸ್, ಹೃದಯಾಘಾತ ಹಾಗೂ ಇತರೆ ಕಾಯಿಲೆಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ.

  ಕೊರೊನಾ ಮೂರನೇ ಅಲೆ ಬಂದ್ರೆ ಮಕ್ಕಳು ತೊಂದರೆಗೀಡಾಗ್ತಾರೆ ಹುಷಾರ್!! | Filmibeat Kannada

  ಹಿರಿಯ ರಂಗಭೂಮಿ ಕಲಾವಿದ ಆರ್‌ಎಸ್ ರಾಜಾರಾಮ್, ಹಿರಿಯ ಚಿತ್ರ ಸಾಹಿತಿ ಶ್ರೀರಂಗ, ಖ್ಯಾತ ನಿರ್ಮಾಪಕ ರಾಮು, ಹಿರಿಯ ನಿರ್ದೇಶಕ ರೇಣುಕಾ ಶರ್ಮಾ, ನಟ ಶಂಖನಾದ ಅರವಿಂದ್, ಮೇಕಪ್ ಕಲಾವಿದ ಶ್ರೀನಿವಾಸ್, ಯುವ ನಿರ್ಮಾಪಕ ರಾಜಶೇಖರ್, ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಸೇರಿದಂತೆ ಹಲವರು ಕೆಲವು ದಿನಗಳಲ್ಲಿ ಕೊನೆಯುಸಿರೆಳೆದರು.

  English summary
  Samy Pictures Producer & Distributor Deepak Samidurai passed away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X