'ಗಿಣಿರಾಮ' ನ ಹೊಸ ಸಾಹಸ ಟೈಟಲ್ 'ಉತ್ಸವ': ಸೀರಿಯಲ್ ಮುಗಿತ್ತಿದ್ದಂತೆ ಸಿನಿಮಾ ಸವಾರಿ ಶುರು!
ಕಿರುತೆರೆ ವೀಕ್ಷಕರಿಗೆ 'ಗಿಣಿರಾಮ' ಸೀರಿಯಲ್ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಅದರ ನಾಯಕನ ಬಗ್ಗೆನೂ ಹೇಳಬೇಕಿಲ್ಲ. ಪ್ರತಿದಿನ ಧಾರಾವಾಹಿಗಳನ್ನು ನೋಡಿವವವರಿಗೆ ಈ ಸೀರಿಯಲ್ ಹೀರೊ ರಿತ್ವಿಕ್ ಮಠದ್ ಚೆನ್ನಾಗೇ ಗೊತ್ತಿದೆ. ಇದೇ ನಟ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
'ಗಿಣಿರಾಮ' ಧಾರಾವಾಹಿ ಮುಗಿಯುತ್ತಿದ್ದಂತೆ ರಿತ್ವಿಕ್ ಮಠದ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಂತ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದೇ ಮೊದಲೇನಲ್ಲ. 'ಗಿಣಿರಾಮ' ಬಳಿಕ ಒಂದರ ಹಿಂದೊಂದು ಸಿನಿಮಾ ಸುದ್ದಿಗಳು ಹೊರಬರುತ್ತಿರೋದು ಇದೇ ಮೊದಲು.

ಈ ಧಾರಾವಾಹಿಯ ನಟನ ಹೊಸ ಸಿನಿಮಾಗೆ ಟೈಟಲ್ ಸಿಕ್ಕಿದೆ. ಅದಕ್ಕೆ 'ಉತ್ಸವ' ಅಂತ ಹೆಸರಿಟ್ಟಿದ್ದಾರೆ. ಈಗಾಗಲೇ ಈ ಸಿನಿಮಾ ಶೂಟಿಂಗ್ ಕೂಡ ಮಾಡಲಾಗಿದೆ. ಹೀಗಾಗಿ ಧಾರಾವಾಹಿಯಲ್ಲಿ ಸಖತ್ ಮನರಂಜನೆ ನೀಡಿದ ಹೀರೊ ಈಗ ಸಿನಿಮಾದಲ್ಲಿ ಹೇಗೆ ಎಂಟರ್‌ಟೈನ್ ಮಾಡುತ್ತಾರೆ ಅನ್ನೋದೇ ಪ್ರಶ್ನೆ.
ಕನ್ನಡ ಸಿನಿಮಾಗಳು ದೇಶದಾದ್ಯಂತ ತಲುಪುತ್ತಿವೆ. ಈ ಬೆನಲ್ಲೇ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆಗೆ ಮುಖ ಮಾಡಿದರೆ. ಇತ್ತ ಹೊಸಬರು ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ಸಿಗುತ್ತಿದೆ. ಈ ಭರಾಟೆಯಲ್ಲಿ ರೂಪಗೊಂಡಿರುವ ಹೊಸಬರ ಸಿನಿಮಾಗೆ ಉತ್ಸವ ಎಂಬ ಟೈಟಲ್ ಇಡಲಾಗಿದೆ.
ನಾಗೇಂದ್ರ ಅರಸ್ ಸೇರಿದಂತೆ ಹಲವು ನಿರ್ದೇಶಕರ ಗರಡಿಯಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ದುಡಿದಿರೋ ಅರುಣ್ ಸೂರ್ಯ ಉತ್ಸವದ ನಿರ್ದೇಶಕ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಯುವ ನಿರ್ದೇಶಕರ ಆಗಮನವಾಗುತ್ತಿದೆ.
'ಉತ್ಸವ' ಸದ್ದಿಲ್ಲದೆ ಶೂಟಿಂಗ್ ಮುಗಿಸಿದ್ದಾರೆ. ಗಿಣಿರಾಮ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ ನಾಯಕ. ಈಗಾಗಲೇ 'ಆ ಎರಡು ವರ್ಷಗಳು', 'ಗಿಫ್ಟ್ ಬಾಕ್ಸ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ನಿರ್ದೇಶಕರಿಗೆ ಮೂರನೇ ಸಿನಿಮಾ.
'ಉತ್ಸವ' ಹೀರೊಗೆ 'ಫೇಸ್ ಟು ಫೇಸ್' ಸಿನಿಮಾದ ಪೂರ್ವಿ ಜೋಷಿ ನಾಯಕಿ. ಇವರೊಂದಿಗೆ ನಾಗೇಂದ್ರ ಅರಸ್, ಪ್ರಕಾಶ್ ತುಮ್ಮಿನಾಡ್ ನಟಿಸಿದ್ದಾರೆ. ಇದೊಂದು ಅಪ್ಪಟ ಪ್ರೇಮಕಥೆ. ಉಷಾ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯ ಹಾಗೂ ಎಮಿನಲ್ ಮಹಮ್ಮದ್ ಟ್ಯೂನ್ ಹಾಕಿದ್ದಾರೆ. ಜಾವೀದ್ ಆಲಿ ಹಾಗೂ ಅಕಿಂತಾ ಕುಂಡು ಹಾಡುಗಳಿಗೆ ಧ್ವನಿ ನೀಡಿದ್ದಾರೆ.


Click it and Unblock the Notifications











