For Quick Alerts
  ALLOW NOTIFICATIONS  
  For Daily Alerts

  ಶ್ರುತಿ ಹುಟ್ಟುಹಬ್ಬ: ಗಿರಿಜಾ ಆಗಿದ್ದವರು ಶ್ರುತಿ ಆಗಿ ಖ್ಯಾತಿಗಳಿಸಿದ ರೋಚಕ ಪಯಣ ಇಲ್ಲಿದೆ

  |

  ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಅವರಿಗೆ ಇಂದು (ಸೆಪ್ಟಂಬರ್ 18) ಹುಟ್ಟುಹಬ್ಬದ ಸಂಭ್ರಮ. ಶ್ರುತಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಸಿನಿಮಾ ಗಣ್ಯರಿಂದ ಮತ್ತು ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  ಇಂದು ಹುಟ್ಟುಹಬ್ಬದ ವಿಶೇಷವಾಗಿ ಶ್ರುತಿ ತಿರುಪತಿ ತಿಮ್ಮನ ದರ್ಶನ ಪಡೆದಿದ್ದಾರೆ. ಶ್ರುತಿ ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ್ದು, ತಿಮ್ಮಪ್ಪನ ದರ್ಶನ ಮಾಡಿ ಧನ್ಯರಾಗಿದ್ದಾರೆ. ತಿರುಪತಿಗೆ ಭೇಟಿ ನೀಡಿದ ಸಂತಸವನ್ನು ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನ ನಟಿ ಶ್ರುತಿ ಇಬ್ಬರು ಅಮ್ಮಂದಿರು, ತಂದೆ ಮತ್ತು ಮಗಳು ಗೌರಿ ಜೊತೆ ಶ್ರುತಿ ತಿರುಪತಿಯಲ್ಲಿ ಕಾಲಕಳೆದಿದ್ದಾರೆ.

  ನಟಿ ಶ್ರುತಿ ಸುಮಾರು 3 ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. 1990ರಲ್ಲಿ ಶ್ರುತಿ ಮೊದಲ ಬಾರಿಗೆ ಕನ್ನಡದ ಬೆಳ್ಳಿ ಪರದೆಮೇಲೆ ಮಿಂಚುವ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದರು. ಅಲ್ಲಿಂದ ಶ್ರುತಿ ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಶ್ರುತಿ ಮೊದಲ ಹೆಸರು ಗಿರಿಜಾ. ಗಿರಿಜಾ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು ಬಳಿಕ ಶ್ರುತಿ ಆಗಿ ಪ್ರಸಿದ್ಧಿಗಳಿಸಿದರು.

  ಅಷ್ಟಕ್ಕೂ ಶ್ರುತಿ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದ್ದು ಮಲಯಾಳಂ ಸಿನಿಮಾರಂಗದಿಂದ. 1989ರಲ್ಲಿ ಸ್ವಂತಮ್ ಎನ್ನು ಕರುತಿ ಸಿನಿಮಾ ಮೂಲಕ ಶ್ರುತಿ ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡರು. ಬಳಿಕ ನಂಬಿದರೆ ನಂಬಿ ಬಿಟ್ಟರೆ ಬಿಡಿ ಎನ್ನವ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಈ ಸಿನಿಮಾ ಬಳಿಕ ಶ್ರುತಿ 1990ರಲ್ಲಿ ಬಂದ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾ ಮೂಲಕ ನಾಯಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು.

  ಅಂದಹಾಗೆ ಶ್ರುತಿ ಎನ್ನುವ ಹೆಸರನ್ನು ಖ್ಯಾತ ನಿರ್ಮಾಪಕ ದ್ವಾರಕಿಶ್ ನೀಡಿದರು. ಅಲ್ಲಿಂದ ಗಿರಿಜಾ ಶ್ರುತಿಯಾಗಿ ಪ್ರಖ್ಯಾತಿಗಳಿಸಿದರು. ಬಳಿಕ ಶ್ರುತಿ ಎನ್ನುವ ಸಿನಿಮಾದಲ್ಲಿಯೂ ನಟಿಸಿದರು. ಈ ಸಿನಿಮಾ ಶ್ರುತಿ ವೃತ್ತಿ ಬದುಕಿಗೆ ಮತ್ತಷ್ಟು ಮೈಲೇಜ್ ತಂದುಕೊಟ್ಟಿತು. ಆನಂತರ ಶ್ರುತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಸ್ಯಾಂಡಲ್ ವುಡ್ ನ ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡರು. ಬಳಿಕ ಸ್ಯಾಂಡಲ್ ವುಡ್ ನಿಂದ ತೆಲುಗು ಮತ್ತು ತಮಿಳು ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟರು.

  ಕನ್ನಡದಲ್ಲಿ ಸಿ ಬಿ ಐ ಶಿವ, ಸಿಂಧೂರ ತಿಲಕ, ಮಿಡಿದ ಹೃದಯಗಳು, ಮುದ್ದಿನ ಮಾವ, ತುಂಬಿದ ಮನೆ, ಕರ್ಪೂರದ ಗೊಂಬೆ, ತವರಿನ ತೊಟ್ಟಿಲು, ಸೂರಪ್ಪ, ಗೌಡ್ರು, ರಾಮ ಶ್ಯಾಮ ಬಾಮ, ಪುಟ್ಟಕ್ಕನ ಹೈವೆ ಸೇರಿದಂತೆ ಅನೇಕ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದಿಗೂ ನಟಿ ಶ್ರುತಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ಶ್ರುತಿ ಸದ್ಯ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಮತ್ತು ಧನಂಜಯ್ ನಟನೆಯ ರತ್ನನ್ ಪ್ರಪಂಚ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ ಇನ್ನು ಕೊನೆಯದಾಗಿ ಶ್ರುತಿ ಆಕ್ಟ್ 1978 ಸಿನಿಮಾದಲ್ಲ ನಟಿಸಿದ್ದರು.

  ಸಿನಿಮಾ ಜೊತೆಗೆ ನಟಿ ಶ್ರುತಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದರು. ಬಿಗ್ ಬಾಸ್ ಕನ್ನಡ-3ನಲ್ಲಿ ಶ್ರುತಿ ಭಾಗಿಯಾಗಿದ್ದರು, ಅಷ್ಟೆಯಲ್ಲ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಸಿನಿಮಾ ಜೊತೆಗೆ ಶ್ರುತಿ ರಾಜಕೀಯದಲ್ಲೂ ಸಕ್ರೀಯರಾಗಿದ್ದಾರೆ. 2008ರಿಂದ ಶ್ರುತಿ ಭಾರತೀಯ ಜನತಾ ಪಾರ್ಟಿಯಲ್ಲಿದ್ದಾರೆ.

  English summary
  Girija was named Shruti by the actor-director Dwarakish.
  Saturday, September 18, 2021, 15:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X