twitter
    For Quick Alerts
    ALLOW NOTIFICATIONS  
    For Daily Alerts

    ಜಯಂತ್ ಕಾಯ್ಕಿಣಿ ಕಥೆಗೆ ದೃಶ್ಯ ರೂಪ ನೀಡುತ್ತಿದ್ದಾರೆ ಗಿರೀಶ್ ಕಾಸರವಳ್ಳಿ

    |

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ 7 ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡಲು ಹೊರಟಿದ್ದಾರೆ. 2012 ರಲ್ಲಿ ಬಿಡುಗಡೆಯಾದ 'ಕೂರ್ಮಾವತಾರ' ಬಳಿಕ ಯಾವ ಚಿತ್ರವನ್ನು ಗಿರೀಶ್ ಕಾಸರವಳ್ಳಿ ಶುರು ಮಾಡಿರಲಿಲ್ಲ.

    ಸಾಹಿತಿ ಜಯಂತ್ ಕಾಯ್ಕಿಣಿ ಬರೆದ 'ಹಾಲಿನ ಮೀಸೆ' ಕಥೆ ಆಧರಿಸಿ ಸಿನಿಮಾ ಮಾಡುವ ತಯಾರಿಯನ್ನು ಗಿರೀಶ್ ಕಾಸರವಳ್ಳಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಹೆಸರು ಸಹ ನಿರ್ಧಾರವಾಗಿದ್ದು, 'ಇಲ್ಲಿರಲಾರೆ ಅಲ್ಲಿಗೂ ಹೋಗಲಾರೆ' ಎಂದು ಶೀರ್ಷಿಕೆ ಇಡಲಾಗಿದೆ.

    ಕನ್ನಡ ಸಂಸ್ಕೃತಿಯನ್ನು ಡಬ್ಬಿಂಗ್ ಹಾಳು ಮಾಡುತ್ತದೆ ಎಂದ ನಿರ್ದೇಶಕ ಗಿರೀಶ್ ಕಾಸರವಳ್ಳಿಕನ್ನಡ ಸಂಸ್ಕೃತಿಯನ್ನು ಡಬ್ಬಿಂಗ್ ಹಾಳು ಮಾಡುತ್ತದೆ ಎಂದ ನಿರ್ದೇಶಕ ಗಿರೀಶ್ ಕಾಸರವಳ್ಳಿ

    ಗಿರೀಶ್ ಕಾಸರವಳ್ಳಿ ಹೊಸ ಸಿನಿಮಾಗೆ ಶಿವಕುಮಾರ ಬಂಡವಾಳ ಹಾಕುತ್ತಿದ್ದಾರೆ. ಕಾಯ್ಕಿಣಿ ಅವರ ಈ ಕಥೆ ಮುಂಬೈನಲ್ಲಿ ನಡೆಯುತ್ತಿದ್ದರೂ, ಅದನ್ನು ಕನ್ನಡಕ್ಕೆ ತಕ್ಕ ಹಾಗೆ ಕೆಲವು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆಯಂತೆ.

    Girish Kasaravalli Directing A New Movie Based On Jayanth Kaikinis Story

    ಸಪ್ಟೆಂಬರ್ ಎರಡನೇ ವಾರದಿಂದ 'ಇಲ್ಲಿರಲಾರೆ ಅಲ್ಲಿಗೂ ಹೋಗಲಾರೆ' ಚಿತ್ರದ ಚಿತ್ರೀಕರಣ ಪ್ರಾರಂಭ ಆಗುತ್ತಿದೆ. ಸದ್ಯ, ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೆಚ್ ಎಂ ರಾಮಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ.

    ಕನ್ನಡ ಚಿತ್ರರಂಗದ ಏಳಿಗೆ ಬಗ್ಗೆ ಗಿರೀಶ್ ಕಾಸರವಳ್ಳಿ ಮಾತುಕನ್ನಡ ಚಿತ್ರರಂಗದ ಏಳಿಗೆ ಬಗ್ಗೆ ಗಿರೀಶ್ ಕಾಸರವಳ್ಳಿ ಮಾತು

    ಈಗಾಗಲೇ, ಕನ್ನಡದ ಖ್ಯಾತ ಕಾದಂಬರಿಗಳನ್ನು ಪರದೆ ಮೇಲೆ ತಂದ ಕೀರ್ತಿ ಪಡೆದಿರುವ ಗಿರೀಶ್ ಕಾಸರವಳ್ಳಿ, ಈಗ ಕಾಯ್ಕಿಣಿ ಕಥೆಗೆ ದೃಶ್ಯ ರೂಪ ನೀಡುತ್ತಿದ್ದಾರೆ.

    English summary
    Girish Kasaravalli directing a movie based on Jayanth Kaikini's 'Haalina Meese' story.
    Wednesday, September 4, 2019, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X