For Quick Alerts
  ALLOW NOTIFICATIONS  
  For Daily Alerts

  ಮದುವೆ ವಿಚಾರವಾಗಿ ಮತ್ತೆ ಸುದ್ದಿಯಲ್ಲಿ ನಟ ದುನಿಯಾ ವಿಜಯ್!

  |

  ನಟ ದುನಿಯಾ ವಿಜಯ್‌ ಅವರ ಹೆಸರು ಮದುವೆ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದು ದುನಿಯಾ ವಿಜಯ್‌ ಅವರ ಅಪ್ಪಟ್ಟ ಅಭಿಮಾನಿಯ ಮದುವೆ ಸುದ್ದಿ. ಈ ಅಭಿಮಾನಿ ವಿಜಯ್‌ ಅವರ ಬಳಿ ವಿಶೇಷವಾದ ಬೇಡಿಕೆ ಇಟ್ಟಿದ್ದಾಳೆ.

  ಈಕೆಯ ಮದುವೆ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ನಟ ದುನಿಯಾ ವಿಜಯ್. ಅದು ಹೇಗೆ ಅಂದರೆ ದಾವಣಗೆರೆ ಮೂಲಕ ಈ ಯುವತಿ ನಟ ದುನಿಯಾ ವಿಜಯ್‌ ಅವರ ಅಪ್ಪಟ್ಟ ಅಭಿಮಾನಿ. ಹಾಗಾಗಿ ಅವರಿಗೆ ಮದುವೆ ಆಹ್ವಾನ ನೀಡಿದ್ದಾಳೆ.

  ದುನಿಯಾ ವಿಜಯ್‌ ಅವರಿಗೆ ಮದುವೆ ಆಹ್ವಾನ ನೀಡೋದು ಮಾತ್ರವಲ್ಲ, ಆಕೆ ದುನಿಯಾ ವಿಜಯ್‌ ಮದುವೆಗೆ ಬರಲೇಬೇಕು ಎಂದು ಪಟ್ಟು ಹಿಡಿದ್ದಾಳೆ.

  ದುನಿಯಾ ವಿಜಯ್‌ ಬಾರದೇ ತಾಳೀ ಕಟ್ಟಿಸಿಕೊಳ್ಳಲ್ಲ: ಅಭಿಮಾನಿ!

  ದುನಿಯಾ ವಿಜಯ್‌ ಬಾರದೇ ತಾಳೀ ಕಟ್ಟಿಸಿಕೊಳ್ಳಲ್ಲ: ಅಭಿಮಾನಿ!

  ದಾವಣಗೆರೆ ಮೂಲದ ಅನುಷಾ ಎಂಬ ಯುವತಿ ದುನಿಯಾ ವಿಜಯ್‌ ಅವರ ಅಭಿಮಾನಿ. ಹಾಗಾಗಿ ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಅವರು ಆಗಮಿಸಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಪಟ್ಟು ಹಿಡಿದಿದ್ದಾಳೆ.

  ಈ ಯುವತಿ ನಟ ದುನಿಯಾ ವಿಜಯ್​ ಬರುವವರೆಗೂ ತಾಳಿ ಕಟ್ಟಿಸಿ ಕೊಳ್ಳುವುದಿಲ್ಲ ಅಂತ ಹಠ ಹಿಡಿದಿದ್ದಾಳೆ. ತನ್ನ ಮದುವೆಗೆ ದುನಿಯಾ ವಿಜಯ್ ಅವರ ಆಶೀರ್ವಾದ ಬೇಕು ಎನ್ನುತ್ತಿದ್ದಾಳೆ. ಮದುವೆಗೆ ಯಾರು ಬರದಿದ್ದರೂ ತೊಂದರೆಯಿಲ್ಲ. ಆದರೆ, ದುನಿಯಾ ವಿಜಯ್ ಬರಲೇಬೇಕು. ಇಲ್ಲದಿದ್ದರೆ ಮದುವೆಯೇ ಆಗುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾಳೆ ಈ ಯುವತಿ.

  ಮನೆಗೆ 'ದುನಿಯಾ ಋಣ' ಎಂದು ನಾಮಕರಣ!

  ಮನೆಗೆ 'ದುನಿಯಾ ಋಣ' ಎಂದು ನಾಮಕರಣ!

  ಅಷ್ಟಕ್ಕೂ ಈ ಕುಟುಂಬದಲ್ಲಿ ಅನುಷಾ ಮಾತ್ರ ದುನಿಯಾ ವಿಜಯ್‌ ಅಭಿಮಾನಿ ಅಲ್ಲ. ಬದಲಿಗೆ ಅವರ ಇಡೀ ಕುಟುಂಬವೇ ದುನಿಯಾ ವಿಜಯ್ ಅಭಿಮಾನಿ. ಅವರ ಮನೆಗೆ 'ದುನಿಯಾ ಋಣ' ಎನ್ನುವ ಹೆಸರು ಇಟ್ಟಿದ್ದಾರೆ. ಐದು ವರ್ಷದ ಹಿಂದೆ ಮನೆ ಕಟ್ಟಿದ್ದು ಗೃಹ ಪ್ರವೇಶಕ್ಕೆ ನಟ ದುನಿಯಾ ವಿಜಯ್ ಬರಬೇಕೆಂದು ಆಗಲೂ ಮನೆಯನ್ನು ಹಾಗೆಯೇ ಬಿಟ್ಟಿದ್ದು. ನಂತರ ದುನಿಯಾ ವಿಜಯ್ ಅವರ ಮನೆಯ ಗೃಹ ಪ್ರವೇಶಕ್ಕೆ ಹೋಗಿದ್ದರು.

  ಇದೇ ನವೆಂಬರ್‌ 29ಕ್ಕೆ ಅನುಷಾ ಮದುವೆ!

  ಇದೇ ನವೆಂಬರ್‌ 29ಕ್ಕೆ ಅನುಷಾ ಮದುವೆ!

  ಶಿವಾನಂದ ಭಜಂತ್ರಿ ಅವರ ಪುತ್ರಿ ಅನುಷಾ. ಈಕೆಯ ವಿವಾಹವು ಸ್ವಗೃಹದಲ್ಲಿ ನವೆಂಬರ್‌ 29ರಂದು ನಡೆಯಲಿದೆ. ಪ್ರಕಾಶ್‌ ಎಂಬ ಯುವಕನ ಜೊತೆ ಮದುವೆ ನಿಶ್ಚಯವಾಗಿದೆ. ವಿವಾಹ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಫೋಟೊ ಪಕ್ಕ ನೆಚ್ಚಿನ ನಟ ದುನಿಯಾ ವಿಜಯ್ ಅವರ ಫೋಟೊವನ್ನು ಮುದ್ರಿಸಿದ್ದಾರೆ. ಜೊತೆಗೆ 'ಒಂಟಿ ಸಲಗ' ಎಂದು ತಮ್ಮ ಕೈಗೆ ಅನುಷಾ ಹಚ್ಚೆಯನ್ನೂ ಹಾಕಿಸಿಕೊಂಡಿದ್ದಾರೆ.

  ಅಭಿಮಾನಿಯ ಆಸೆ ಪೂರೈಸುತ್ತಾರಾ ದುನಿಯಾ ವಿಜಯ್!

  ಅಭಿಮಾನಿಯ ಆಸೆ ಪೂರೈಸುತ್ತಾರಾ ದುನಿಯಾ ವಿಜಯ್!

  ದುನಿಯಾ ವಿಜಯ್‌ ಅವರ ಅಪ್ಪಟ ಅಭಿಮಾನಿ ಅನುಷಾ ಅವರು ತಮ್ಮ ಮದುವೆಗೆ ನೆಚ್ಚಿನ ನಟ ಬರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ದುನಿಯಾ ವಿಜಯ್ ಅವರ ದಾರಿ ಕಾಯುತ್ತಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಅಭಿಮಾನಿಯ ಆಸೆಯನ್ನು ದುನಿಯಾ ವಿಜಯ್ ಪೂರ್ಣ ಮಾಡುತ್ತಾರ? ಅಭಿಮಾನಿ ಮದುವೆಗೆ ಹೋಗುತ್ತಾರಾ ಎನ್ನುವ ಕುತೂಹಲ ಹಟ್ಟಿಕೊಂಡಿದೆ.

  English summary
  Girl Refuse to get Married Until her Favorite Actor Duniya Vijay to Attend Her Wedding In Davanagere, Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X