For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಎಲ್ಲ ಸಿನಿಮಾಗಳ ಹೆಸರು ಪೋರಿಗೆ ಕಂಠಪಾಠ: ಬಾಲಕಿಗೆ ಶಭಾಷ್ ಎಂದ ಅಪ್ಪು

  |

  ಡಾ.ರಾಜ್‌ಕುಮಾರ್ ನಮ್ಮನ್ನು ಅಗಲಿ ಇಷ್ಟು ವರ್ಷವಾದರೂ ಅವರ ನೆನಪು ಇನಿತೂ ಮಾಸಿಲ್ಲ, ತಮ್ಮ ಸಿನಿಮಾಗಳ ಮೂಲಕ ಅವರಿನ್ನೂ ಕನ್ನಡಿಗರೊಟ್ಟಿಗೆ ಇದ್ದಾರೆಂಬುದಕ್ಕೆ ಸಾಕ್ಷ್ಯವಾಗುವ ಘಟನೆ ಇಲ್ಲಿದೆ.

  ರಾಜ್‌ಕುಮಾರ್ ಅಗಲಿದ ಮೇಲೆ ಜನಿಸಿದ ಪುಟ್ಟ ಬಾಲಕಿಯೊಬ್ಬರು ರಾಜ್‌ಕುಮಾರ್ ಸಿನಿಮಾಗಳಿಂದ ಪ್ರೇರಿತಳಾಗಿ ಅಣ್ಣಾವ್ರ ಎಲ್ಲ ಸಿನಿಮಾಗಳ ಹೆಸರನ್ನು ಕಂಠಪಾಠ ಮಾಡಿ ಕೇವಲ ಮೂರೇ ನಿಮಿಷದಲ್ಲಿ 206 ಸಿನಿಮಾಗಳ ಹೆಸರನ್ನು ಒಂದೂ ಬಿಡದೆ ಹೇಳುತ್ತಾಳೆ.

  ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶ್ರೀ. ಈಶ್ವರ್ ಮುದುಗೊಣ್ಣನವರ್ ಅವರ ಮಗಳು 06 ವರ್ಷದ ಶ್ರೀಷಾಗೆ ಅಣ್ಣಾವ್ರ ಸಿನಿಮಾಗಳು ಕಂಠಪಾಠ. ಶ್ರೀಷಾ ತಾಯಿ ಹೇಳುವ ಪ್ರಕಾರ ರಾಜ್‌ಕುಮಾರ್ ಅವರ 'ಎರಡು ನಕ್ಷತ್ರ', 'ಬಂಗಾರದ ಪಂಜರ' ಸಿನಿಮಾಗಳನ್ನು ನೋಡಿ ಸ್ಪೂರ್ತಿಗೊಂಡು ರಾಜ್‌ಕುಮಾರ್ ಅವರ ಎಲ್ಲ ಸಿನಿಮಾಳ ಹೆಸರನ್ನು ಕಂಠಪಾಠ ಮಾಡಿದ್ದಾಳೆ. ಈಕೆಗೆ ತಾಯಿಯೇ ಗುರು.

  ಸಿನಿಮಾದ ಹೆಸರು ಹೇಳುವುದು ಮಾತ್ರವಲ್ಲ ಕರ್ನಾಟಕದ ಇತಿಹಾಸದ ಬಗೆಗಿನ ಯಾವುದೇ ಪ್ರಶ್ನೆಗಳಿಗೆ ಮತ್ತು ಸುಮಾರು 6,000 ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ತಡವರಿಸದೆ ಉತ್ತರಿಸುವ ಹಾಗೂ ಸುಮಾರು 1,008 ಶ್ಲೋಕಗಳನ್ನು ನಿರರ್ಗಳವಾಗಿ ಹೇಳುವಂತಹ ಪ್ರತಿಭಾವಂತೆ.

  ಬಾಲಕಿ ಶ್ರೀಷಾಳ ಪ್ರತಿಭೆ ಗುರುತಿಸಿರುವ ಮಧುರೈ ವಿಶ್ವವಿದ್ಯಾಲಯ ವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆಯಂತೆ.

  ಪ್ರತಿಭಾವಂತ ಬಾಲಕಿ ಶ್ರೀಷಾ ತನ್ನ ಪೋಷಕರೊಟ್ಟಿಗೆ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದು ಪುನೀತ್ ರಾಜ್‌ಕುಮಾರ್ ಎದುರಿಗೆ ಅವರ ತಂದೆಯವರ ಎಲ್ಲ ಸಿನಿಮಾಳ ಹೆಸರನ್ನು ಪಟ-ಪಟನೇ ಹೇಳಿ ಅಪ್ಪುಗೆ ಆಶ್ಚರ್ಯ ತಂದಿದ್ದಾರೆ.

  ಬಾಲಕಿಯ ನೆನಪಿನ ಶಕ್ತಿ ನೋಡಿ ಸಂತೋಷಪಟ್ಟ ಪುನೀತ್ ಬಾಲಕಿಗೆ ಹಾಗೂ ಅವರ ಪೋಷಕರಿಗೆ ಅಭಿನಂದಿಸಿದ್ದಾರೆ. ಬಾಲಕಿ ಶಿಕ್ಷಣ, ಶಾಲೆ ಇನ್ನಿತರೆ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಬಾಲಕಿಗೆ ಆಶೀರ್ವದಿಸಿ, ಹಾರೈಸಿ ಕಳಿಸಿದ್ದಾರೆ.

  English summary
  Girl Shrisha stuns Puneeth Rajkumar by telling all Dr Rajkumar movie names in just 3 minutes. Puneeth congratulated the girl and her parents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X