ರಾಕಿಂಗ್ ಸ್ಟಾರ್ ಗೆ ಆವಾಜ್ ಹಾಕಿದ ರಾಧಿಕಾ ಪಂಡಿತ್
Recommended Video
ನಟಿ ರಾಧಿಕಾ ಪಂಡಿತ್ ತಮ್ಮ ಪತಿ, ರಾಕಿಂಗ್ ಸ್ಟಾರ್ ಯಶ್ ಗೆ ಆವಾಜ್ ಹಾಕಿದ್ದಾರೆ. ಇದು 'ಗಿರ್ಮಿಟ್' ಸಿನಿಮಾದಲ್ಲಿ.
ಸಂಗೀತ ನಿರ್ದೇಶಕ ರವಿ ಬಸ್ರೂರ್ 'ಗಿರ್ಮಿಟ್' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮಕ್ಕಳ ಕಮರ್ಷಿಯಲ್ ಸಿನಿಮಾವಾಗಿದೆ. ಸಿನಿಮಾದ ಡಬ್ಬಿಂಗ್ ಟ್ರೇಲರ್ ಇಂದು (ಅಕ್ಟೋಬರ್ 19) ಬಿಡುಗಡೆಯಾಗಿದೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್ ಸಿನಿಮಾಗೆ ಡಬ್ ಮಾಡಿದ್ದಾರೆ.
ಪುಟ್ಟ ನಾಯಕ ಹಾಗೂ ನಾಯಕಿಗೆ ಟ್ರೇಲರ್ ನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಧ್ವನಿಯಾಗಿದ್ದಾರೆ. ಇಲ್ಲಿ ರಾಧಿಕಾ ಪಂಡಿತ್ ಗೆ ಯಶ್ ಡೈಲಾಗ್ ಹೊಡೆದರೆ, ಯಶ್ ಗೆ ರಾಧಿಕಾ ಆವಾಜ್ ಹಾಕಿದ್ದಾರೆ. ಯಶ್ ಹಾಗೂ ರಾಧಿಕಾ ಡೈಲಾಗ್ ಹೇಳುವ ಶೈಲಿ ಸಖತ್ ಆಗಿದೆ.

ಟ್ರೇಲರ್ ನಲ್ಲಿ ಬರುವ ಸಂಭಾಷಣೆಗಳು ಚೆನ್ನಾಗಿವೆ. ಮಕ್ಕಳ ಬಾಯಲ್ಲಿ ಮಾಸ್ ಡೈಲಾಗ್ ಕೇಳುವುದು ಮಜಾವಾಗಿವೆ. ಸಿನಿಮಾ ಟ್ರೇಲರ್ ನಲ್ಲಿ ಹೊಸತನ ಕಾಣುತ್ತಿದೆ. ಟ್ರೇಲರ್ ಗೆ ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಎನ್ ಎಸ್ ರಾಜ್ ಕುಮಾರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಪುನೀತ್ ರಾಜ್ ಕುಮಾರ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ.
ಆಶ್ಲೇಷ್ ರಾಜ್, ಶ್ಲಾಫ ಸಾಲಿಗ್ರಾಮ, ಆರಾಧ್ಯ ಶೆಟ್ಟಿ ಸೇರಿದಂತೆ ಸಾಕಷ್ಟು ಮಕ್ಕಳು ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮೋದ್ ಮರವಂತೆ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಕೆ ಆರ್ ಜಿ ಸ್ಟೂಡಿಯೋ ಸಿನಿಮಾವನ್ನು ವಿತರಣೆ ಮಾಡಲಾಗುತ್ತಿದೆ.


Click it and Unblock the Notifications











