5 ಭಾಷೆಗಳಲ್ಲಿ ಬರ್ತಿದೆ ರವಿ ಬಸ್ರೂರ್ ನಿರ್ದೇಶನದ 'ಗಿರ್ಮಿಟ್'
'ಕೆಜಿಎಫ್' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಸದ್ದು ಮಾಡಿತ್ತು. ಆ ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡಿದ್ದರು. ಆದರೆ, ಈಗ ರವಿ ಅವರ ನಿರ್ದೇಶನದ ಸಿನಿಮಾ ಕೂಡ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ.

ಮ್ಯೂಸಿಕ್ ಮಾತ್ರವಲ್ಲ ತಾನು ಒಬ್ಬ ಒಳ್ಳೆಯ ನಿರ್ದೇಶಕ ಎನ್ನುವುದನ್ನು ಈಗಾಗಲೇ ತಮ್ಮ 'ಕಟಕ' ಸಿನಿಮಾದಲ್ಲಿ ಅವರು ಸಾಬೀತು ಮಾಡಿದ್ದಾರೆ. ಆ ಚಿತ್ರದ ನಂತರ 'ಗಿರ್ಮಿಟ್' ಎಂಬ ಮತ್ತೊಂದು ಸಿನಿಮಾವನ್ನು ಅವರು ಶುರು ಮಾಡಿದ್ದಾರೆ.
'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಕೆಲಸದ ನಡುವೆಯೇ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಅವರ 'ಗಿರ್ಮಿಟ್' ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಇದೊಂದು ಮಕ್ಕಳ ಸಿನಿಮಾವಾಗಿದೆ.

'ಗಿರ್ಮಿಟ್' ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಪೋಸ್ಟರ್ ರಿಲೀಸ್ ಆಗಿದೆ. ನಾಳೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಹತ್ತಾರು ಮಕ್ಕಳು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
'ಗಿರ್ಮಿಟ್' ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ಮುಂದಿನ ತಿಂಗಳು ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











