For Quick Alerts
  ALLOW NOTIFICATIONS  
  For Daily Alerts

  ಮಗಳು ಆಯ್ರಾ ಸಾಧನೆ ಮಾಡಿದರೆ ಮಾತ್ರ ಗೌರವ ಕೊಡಿ ಎಂದ ಯಶ್

  |

  ರಾಕಿಂಗ್ ಸ್ಟಾರ್ ಯಶ್ ಇದೀಗ ಎರಡು ಮಕ್ಕಳ ಜವಾಬ್ದಾರಿಯುತ ತಂದೆ. ಕಷ್ಟದಲ್ಲಿ ಬೆಳೆದು ಬಂದಿರುವ ನಟ ಯಶ್, ಮಕ್ಕಳನ್ನ ಹೇಗೆ ಬೆಳೆಸಬೇಕು ಅಂತ ಚೆನ್ನಾಗಿ ಅರಿತಿರುವಂತಿದೆ. ಅದಕ್ಕೆ ಸಾಕ್ಷಿ ಯಶ್ ಆಡಿರುವ ಮಾತುಗಳು.

  ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ನಟ ಯಶ್ ಭಾಗಿಯಾಗಿದ್ದರು. ಅಲ್ಲಿ, ಪುತ್ರಿ ಆಯ್ರಾ ಬಗ್ಗೆ ಕೇಳಿದಾಗ, ''ಎಲ್ಲಾದರೂ ಹೋದರೆ ಮಕ್ಕಳ ಬಗ್ಗೆ ಕೇಳುತ್ತಾರೆ. ಕೆಲವರು ಆಯ್ರಾನ ನೋಡೋಕೆ ಮನೆಯವರೆಗೂ ಹುಡುಕಿಕೊಂಡು ಬರುತ್ತಾರೆ'' ಅಂತ ಖುಷಿಯಿಂದ ನಟ ಯಶ್ ಹೇಳುತ್ತಿದ್ದರು.

  ಅದೇ ಸಮಯದಲ್ಲಿ ಅಲ್ಲಿ ನೆರೆದಿದ್ದ ಜನತೆ ''ಆಯ್ರಾ.. ಆಯ್ರಾ..'' ಅಂತ ಕೂಗಲು ಆರಂಭಿಸಿದರು. ಆಗ ''ಜೀವನದಲ್ಲಿ ಯಾವತ್ತೂ ಇಂತಹ ತಪ್ಪು ಮಾಡಬೇಡಿ. ಅವರಾಗಿಯೇ ಏನಾದರೂ ಸಾಧಿಸಿದರೆ ಗೌರವ ಕೊಡಿ. ಯಾರದ್ದೋ ಮಕ್ಕಳು ಅಂತ ಯಾವತ್ತೂ ಗೌರವ ಕೊಡಬೇಡಿ. ಅವರೇನು ಕೆಲಸ ಮಾಡ್ತಾರೆ ಅಂತ ನೋಡಿ ಗೌರವ ಕೊಡಿ. ನನ್ನ ಮಗಳು ಬೆಳೆದು ದೊಡ್ಡವಳಾಗಿ ಸಾಧನೆ ಮಾಡಿದರೆ ಗೌರವ ಕೊಡಿ. ಅಲ್ಲಿಯವರೆಗೂ ಎಲ್ಲಾ ಮಕ್ಕಳು ಒಂದೇ. ಪ್ರೀತಿ ತೋರಿಸಿ ಸಾಕು'' ಅಂತ ನಟ ಯಶ್ ಹೇಳಿದರು.

  ನಟ ಯಶ್ ರವರ ಈ ಮಾತಿಗೆ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾಯಿತು. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಶ್ ಮಾತಿನಿಂದ ಅವರ ಮೇಲಿದ್ದ ಸಿನಿ ಪ್ರಿಯರ ಪ್ರೀತಿ ಗೌರವ ಇನ್ನೂ ಹೆಚ್ಚಾಗಿದೆ.

  ಅಂದ್ಹಾಗೆ, ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಆಯ್ರಾ ಎಂಬ ಮುದ್ದಾದ ಹೆಣ್ಣು ಮಗಳು ಜನಿಸಿದ್ದಳು. ಈ ವರ್ಷ ಗಂಡು ಮಗುವನ್ನ ದಂಪತಿ ಬರಮಾಡಿಕೊಂಡರು.

  Read more about: yash ಯಶ್
  English summary
  Give respect to Ayra only when she achieves something says Kannada Actor Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X