'ಕಾಂತಾರ- 1' ಸ್ಪ್ಯಾನಿಷ್, ಇಂಗ್ಲೀಷ್‌ ವರ್ಷನ್‌ಗಳಲ್ಲಿ ಕೂಡ ಕನ್ನಡ, ತುಳು ಕಂಪು ಯಾಕೆ?

ಕನ್ನಡದ ಹೆಮ್ಮೆಯ 'ಕಾಂತಾರ- 1' ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಇದೀಗ ಸ್ಪ್ಯಾನಿಷ್ ಭಾಷೆಗೆ ಡಬ್ ಆಗಿ ಬಿಡುಗಡೆಗೆ ಸಜ್ಜಾಗಿದೆ. ಭಾರತದ ಸಿನಿಮಾವೊಂದು ಆ ಭಾಷೆಗೆ ಡಬ್ ಆಗಿ ತೆರೆಗಪ್ಪಳಿಸುತ್ತಿರುವುದು ಇದೇ ಮೊದಲು. ಅಂದಹಾಗೆ ಈಗ ಸ್ಪ್ಯಾನಿಷ್ ವರ್ಷನ್ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬಂದಿತ್ತು. ಇದೀಗ ಇಂಗ್ಲೀಷ್ ಹಾಗೂ ಸ್ಪ್ಯಾನಿಷ್ ಭಾಷೆಗೆ ಡಬ್ ಆಗಿ ವಿದೇಶಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಭಾರತದಲ್ಲಿ ಕೂಡ ಇಂಗ್ಲೀಷ್ ವರ್ಷನ್ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ. ಈಗಾಗಲೇ 800 ಕೋಟಿ ಕಲೆಕ್ಷನ್ ಮಾಡಿದ ಮಾಡಿ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಮುಂದೆ ಏನೆಲ್ಲಾ ದಾಖಲೆ ಬರೆಯುತ್ತದೆ ಎಂದು ಕಾದು ನೋಡಬೇಕಿದೆ.

Global Release for Kantara-1 Spanish and English Versions Honor Tulu and Kannada Roots

ಸ್ಪ್ಯಾನಿಷ್ ಭಾಷೆಯಲ್ಲಿ 'ಕಾಂತಾರ- 1' ಟ್ರೈಲರ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ನಿಮ್ಮ ಹೊಸ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ. "ಭಾರತದಲ್ಲಿ ಪ್ರಾರಂಭವಾದ ದೈವಿಕ ಸಾಹಸಗಾಥೆ... ಈಗ ಜಗತ್ತನ್ನೇ ಗೆಲ್ಲುತ್ತಿದೆ. ಅಕ್ಟೋಬರ್ 31 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ" ಎಂದು ಬರೆದು ಹೊಂಬಾಳೆ ಸಂಸ್ಥೆ ಪೋಸ್ಟ್ ಮಾಡಿದೆ. ಇನ್ನು ಟ್ರೈಲರ್‌ನಲ್ಲಿ ಕರಾವಳಿ ಕನ್ನಡ, ತುಳು ಭಾಷೆಯನ್ನು ಕೇಳಿ ಸಿನಿರಸಿಕರು ಹುಬ್ಬೇರಿಸಿದ್ದಾರೆ.

ಯಾವುದೇ ಭಾಷೆಗೆ ಸಿನಿಮಾ ಡಬ್ ಮಾಡಿದರೂ ಸಂಪೂರ್ಣವಾಗಿ ಎಲ್ಲಾ ಡೈಲಾಗ್‌ಗಳನ್ನು ಆ ಭಾಷೆಗೆ ಅನುವಾದ ಮಾಡುತ್ತಾರೆ. ಆದರೆ 'ಕಾಂತಾರ' ಸರಣಿ ಸಿನಿಮಾಗಳಲ್ಲಿ ಮೊದಲಿನಿಂದಲೂ ದೈವದ ನುಡಿಗಳು, ತುಳುವಿನಲ್ಲಿ ಬಂದ ವಿಚಾರ, ಜನಪದ ಹಾಡುಗಳು ತುಳುವಿನಲ್ಲೇ ಇತ್ತು. ಈಗ ಸ್ಪ್ಯಾನಿಷ್ ಹಾಗೂ ಇಂಗ್ಲೀಷ್ ವರ್ಷನ್‌ಗಳಲ್ಲಿ ಕೂಡ ಅದೇ ಇರಲಿದೆ.

ಬೆಂಗಳೂರಿನಲ್ಲಿ 'ಕಾಂತಾರ- 1' ಸುದ್ದಿಗೋಷ್ಠಿ ಮಾಡಿದಾಗ ಈ ಬಗ್ಗೆ ರಿಷಬ್ ಶೆಟ್ಟಿಗೆ ಪ್ರಶ್ನೆ ಎದುರಾಗಿತ್ತು. ನೂರಾರು ವರ್ಷಗಳ ಹಿಂದಿನ ಕಥೆ ಆಗಿರುವುದರಿಂದ ಇವತ್ತಿನ ಕನ್ನಡವನ್ನು ಬಳಸಿಕೊಂಡಿರುವುದು ಯಾಕೆ? ಬೇರೆ ಭಾಷೆಗಳಿಗೆ ಡಬ್ ಆಗಿದ್ದರೂ ತುಳು, ಕನ್ನಡ ಅಲ್ಲಲ್ಲಿ ಇರುವುದು ಯಾಕೆ? ಎಂದು ಕೇಳಿದ್ದ ಪ್ರಶ್ನೆಗೆ ಅವರು ಉತ್ತರಿಸಿದ್ದರು. "ಕರಾವಳಿ ಭಾಗದ ಕಥೆ, ತುಳುನಾಡಿನ ಕಥೆ. ಹಾಗಾಗಿ ಅಲ್ಲಿನ ಕನ್ನಡ, ತುಳು ಭಾಷೆಯನ್ನೇ ಬಳಸಿಕೊಂಡಿದ್ದೇವೆ. ಆ ಕಾಲದ ಕಥೆಯನ್ನು ಇವತ್ತಿನ ಕಾಲಕ್ಕೆ ಅರ್ಥವಾಗುವಂತೆ ಹೇಳಬೇಕು, ಮೊದಲಿಗೆ ಕುಂದಾಪುರ ಭಾಷೆಯಲ್ಲೇ ಹೇಳಿದ್ರೆ ಹೇಗೆ? ಅಂದುಕೊಂಡೆ, ಆದರೆ ಬಹಳ ಜನಕ್ಕೆ ಅರ್ಥವಾಗಲ್ಲ ಎಂದು ಸುಮ್ಮನಾದೆ. ಇವತ್ತಿನ ಜನರಿಗೆ ಅರ್ಥ ಮಾಡಿಸಲಿ ಸಿನಿಮ್ಯಾಟಿಕ್ ಲಿಬರ್ಟಿ ತಗೊಂಡಿದ್ದೀವಿ" ಎಂದಿದ್ದರು.

ಬೇರೆ ಭಾಷೆಗಳಲ್ಲಿ ತುಳು, ಕನ್ನಡ ಬಳಕೆ ಬಗ್ಗೆ ಮಾತನಾಡಿ "ಕಳೆದ ಬಾರಿ 'ಕಾಂತಾರ' ಚಿತ್ರ ಮಾಡಿದಾಗಲೂ ದೈವದ ನುಡಿಗಳು, ತುಳುವಿನಲ್ಲಿ ಬಂದ ವಿಚಾರಗಳು ಅಥವಾ ಜನಪದ ಹಾಡುಗಳಿರಬಹುದು ಎಲ್ಲವೂ ತುಳುವಿನಲ್ಲಿ ಇತ್ತು. ಇವತ್ತಿಗೂ ಇದೆ. ಇನ್ನು 50 'ಕಾಂತಾರ' ಚಿತ್ರಗಳು ಬಂದರೂ ತುಳು, ಮಂಗಳೂರು ಕನ್ನಡ ಅಥವಾ ಕರಾವಳಿ ಕನ್ನಡದಲ್ಲಿ ಇದ್ದರೆ ಹಂಗೆ ಇರುತ್ತದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ 'ಕಾಂತಾರ' ಯಾವ ಮೂಲದ ಕಥೆ ಎನ್ನುವುದು ಬದಲಾಗಲ್ಲ" ಎಂದು ರಿಷಬ್ ಮಾಹಿತಿ ನೀಡಿದ್ದರು.

ಒಟ್ಟಾರೆ ಸ್ಪ್ಯಾನಿಷ್ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ನೋಡುವವರು ಕೂಡ ಸಬ್‌ಟೈಟಲ್ಸ್ ಜೊತೆಗೆ ಕನ್ನಡ, ತುಳು ಭಾಷೆಯ ಡೈಲಾಗ್ಸ್, ಹಾಡುಗಳನ್ನು ಕೇಳಬೇಕು. ಆ ಮೂಲಕ ಕನ್ನಡ, ತುಳು ಭಾಷೆ ವಿದೇಶದ ಮೂಲೆ ಮೂಲೆಯಲ್ಲಿರುವ ಪ್ರೇಕ್ಷಕರನ್ನು ತಲುಪುತ್ತಿದೆ. ಇದು ನಿಜಕ್ಕೂ ಸಂತಸದ ಸಂಗತಿಯೇ ಸರಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X