'ನೀರ್ ದೋಸೆ'ಗಾಗಿ ಪ್ಲೇಟು ಬದಲಾಯಿಸಿದ ರಮ್ಯಾ
"ಚಿತ್ರಕಥೆ ತುಂಬಾ ಇಷ್ಟವಾಗಿದೆ. ಆದರೆ ಆ ಪಾತ್ರಕ್ಕೆ ತಮ್ಮ್ಮಿಂದ ಸಾತ್ವಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ತಾನು ಚಿತ್ರದಿಂದ ಹೊರಬರುತ್ತಿದ್ದೇನೆ" ಎಂದಿದ್ದರು ರಮ್ಯಾ. ಈಗ ಅವರು ಚಿತ್ರದಲ್ಲಿ ಅಭಿನಯಿಸುತ್ತಿರುವುದಾಗಿ ತಮ್ಮ ಟ್ವೀಟ್ ಮಾಡಿದ್ದಾರೆ.
ರಮ್ಯಾ ಅವರ ಮ್ಯಾನೇಜರ್ ಕೂಡ ಅವರು ನೀರ್ ದೊಸೆ ಚಿತ್ರದಲ್ಲಿ ಅಭಿನಯಿಸುತ್ತಿರುವ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಚಿತ್ರಕ್ಕಾಗಿ ರಮ್ಯಾಗೆ ಮುಂಗಡ ಹಣ ನೀಡರಲಿಲ್ಲವಂತೆ. ಬಳಿಕ ಮುಂಗಡ ಹಣ ನೀಡಲಾಗಿದೆ. ಹಾಗಾಗಿ ಈಗ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.
ಈ ಚಿತ್ರದಲ್ಲಿ ಅಭಿನಯಿಸಲು ರಮ್ಯಾ ಅವರಿಗೆ ರು.48 ಲಕ್ಷ ಸಂಭಾವನೆ ನೀಡಲಾಗುತ್ತಿದೆಯಂತೆ. ಈ ಹಿಂದೆ ರಮ್ಯಾ ಜೊತೆ ಸಿದ್ಲಿಂಗು ಚಿತ್ರ ನಿರ್ದೇಶಿಸಿದ್ದ ವಿಜಯ್ ಪ್ರಸಾದ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ನಿರ್ಮಾಪಕ ಸುಧೀಂದ್ರ. ಚಿತ್ರದ ಪಾತ್ರವರ್ಗದಲ್ಲಿ ದತ್ತಣ್ಣ ಹಾಗೂ ಭಾವನಾ ಅವರು ಇದ್ದಾರೆ.
ಫೆಬ್ರವರಿ 28ರಿಂದ ಚಿತ್ರೀಕರಣ ಆರಂಭವಾಗಲಿದ್ದು ಬೆಂಗಳೂರು, ಮಂಗಳೂರು ಹಾಗೂ ಸೂರತ್ಕಲ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ರಮ್ಯಾ ಅವರು ವೇಶ್ಯೆ ಪಾತ್ರ ಪೋಷಿಸುತ್ತಿದ್ದಾರೆ ಎನ್ನಲಾಗಿತ್ತು. ಈಗ ರಮ್ಯಾ ಪಾತ್ರವನ್ನು ಒಂಚೂರು ಬದಲಾಯಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












