»   » ಸುದೀಪ್ ಎಂಥ ಅದ್ಭುತ ಪಾತ್ರ ಮಾಡಿದ್ದಾರೆ; ರಮ್ಯಾ

ಸುದೀಪ್ ಎಂಥ ಅದ್ಭುತ ಪಾತ್ರ ಮಾಡಿದ್ದಾರೆ; ರಮ್ಯಾ

Posted By:
Subscribe to Filmibeat Kannada

ನಟಿ ಗೋಲ್ಡನ್ ಗರ್ಲ್ ರಮ್ಯಾ, ಸುದೀಪ್ ಅವರಿಗೆ 'ಕಂಗ್ರಾಟ್ಸ್' ಹೇಳಿದ್ದಾರೆ. ಸುದೀಪ್ ಹಾಗೂ ರಮ್ಯಾ ಇಬ್ಬರೂ ಕನ್ನಡಿಗರು, ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದವರು. ಇಬ್ಬರೂ ಕಿತ್ತಾಡಿಕೊಂಡವರು, ಮತ್ತೆ ಒಂದಾಗಿ ನಟಿಸಿದವರು. ಇಬ್ಬರೂ ಪರಸ್ಪರ ಹೊಗಳಿಕೆ, ತೆಗಳಿಕೆ ಎಲ್ಲವನ್ನೂ ಮಾಡಿ, ಕನ್ನಡದಲ್ಲಿ ಸುದೀಪ್ ಮತ್ತು ರಮ್ಯಾ ಎಂದರೇ 'ಒಂದೇ ತರಹ' ಅಟಿಟ್ಯೂಡ್ ಇರುವವರು ಎನಿಸಿಕೊಂಡವರು.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಕಿಚ್ಚ ಸುದೀಪ್ ನಟಿಸಿರುವ ಈಗ ತೆಲುಗು ಚಿತ್ರವನ್ನು ನೋಡಿದ್ದಾರೆ. ಅವರಿಗೆ ಚಿತ್ರ ಹಾಗೂ ಸುದೀಪ್ ಪಾತ್ರ ಪೋಷಣೆ ಎರಡೂ ಇಷ್ಟವಾಗಿದೆ. ಕಂಡಿದ್ದನ್ನು ನೇರವಾಗಿ ಹೇಳುವ ರಮ್ಯಾ ತಡಮಾಡದೇ ತಮ್ಮ ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದಾರೆ. ತಮಗನ್ನಿಸಿದ್ದನ್ನು ಈ ಕೆಳಗಿನಂತೆ ಟ್ವೀಟ್ ಮಾಡಿದ್ದಾರೆ ರಮ್ಯಾ...

"ಈಗಷ್ಟೇ ಈಗ ನೋಡ್ದೆ. ಸುದೀಪ್ ಎಂಥ ಅದ್ಭುತ ಪಾತ್ರ ಮಾಡಿದ್ದಾರೆ. ಕಂಗ್ರಾಜುಲೇಷನ್ಸ್" ಎಂಡು ಟ್ವೀಟ್ ಮಾಡಿದ್ದಾರೆ ರಮ್ಯಾ. ಈಗಾಗಲೇ ಸಾಕಷ್ಟು ಮಂದಿ ಚಿತ್ರರಂಗದ ಗಣ್ಯರು ಚಿತ್ರ ನೋಡಿ ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ರಜನಿಕಾಂತ್, ಸೂರ್ಯ, ಪ್ರಭಾಸ್, ಅಮಿತಾಬ್ ಬಚ್ಚನ್, ಪ್ರಿನ್ಸ್ ಮಹೇಶ್ ಬಾಬು, ಕಾರ್ತಿ, ವಿಜಯ್, ಹೀಗೆ ಬಹಳಷ್ಟು ಘಟಾನುಘಟಿ ಮೇರು ಕಲಾವಿದರು ಸುದೀಪ್ ಬೆನ್ನು ತಟ್ಟಿದ್ದಾರೆ.

ಇದೀಗ ನಟಿ ರಮ್ಯಾ ಕೂಡ ಸುದೀಪ್ ಪಾತ್ರದ (ನಟನೆ!?) ಬಗ್ಗೆ ಹೊಗಳಿದ್ದಾರೆ. ಆಶ್ಚರ್ಯವೆಂದರೆ ರಮ್ಯಾ ಮಾತಿನಲ್ಲಿ ವಿಶೇಷ ಅರ್ಥವೂ ಇದೆ. 'ಸುದೀಪ್ ಅದ್ಭುತವಾಗಿ ನಟಿಸಿದ್ದಾರೆ' ಎನ್ನುವ ಬದಲು 'ಸುದೀಪ್ ಎಂಥ ಅದ್ಭುತ ಪಾತ್ರ ಮಾಡಿದ್ದಾರೆ' ಎಂದಿದ್ದಾರೆ ರಮ್ಯಾ. ರಮ್ಯಾ ಏನನ್ನು, ಹೇಗೆ ಹೇಳಬೇಕೆಂಬುದು ಅವರಿಷ್ಟ. ಹಾಗೇ, ಅವರಿಗೆ ಯಾವುದನ್ನು ಹೇಗೆ ಹೇಳಬೇಕೆಂಬುದೂ ಗೊತ್ತಿದೆ. ಪಾತ್ರ ಅದ್ಭುತವೋ ಅಥವಾ ಸುದೀಪ್ ನಟನೆಯೋ...! ಆದರೆ 'ಕಂಗ್ರಾಟ್ಸ್' ಹೇಳಿದ್ದಾರೆ ಎಂಬುದು ವಿಶೇಷ.

ಅದಿರಲಿ, ಈಗ ಚಿತ್ರದ ನಾಯಕಿ ಸಮಂತಾ, ಸುದೀಪ್ ರನ್ನು ತಮ್ಮ ಹೀರೋ ಎಂದಿದ್ದಾರೆ. ಒಂದೇ ವರ್ಷದಲ್ಲಿ 5 ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಟಿ ಸಮಂತಾ ಹೀಗೆ ಹೇಳಿದ್ದು ಸಣ್ಣ ಮಾತೇನೂ ಅಲ್ಲ. ಇದೀಗ, ಕನ್ನಡದ ಗೋಲ್ಡನ್ ಗರ್ಲ್, ಸುದೀಪ್ಗ ಜೊತೆ ನಟಿಸಿರುವ ರಮ್ಯಾ ಕೂಡ ಸುದೀಪ್ ಪಾತ್ರದ ಬಗ್ಗೆ ಕೊಂಡಾಡಿದ್ದು ಅಚ್ಚರಿಯಲ್ಲವಾದರೂ ಸುದೀಪ್ ಅವರಿಗೆ ಎಕ್ಸ್ ಟ್ರಾ ಬೋನಸ್ ದೊರೆತಂತಾಗಿದೆ. (ಒನ್ ಇಂಡಿಯಾ ಕನ್ನಡ)

English summary
Kannada Actress, Golden Girl Ramya Tweeted that Kichcha Sudeep Acted in Fantastic Role in Telugu movie Eega. She mentioned 'Congratulations' to Kichcha Sudeep. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada