For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿಪರದೆ ಬೆಳಗಿದ ಕನ್ನಡದ ಚಿನ್ನದಂತಹ ಅಮ್ಮಂದಿರು

  By Rajendra
  |

  ಅಯ್ಯೋ ಅವರ ಕಾಲ ಮುಗೀತು ಇನ್ನೇನಿದ್ದರೂ ಅಮ್ಮನ ಪಾತ್ರಗಳೇ ಅವರ ಪಾಲಿಗೆ ಪರ್ಮನೆಂಟು ಎಂದು ಬಹಳಷ್ಟು ಮಂದಿ ಕಾಮೆಂಟ್ ಮಾಡುತ್ತಿರುತ್ತಾರೆ. ಆದರೆ ಅಮ್ಮನ ಪಾತ್ರಕ್ಕೆ ಜೀವತುಂಬ ಬೇಕಾದರೆ ಅದು ಎಲ್ಲರಿಗೂ ಸಾಧ್ಯವಾಗಲ್ಲ ಬಿಡಿ.

  ತಾಯ್ತನವನ್ನು ಅನುಭವಿಸಿ ನಟಿಸುವುದಿದೆಯಲ್ಲಾ ನಿಜಕ್ಕೂ ಅದೊಂದು ಸವಾಲಿನ ಕೆಲಸ. ಅದೆಷ್ಟೋ ಮಂದಿ ಪ್ರೇಕ್ಷಕರು ಸಿನಿಮಾ ನೋಡುತ್ತಾ ನೋಡುತ್ತಾ ತಾಯಿಯ ಪಾತ್ರದಲ್ಲಿ ತಮ್ಮ ತಾಯಿಯನ್ನು ಕಾಣುತ್ತಾ ಕಣ್ಣೀರಾಗುತ್ತಿರುತ್ತಾರೆ. ಅಯ್ಯೋ ನನಗೂ ಇಷ್ಟು ಮುದ್ದಾದ ತಾಯಿ ಇದ್ದಿದ್ದರೆ ಎಂದು ಹಂಬಲಿಸುತ್ತಾರೆ. [ಮದರ್ಸ್ ಡೇ ವಿಶೇಷ: ಚಿತ್ರರಂಗದ ಸ್ಟಾರ್ ತಾಯಿ ಮಕ್ಕಳು]

  ಈ ಜಗತ್ತಿನಲ್ಲಿ ಎಲ್ಲಾ ಕಡೆಗೆ ದೇವರು ಇರಲು ಸಾಧ್ಯವಿಲ್ಲ ಎಂಬ ಕಾರಣ ತಾಯಿಯನ್ನು ಸೃಷ್ಟಿಸಿದ ಎಂಬ ಮಾತಿದೆ. ತಾಯಿಗಿಂತ ದೇವರುಂಟೆ? ಮೇ.11ರಂದು ವಿಶ್ವ ಅಮ್ಮಂದಿರ ದಿನ. ಈ ಸುಸಂದರ್ಭದಲ್ಲಿ ತೆರೆಯ ಮೇಲೆ ಮಿನುಗಿದ, ಮಿನುಗುತ್ತಿರುವ 'ಕೆಲವು' ತಾಯಂದಿರ ಮೇಲೊಂದು ಇಣುಕು ನೋಟ ಬೀರೋಣ ಬನ್ನಿ.

  ಎಲ್ಲಾ ತಾಯಿ ಪಾತ್ರಗಳಿಗೆ ಆದರ್ಶ ಪಂಡರಿಬಾಯಿ

  ಎಲ್ಲಾ ತಾಯಿ ಪಾತ್ರಗಳಿಗೆ ಆದರ್ಶ ಪಂಡರಿಬಾಯಿ

  ಹೆಸರಾಂತ ತಾರೆ ಪಂಡರಿಬಾಯಿ ಅವರು ಅರುವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ತಮ್ಮನ್ನು ತಾವು ತೇಯ್ದರು. ಕನ್ನಡ ಚಿತ್ರರಂಗ ಅವರನ್ನು ಅಮ್ಮ ಎಂದೇ ಗುರುತಿಸುತ್ತದೆ. ಅವರು ನಾಯಕಿಯಾಗಿ ನಟಿಸಿ ಜನಮನಸೂರೆಗೊಂಡಷ್ಟೇ ಅಮ್ಮನಾಗಿಯೂ ಎಲ್ಲರ ಹೃದಯ ಗೆದ್ದಿದ್ದಾರೆ. ಎಲ್ಲ ತಾಯಿ ಪಾತ್ರಗಳಿಗೆ ಆದರ್ಶ ಎಂಬಂತೆ ಅಭಿನಯಿಸಿ ತಾಯಿಯ ಪಾತ್ರಕ್ಕೆ ಒಂದು ಘನತೆ, ಗೌರವ ತಂದುಕೊಟ್ಟ ಮಹಾನ್ ಕಲಾವಿದೆ.

  ಎಲ್ಲರ ಮುದ್ದಿನ ಮಮ್ಮಿ ಗಿರಿಜಾ ಲೋಕೇಶ್

  ಎಲ್ಲರ ಮುದ್ದಿನ ಮಮ್ಮಿ ಗಿರಿಜಾ ಲೋಕೇಶ್

  ಶೃಜನ್ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್ ಅವರು ತಾಯಿ ಪಾತ್ರಗಳನ್ನು ಅಷ್ಟೇ ಲೀಲಾಜಾಲವಾಗಿ ತೆರೆಯ ಮೇಲೆ ಪ್ರದರ್ಶಿಸಿದ್ದಾರೆ. ಅವರ ಸಹಜಾಭಿನಯ ಎಂಥಹವರ ಮನಸ್ಸನ್ನೂ ಕರಗಿಸಿಬಿಡುತ್ತದೆ.

  ಮಮತೆಯ ತಾಯಿಯಾಗಿ ಅರುಂಧತಿ ನಾಗ್

  ಮಮತೆಯ ತಾಯಿಯಾಗಿ ಅರುಂಧತಿ ನಾಗ್

  ಜೋಗಿ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ತಾಯಿಯಾಗಿ ಅರುಂಧತಿ ನಾಗ್ ಅವರ ಅಭಿನಯ ಅಮೋಘವಾಗಿತ್ತು. ತನ್ನ ಮಗನನ್ನು ಹುಡುಕುತ್ತಾ ಬಂದು ಕೊನೆಯುಸಿರೆಳೆಯುವ ತಾಯಿಯಾಗಿ ಎಲ್ಲರ ಕಣ್ಣಲ್ಲೂ ಕಂಬನಿ ಬರಿಸಿದ್ದರು ಅರುಂಧತಿ ನಾಗ್.

  ರೋಚಕ ಪಾತ್ರಗಳನ್ನು ಮರೆಸಿದ ಅಂಬಿಕಾ

  ರೋಚಕ ಪಾತ್ರಗಳನ್ನು ಮರೆಸಿದ ಅಂಬಿಕಾ

  ಅಂಬಿಕಾ ಎಂದರೆ ಚಿತ್ರರಸಿಕರಿಗೆ ನೆನಪಾಗುವುದು ಚಳಿಚಳಿ ತಾಳೆನು ಈ ಚಳಿಯಾ ಆಹಾ ಎಂಬ ಹಾಡು ಹಾಗೂ ಆ ಹಾಡಿನ ಹಸಿಬಿಸಿ ಸನ್ನಿವೇಶಗಳು. ಇದೇ ಅಂಬಿಕಾ ಅವರು ಮಲಯಾಳಂ ಚಿತ್ರಗಳಲ್ಲಿ ತಾಯಿಯಾಗಿ ಅಭಿನಯಿಸಿ ಪ್ರೇಕ್ಷಕರನ್ನು ಇನ್ನೊಂದು ಲೋಕಕ್ಕೆ ಕರೆದೊಯ್ದಿದ್ದಾರೆ.

  'ಮಮತೆಯ ಮಡಿಲು' ಗೀತಾ

  'ಮಮತೆಯ ಮಡಿಲು' ಗೀತಾ

  ಮಮತೆಯ ಮಡಿಲು ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಪತ್ನಿಯಾಗಿ ಅಭಿನಯಿಸಿದ ಗೀತಾ ಬಳಿಕ ಚಿತ್ರರಂಗದಲ್ಲಿ ತಾಯಿಯಾಗಿಯೂ ಅಭಿನಯಿಸಿದ್ದಾರೆ. ಪಾತ್ರ ಯಾವುದಾದರೂ ಸರಿ ತಾನು ಅದಕ್ಕೆ ಜೀವ ತುಂಬಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಗೀತಾ.

  ತಾಯಿಯಾಗಿ ವಿನಯಾ ಪ್ರಕಾಶ್ (ಪ್ರಸಾದ್)

  ತಾಯಿಯಾಗಿ ವಿನಯಾ ಪ್ರಕಾಶ್ (ಪ್ರಸಾದ್)

  ತಾಯಿ ಪಾತ್ರಗಳಿಗೆ ಹೇಳಿ ಮಾಡಿಸಿದ ಮುಖ ಎಂದರೆ ವಿನಯಾ ಪ್ರಕಾಶ್ ಅವರದು. ಕನ್ನಡಕ್ಕಿಂತಲೂ ಅವರು ತೆಲುಗು, ತಮಿಳು ಚಿತ್ರಗಳಲ್ಲಿ ತಾಯಿಯಾಗಿ ಮಿಂಚುತ್ತಿದ್ದಾರೆ. ಅವರು ಈಗ ಚಿತ್ರರಂಗದಲ್ಲಿ ಬೇಡಿಕೆಯುಳ್ಳ 'ತಾಯಿ'.

  ಕನ್ನಡ ಚಿತ್ರರಂಗದ ಹೊಸ ತಾಯಿ ಹರಿಣಿ

  ಕನ್ನಡ ಚಿತ್ರರಂಗದ ಹೊಸ ತಾಯಿ ಹರಿಣಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಜರಂಗಿ ಚಿತ್ರದಲ್ಲಿ ಹರಿಣಿ ಅವರು ತಾಯಿಯಾಗಿ ಅಭಿನಯಿಸಿದ್ದಾರೆ. ಅವರು ಈಗಷ್ಟೇ ತಾಯಿಯ ಪಾತ್ರ ಪೋಷಿಸಿದ್ದು ಇನ್ನು ಮುಂದೆ ಅವರಲ್ಲಿನ ತಾಯಿಯನ್ನು ಹೆಕ್ಕಿ ತೆಗೆಯುವಂತಹ ಪಾತ್ರಗಳು ಸಿಗಲಿ ಎಂದು ಆಶಿಸೋಣ.

  ಮಗನನ್ನು ಕಂಟ್ರೋಲ್ ಮಾಡುವ ತಾಯಿ ಲಕ್ಷ್ಮಿ

  ಮಗನನ್ನು ಕಂಟ್ರೋಲ್ ಮಾಡುವ ತಾಯಿ ಲಕ್ಷ್ಮಿ

  ಜೂಲಿ ಲಕ್ಷ್ಮಿ ಅವರು ತೆಲುಗು, ಮಲಯಾಳಂ ಚಿತ್ರಗಳಲ್ಲಿ ತಾಯಿಯಾಗಿ ಅದಾಗಲೆ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಇನ್ನೇನಿದ್ದರೂ ಅವರು ಕನ್ನಡ ಬೆಳ್ಳಿಪರದೆ ಮೇಲೆ ತಾಯಿಯಾಗಿ ಮಿನುಗಬೇಕಾಗಿದೆ.

  ಭಾವನಾತ್ಮಕವಾಗಿ ಗಮನಸೆಳೆದ ಭವ್ಯಾ

  ಭಾವನಾತ್ಮಕವಾಗಿ ಗಮನಸೆಳೆದ ಭವ್ಯಾ

  2004ರಿಂದಲೂ ಪೋಷಕ ಪಾತ್ರಗಳಲ್ಲಿ ಭವ್ಯಾ ಅವರು ಮಿಂಚುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಮ್ಮನಾಗಿ ಭಾವನಾತ್ಮಕವಾಗಿ ಪ್ರೇಕ್ಷಕರ ಮನಸ್ಸನ್ನು ತಟ್ಟಿದ್ದಾರೆ.

  ಸ್ಯಾಂಡಲ್ ವುಡ್ ಮಾಡರ್ನ್ ತಾಯಿ ರಮ್ಯಾಕೃಷ್ಣ

  ಸ್ಯಾಂಡಲ್ ವುಡ್ ಮಾಡರ್ನ್ ತಾಯಿ ರಮ್ಯಾಕೃಷ್ಣ

  ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕಿಚ್ಚ ಸುದೀಪ್ ಅವರ 'ಮಾಣಿಕ್ಯ' ಚಿತ್ರದಲ್ಲಿ ತಾಯಿಯಾಗಿ ರಮ್ಯಾಕೃಷ್ಣ ಅವರು ಎಲ್ಲರ ಕಣ್ಣರಳಿಸಿದ್ದಾರೆ. ಮಾಡರ್ನ್ ತಾಯಿಯಾಗಿ ಅವರು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

  English summary
  It is said that, God could not be everywhere, and therefore he made MOTHERS". Celebrate this Mothers Day with the best mothers on Sandalwood screen. Golden mothers on Kannada silver screen. Moms perfectly balance personal and professional life. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X