»   » ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್

ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಇಂದು(ಜುಲೈ2) ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳೊಂದಿಗೆ ಬರ್ತ್ ಡೇ ಸೆಲಬ್ರೇಷನ್ ನಲ್ಲಿ ಗಣೇಶ್ ತೊಡಗಿದ್ದಾರೆ.

ನಿನ್ನೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಆರ್ ಆರ್ ನಗರದ ಗಣೇಶ್ ನಿವಾಸಕ್ಕೆ ಆಗಮಿಸಿ, ತರಹೇವಾರಿ ಕೇಕ್ ತಂದು, ಪಟಾಕಿ ಸಿಡಿಸಿ, ಜೈಕಾರ ಕೂಗುತ್ತಾ ಸಂಭ್ರಮಿಸುತ್ತಿದ್ದಾರೆ. ಜೊತೆಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಗಣೇಶ್ ಎಲ್ಲರೂ ಮೆಚ್ಚುವಂತಹ ಒಂದು ಒಳ್ಳೆ ಕೆಲಸ ಮಾಡಿದರು.

ಗಣೇಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಚಮಕ್' ಟೀಸರ್

ಅಂದಹಾಗೆ, ಗಣೇಶ್ ಅವರ ಈ ವರ್ಷದ ಹುಟ್ಟುಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದ್ದು, ಆ ಸ್ಪೆಷಲ್ ಬರ್ತ್ ಡೇ ಯ ಹೈಲೈಟ್ಸ್ ಇಲ್ಲಿದೆ ಓದಿ...

ಅಭಿಮಾನಿಗಳ ದಿನ

ಗಣೇಶ್ ಹುಟ್ಟುಹಬ್ಬದ ಈ ದಿನವನ್ನು ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದಾರೆ. ನಿನ್ನೆ ರಾತ್ರಿಯಿಂದ ಬಂದಿರುವ ಅಭಿಮಾನಿಗಳನ್ನು ಅಕ್ಕರೆಯಿಂದ ಮಾತನಾಡಿಸಿ ಫೋಟೋ ಕೊಟ್ಟು ಕಳುಹಿಸುತ್ತಿದ್ದಾರೆ.

ಶಿಲ್ಪಾ ಗಣೇಶ್ ಭಾಗಿ

ಗಣೇಶ್ ಹುಟ್ಟುಹಬ್ಬದಲ್ಲಿ ಪತ್ನಿ ಶಿಲ್ಪ ಗಣೇಶ್ ಕೂಡ ಭಾಗಿಯಾಗಿ ವಿಶ್ ಮಾಡಿದರು. ಜೊತೆಗೆ ಗಣೇಶ್ ಮತ್ತು ಶಿಲ್ಪ ಜೋಡಿಯ ಫೋಟೋ ಇರುವ ವಿಶೇಷ ಕೇಕ್ ವೊಂದನ್ನು ಅಭಿಮಾನಿಗಳು ತಯಾರು ಮಾಡಿಸಿದ್ದರು.

ಪತಿ ಗಣೇಶ್ ಹುಟ್ಟುಹಬ್ಬಕ್ಕಾಗಿ ಪತ್ನಿ ಶಿಲ್ಪಾ ಮಾಡಿರುವ ಕೆಲಸ ಇದು.!

ಬಡ ಮಕ್ಕಳಿಗೆ ಬಟ್ಟೆ

ಗಣೇಶ್ ಹುಟ್ಟುಹಬ್ಬಕ್ಕೆ ಆಗಮಿಸಿದ ಎಲ್ಲ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಬಡ ಮಕ್ಕಳಿಗೆ ಬಟ್ಟೆ ಮತ್ತು ಬಡ ಹೆಂಗಸರಿಗೆ ಸೀರೆ ಕೊಟ್ಟು ಗಣೇಶ್ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಗಣೇಶ್ ಹುಟ್ಟುಹಬ್ಬಕ್ಕೆ 'ಆರೆಂಜ್' ಉಡುಗೊರೆ ಕೊಟ್ಟ ಪ್ರಶಾಂತ್ ರಾಜ್

ಹಬ್ಬದ ವಾತಾವರಣ

ಭಾನುವಾರ ಆಗಿರುವುದರಿಂದ ಬರ್ತ್ ಡೇ ಯಲ್ಲಿ ಅಭಿಮಾನಿಗಳ ಸಂಖ್ಯೆ ಅಧಿಕವಾಗಿದೆ. ಗಣೇಶ್ ಮನೆ ಮುಂದೆ ದೊಡ್ಡ ದೊಡ್ಡ ಕಟೌಟ್ ಗಳು ರಾರಾಜಿಸುತ್ತಿದೆ.

'ವೀಕೆಂಡ್ ವಿತ್ ರಮೇಶ್'

ಮುಖ್ಯವಾಗಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಗಣೇಶ್ ಹುಟ್ಟುಹಬ್ಬದ ಕ್ರೇಜ್ ಮತ್ತಷ್ಟು ಜೋರಾಗುವಂತೆ ಮಾಡಿದೆ. ಗಣೇಶ್ ಕಾರ್ಯಕ್ರಮದ ಸೆಟ್ ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ತಾಯಿ ಕಂಡಂತೆ ಗೋಲ್ಡನ್ ಸ್ಟಾರ್ ಗಣೇಶ್ ಅಂದು ಹೇಗಿದ್ದರು?

ಸಿನಿಮಾಗಳ ಸಂಭ್ರಮ

ಗಣೇಶ್ ಹುಟ್ಟುಹಬ್ಬದ ವಿಶೇಷವಾಗಿ 'ಮುಗುಳು ನಗೆ' ಸಿನಿಮಾದ ಒಂದು ಹಾಡಿನ ಟೀಸರ್ ರಿಲೀಸ್ ಆಗಲಿದೆ. 'ಚಮಕ್' ಚಿತ್ರದ ಟೀಸರ್ ಮತ್ತು 'ಆರೆಂಜ್' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಅಭಿಮಾನಿಗಳಿಗೆ ತುಂಬ ಇಷ್ಟ ಆಗಿದೆ.

English summary
Kannada Actor Golden Star Ganesh celebrates His 38th Birthday in his 'Ganapa' residence, RR nagar, Bengaluru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada