ಶ್ರೀಮುರಳಿ V/S ಗಣೇಶ್: ಸೆಪ್ಟಂಬರ್ ನಲ್ಲಿ ಬಾಕ್ಸ್ ಆಫೀಸ್ ವಾರ್
Recommended Video
ಗಲ್ಲಾಪೆಟ್ಟಿಗೆಯಲ್ಲಿ ಸ್ಟಾರ್ ನಟರ ಪೈಪೋಟಿ ಏನು ಹೊಸದೇನಲ್ಲ. ಅಪರೂಪಕ್ಕೊಮ್ಮೆ ದೊಡ್ಡ ಸಿನಿಮಾಗಳು ಒಟ್ಟಿಗೆ ಎಂಟ್ರಿ ಕೊಡುತ್ತವೆ. ಈಗ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಒಂದೆ ದಿನ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಶ್ರೀಮುರಳಿ ಅಭಿನಯದ ಬಹು ನಿರೀಕ್ಷೆಯ ಭರಾಟೆ ಮತ್ತು ಗಣೇಶ್ ಅಭಿನಯದ ಗೀತಾ ಸಿನಿಮಾ ಮುಂದಿನ ತಿಂಗಳು ಸೆಪ್ಟಂಬರ್ 27ಕ್ಕೆ ತೆರೆಗೆ ಬರುತ್ತಿವೆ. ಈಗಾಗಲೆ ಭರಾಟೆ ಚಿತ್ರತಂಡ ಸೆಪ್ಟಂಬರ್ 27ಕ್ಕೆ ತೆರೆಗೆ ಬರುವುದಾಗಿ ಈಗಾಗಲೆ ಅನೌನ್ಸ್ ಮಾಡಿದೆ.

ಜೊತೆಗೆ ಗೀತಾ ಸಿನಿಮಾ ಕೂಡ ಅದೆ ದಿನ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. 1981 ರಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯಿಸಿದ್ದ ಗೀತಾ ಚಿತ್ರದ ಹೆಸರನ್ನೆ ಮರುಬಳಕೆ ಮಾಡಿಕೊಂಡಿರುವುದು ಚಿತ್ರದ ಮೇಲಿನ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಟಾಕಿ ಭಾಗ ಮುಗಿಸಿ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಭರಾಟೆ ಚಿತ್ರತಂಡ. ಎರಡು ಚಿತ್ರಗಳು ಬಹು ನಿರೀಕ್ಷೆಯನ್ನು ಹುಟ್ಟುಹಾಕಿವೆ. ಆದ್ರೆ ಚಿತ್ರಾಭಿಮಾನಿಗಳ ಚಿತ್ತ ಯಾರಕಡೆ ಇರಲಿದೆ ಎನ್ನುವುದು ರಿಲೀಸ್ ಆದಮೇಲೆ ಗೊತ್ತಾಗಲಿದೆ.


Click it and Unblock the Notifications











