For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದ ನಟ ಗಣೇಶ್

  |

  ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಬಹುನಿರೀಕ್ಷೆಯ ಗಾಳಿಪಟ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಗಾಳಿಪಟ-2 ಸಿನಿಮಾದ ಚಿತ್ರೀಕರಣ ಸದ್ಯ ಕಜಕಿಸ್ತಾನದಲ್ಲಿ ನಡೆಯುತ್ತಿದೆ.

  ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಗಣಿ ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಪುತ್ರ ವಿಹಾನ್ ಫೋಟೋವಿರುವ ಗಾಳಿಪಟ ಹಾರಿಸಿ ಗಣೇಶ್ ಸಂಭ್ರಮಿಸಿದ್ದಾರೆ. ಈ ಸುಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಇವರೇ ನೋಡಿ ಭಟ್ಟರ ಎರಡನೇ ಗಾಳಿಪಟದ ನಾಯಕಿಯರುಇವರೇ ನೋಡಿ ಭಟ್ಟರ ಎರಡನೇ ಗಾಳಿಪಟದ ನಾಯಕಿಯರು

  ಗಣೇಶ್ ಜೊತೆ ನಟ ದಿಗಂತ್ ಮತ್ತು ಪವನ್ ಕುಮಾರ್ ಸಹ ಕಜಕಿಸ್ತಾನದಲ್ಲಿದ್ದಾರೆ. ಚಿತ್ರೀಕರಣ ನಡುವೆಯೂ ಜಾಲಿ ಮಾಡುತ್ತಿರುವ ಮೂವರ ಫೋಟೋಗಳು ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿದೆ. ಭಟ್ಟರ ಗಾಳಿಪಟ-2 ತಂಡ ಫೆಬ್ರವರಿ 3ನೇ ವಾರದಲ್ಲಿ ಕಜಕಿಸ್ತಾನಕ್ಕೆ ತೆರಳಿದ್ದಾರೆ. ವಿದೇಶ ನೆಲದಲ್ಲಿ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಮಾಡಲಾಗುತ್ತಿದೆ.

  ರೈತ ವಿರೋಧಿ ಯಶ್ ಗೆ ಧಿಕ್ಕಾರ ಎಂದ ಗ್ರಾಮಸ್ಥರು | Filmibeat Kannada

  ಚಿತ್ರದಲ್ಲಿ ಮೂವರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು, ಮರಾಠಿ ಹಾಗೂ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿರುವ ವೈಭವಿ ಶಾಂಡಿಲ್ಯ, ನಟಿ ಶರ್ಮಿಳಾ ಮಾಂಡ್ರೆ ಹಾಗೂ ಮಲಯಾಳಂ ಚೆಲುವೆ ಸಂಯುಕ್ತಾ ಮೆನನ್ ಗಾಳಿಪಟ 2 ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಸದ್ಯ ಕಜಕಿಸ್ತಾನದಲ್ಲಿರುವ ಸಿನಿಮಾತಂಡ ಚಿತ್ರೀಕರಣ ಮುಗಿಸಿ ಸದ್ಯದಲ್ಲೇ ವಾಪಸ್ ಆಗಲಿದ್ದಾರೆ.

  English summary
  Golden star Ganesh celebrates kite festival in Kazakhstan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X