ಗೋಲ್ಡನ್ ಸ್ಟಾರ್ ಗಣೇಶ್‌ಗೆ 42ನೇ ಹುಟ್ಟುಹಬ್ಬದ ಸಂಭ್ರಮ!

ಕನ್ನಡದ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಹುಟ್ಟು ಹಬ್ಬದ ಸಂಭ್ರಮ. ಇಂದು (ಜುಲೈ 2) ನಟ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಹುಟ್ಟು ಹಬ್ಬ ಅಂದರೆ, ಅವರ ಮನೆಯ ಮುಂದೆ ಅಭಿಮಾನಿಗಳು ಸೇರುವುದು ಸಹಜ.

ಆದರೆ, ಈ ಬಾರಿ ಅದಕ್ಕೆ ಅವಕಾಶವಿಲ್ಲ. ಈ ಬಾರಿಯೂ ನಟ ಗಣೇಶ್ ಅಭಿಮಾನಿಗಳ ಜೊತೆಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ಹುಟ್ಟು ಹಬ್ಬಕ್ಕೆ ಗಣೇಶ್ ಮನೆಯಲ್ಲಿ ಇರುವುದಿಲ್ಲ. ಆ ಕಾರಣಕ್ಕೆ ಅವರು ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡಿದ್ದಾರೆ.

ಇನ್ನು ಈ ಬಾರಿಯ ಹುಟ್ಟುಹಬ್ಬದ ಮೂಲಕ ನಟ ಗಣೇಶ್ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಹಾಗಿದ್ದರೆ ಈ ಬಾರಿಯ ಗಣೇಶ್ ಹುಟ್ಟು ಹಬ್ಬದ ವಿಶೇಷತೆ ಏನು ಎನ್ನವುದನ್ನು ಮುಂದೆ ಓದಿ...

'ಗಾಳಿಪಟ 2' ಹಾಡು ರಿಲೀಸ್!

'ಗಾಳಿಪಟ 2' ಹಾಡು ರಿಲೀಸ್!

ಗಣೇಶ್ ನಟಿಸಿ, ಯೋಗರಾಜ್ ಭಟ್ ನಿರ್ದೇಶಿಸಿರುವ 'ಗಾಳಿಪಟ 2' ಸಿನಿಮಾದ ಹೊಸ ಹಾಡೊಂದನ್ನು ಭಟ್ಟರು ಬಿಡುಗಡೆ ಮಾಡಿದ್ದು, ಅದೇ ಗಣೇಶ್ ಹುಟ್ಟುಹಬ್ಬಕ್ಕೆ ಭಟ್ಟರ ಕಡೆಯಿಂದ ಉಡುಗೊರೆಯಾಗಿದೆ. ಇದು ಈ ಚಿತ್ರದ ಮೆಲೋಡಿಯಸ್ ಟ್ರ್ಯಾಕ್. ಗಣೇಶ್ ನಟನೆಯ ಲವ್ ಸಾಂಗ್ ಎಂದರೆ, ತನ್ನ ಸೆಲೆಯಿಂದಲೇ ಗಮನ ಸೆಳೆದು ಬಿಡುತ್ತದೆ.

'ಗಾಳಿಪಟ 2' ನ್ಯೂ ಸಾಂಗ್!

'ಗಾಳಿಪಟ 2' ನ್ಯೂ ಸಾಂಗ್!

"ನಾನಾಡದ ಮಾತೆಲ್ಲವ ಕದ್ದಾಲಿಸು" ಎಂಬ ಈ ಹಾಡನ್ನು ಸೋನು ನಿಗಮ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಈ ಹಾಡಿನ್ನು ಜಯಂತ್ ಕಾಯ್ಕಿಣಿ ರಚಿಸಿದ್ದಾರೆ. "ಗಾಳಿಪಟ" ಮೊದಲ ಭಾಗದ "ಮಿಂಚಾಗಿ ನೀನು ಬರಲು" ಹಾಡು ಕೂಡ ಜಯಂತ್ ಕಾಯ್ಕಿಣಿ, ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್‌ನಲ್ಲಿ ಬಂದಿತ್ತು. ಆ ಹಾಡಿಗೆ ಭರ್ಜರಿ ಯಶಸ್ಸು ಕಂಡಿತ್ತು. ಈಗ 'ಗಾಳಿಪಟ 2' ಚಿತ್ರದ ಈ ಹಾಡು ಕೂಡ ಅದೇ‌ ರೀತಿ ಯಶಸ್ಸು ಕಾಣಲಿದೆ ಎಂಬುದು ಚಿತ್ರತಂಡದ ನಿರೀಕ್ಷೆ

ಗಣೇಶ್ ಕಾಮನ್ ಡಿಪಿ ರಿಲೀಸ್!

ಗಣೇಶ್ ಕಾಮನ್ ಡಿಪಿ ರಿಲೀಸ್!

ಇನ್ನು ನಟ ಗಣೇಶ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ರಿಲೀಸ್ ಆಗಿದೆ. ಸ್ಟಾರ್ ನಟರ ಹುಟ್ಟುಹಬ್ಬ ಅಂದರೆ ಕಾಮನ್ ಡಿಪಿ ಹೇಗೆ ಇರಲಿದೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅಂತೆಯೇ ಈಗ ಗಣೇಶ್ ಕಾಮನ್ ಡಿಪಿ ರಿಲೀಸ್ ಆಗಿದ್ದು, ವೈರಲ್ ಲಿಸ್ಟ್ ಸೇರಿದೆ. ಗಣೇಶ್ ಅಭಿನಯ ಸಿನಿಮಾ ಪೋಸ್ಟರ್ ಮತ್ತು ಗೋಲ್ಟನ್ ಸ್ಟಾರ್ ಈ ಕಾಮನ್ ಡಿಪಿಯಲ್ಲಿ ಹೈಲೈಟ್ ಆಗಿದೆ. ಇನ್ನು ಬಿಳಿ ಸೂಟ್ ತೊಟ್ಟು ಗೋಲ್ಡನ್ ಸ್ಟಾರ್ ಮಿಂಚಿದ್ದಾರೆ. ಜೊತೆಗೆ ಗಣೇಶ್ ಹುಟ್ಟುಹಬ್ಬಕ್ಕೆ ಸಿನಿಮಾ ತಾರೆಯರು ಮತ್ತು ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಅಭಿಮಾನಿಗಳಿಗೆ ಗಣೇಶ್ ಪತ್ರ!

ಅಭಿಮಾನಿಗಳಿಗೆ ಗಣೇಶ್ ಪತ್ರ!

ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಲ್ಲಿ ವಿಶೇಷವಾದ ಮನವಿಯನ್ನು ಮಾಡಿಕೊಂಡಿದ್ದಾರೆ. ಪತ್ರ ಬರೆಯುವ ಮೂಲಕ ಅಭಿಮಾನಿಗಳನ್ನು ಮನವಿ ಮಾಡಿದ್ದರು. ''ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕವೂ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲಿಯೂ ನನ್ನೊಂದಿಗೆ ಹೆಜ್ಜೆ ಹಾಕಿದ್ದೀರಿ. ನನ್ನ ಯಶಸ್ಸು ನಿಮ್ಮದೆ ಯಶಸ್ಸು ಎಂಬ ರೀತಿಯಲ್ಲಿ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತಿ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿ ಅಭಿಮಾನಕ್ಕೆ ನಾನು ಋಣಿ.'' ಎಂದಿದ್ದಾರೆ ಗಣೇಶ್.

More from Filmibeat

English summary
Golden Star Ganesh Celebrating 42nd Birthday, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X