twitter
    For Quick Alerts
    ALLOW NOTIFICATIONS  
    For Daily Alerts

    ಗೋಲ್ಡನ್ ಸ್ಟಾರ್ ಮನೆಯಲ್ಲಿಂದು ಸಂಭ್ರಮದ ದಿನ

    |

    ನಟ ಗಣೇಶ್ 'ಖುಷಿ ಖುಷಿಯಾಗಿ' ಅಂತ ಸಿನಿಮಾ ಮಾಡಿದ್ದರು. ಆದರೆ, ಗಣೇಶ್ ಮನೆಯಲ್ಲಿ ಈಗ ನಿಜವಾದ ಖುಷಿ ಮೂಡಿದ ದಿನ. ಕಾರಣ ಈ ದಿನ ಗಣೇಶ್ ಮಗಳು ಚಾರಿತ್ರ್ಯ ಹುಟ್ಟಿದ ದಿನ.

    ಹುಟ್ಟುಹಬ್ಬದ ವಿಶೇಷವಾಗಿ ಗಣೇಶ್ ತಮ್ಮ ಮಗಳ ಸಂತೋಷದ ಕ್ಷಣಗಳ ಫೋಟೋಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಾರಿತ್ರ್ಯಳ ನಾಲ್ಕು ಮುದ್ದಾದ ಫೋಟೋಗಳನ್ನು ಗಣೇಶ್ ಶೇರ್ ಮಾಡಿದ್ದಾರೆ. ಪುಟ್ಟ ಸೀರೆಯಲ್ಲಿ ಪುಟ್ಟ ಹುಡುಗಿಯನ್ನು ನೋಡುವುದೇ ಚೆಂದ.

    golden star ganesh celebrating her daughter charithriya birthday

    ಕನ್ನಡದ 8 ಸ್ಟಾರ್ ನಟರ ಮಕ್ಕಳು, ಅವರ ಹೆಸರುಗಳು ಕನ್ನಡದ 8 ಸ್ಟಾರ್ ನಟರ ಮಕ್ಕಳು, ಅವರ ಹೆಸರುಗಳು

    ಮಗಳ ಬಗ್ಗೆ ಬರೆದುಕೊಂಡಿರುವ ಅವರು ''ನೀನು ಈ ಜಗತ್ತಿಗೆ ಬಂದ ದಿನ ಎಂದಿಗೂ ನನ್ನ ಮೆಚ್ಚಿನ ದಿನ ಆಗಿರುತ್ತದೆ. ಹ್ಯಾಪಿ ಬರ್ತ್ ಡೇ ಚೆರ್ರಿ. ಡಾರ್ಲಿಂಗ್ ನೀನು ಎಂದಿಗೂ ನನ್ನ ಪ್ರೀತಿಯ ಪುಟ್ಟ ಹುಡುಗಿ. ದೇವರು ನಿನಗೆ ಒಳ್ಳೆಯದು ಮಾಡಲಿ.'' ಎಂದಿದ್ದಾರೆ.

    ಗಣೇಶ್ ಮಗಳ ಆಕ್ಟಿಂಗ್ ನೋಡಿದ್ರೆ ಥ್ರಿಲ್ ಆಗ್ತೀರಾ.! ಗಣೇಶ್ ಮಗಳ ಆಕ್ಟಿಂಗ್ ನೋಡಿದ್ರೆ ಥ್ರಿಲ್ ಆಗ್ತೀರಾ.!

    ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಗೆ ಆರತಿಗೆ ಮಗಳು ಚಾರಿತ್ರ್ಯ, ಕೀರ್ತಿಗೆ ಮಗ ವಿಹಾನ್ ಎನ್ನುವ ಹಾಗೆ ಇಬ್ಬರು ಮಕ್ಕಳಿದ್ದಾರೆ. ಚಾರಿತ್ರ್ಯ ಗಣೇಶ್ ದೊಡ್ಡ ಮಗಳಾಗಿದ್ದಾಳೆ. ಗಣೇಶ್ ಜೊತೆ 'ಚಮಕ್' ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಆಕೆ ನಟಿಸಿದ್ದರು.

    English summary
    Golden star Ganesh celebrating her daughter Charithriya's birthday. The posted Charithriya's beautiful photos and wished her.
    Wednesday, March 27, 2019, 8:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X