»   » ಏಪ್ರಿಲ್ 14 ರಿಂದ ಶುರುವಾಗಲಿದೆ ರಶ್ಮಿಕಾ ಜೊತೆ ಗಣೇಶ್ 'ಚಮಕ್'

ಏಪ್ರಿಲ್ 14 ರಿಂದ ಶುರುವಾಗಲಿದೆ ರಶ್ಮಿಕಾ ಜೊತೆ ಗಣೇಶ್ 'ಚಮಕ್'

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಬೆಡಗಿ ರಶ್ಮಿಕಾ ಮಂದಣ್ಣ, ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರೀಕರಣದಲ್ಲಿ ತೊಡಗಿಕೊಂಡಿರುವುದು ಗೊತ್ತೇ ಇದೆ. ಆದ್ರೆ ಟಾಲಿವುಡ್ ಮತ್ತು ಕಾಲಿವುಡ್ ನಿಂದಲೂ ಬಹು ಬೇಡಿಕೆ ಪಡೆಯುತ್ತಿರುವ ರಶ್ಮಿಕಾ ನಟಿಸುವ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಸ್ಯಾಂಡಲ್ ವುಡ್ ಸಿನಿ ಪ್ರಿಯರಲ್ಲಿ ಕಾಡುತ್ತಿತ್ತು. ಈ ಕ್ಯೂರಿಯಾಸಿಟಿಗೆ ಈಗ ಬ್ರೇಕ್ ಬಿದ್ದಿದೆ.[ಗಣೇಶ್ 'ಚಮಕ್‌' ಗೆ ಕಿರಿಕ್‌ ಹುಡುಗಿ ನಟಿ]

ಅಂದಹಾಗೆ ರಶ್ಮಿಕಾ ಮಂದಣ್ಣ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಚಮಕ್' ಚಿತ್ರದಲ್ಲಿ ನಟಿಸಲಿದ್ದು, ಈ ಚಿತ್ರಕ್ಕೆ ನಿನ್ನೆಯಷ್ಟೇ ಮುಹೂರ್ತ ನೆರವೇರಿದೆ.

ಸಿಂಪಲ್ ಸುನಿ ನಿರ್ದೇಶನದಲ್ಲಿ 'ಚಮಕ್'

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ಕಾಣಿಸಿಕೊಳ್ಳಲಿರುವ 'ಚಮಕ್' ಚಿತ್ರವನ್ನು ಸಿಂಪಲ್ ಸುನಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ನಿರ್ದೇಶಕ ಸಿಂಪಲ್ ಸುನಿ ಇದೇ ಮೊದಲ ಬಾರಿಗೆ ಗಣೇಶ್ ಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ 'ಚಮಕ್'.

ರೊಮ್ಯಾಂಟಿಕ್ ಕಾಮಿಡಿ 'ಚಮಕ್'

ನಿರ್ದೇಶಕ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿರುವ 'ಚಮಕ್' ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ.

ಹೊಸ ಗೆಟಪ್ ನಲ್ಲಿ ಗಣೇಶ್

ರಶ್ಮಿಕಾ ಮಂದಣ್ಣ ನಾಯಕಿ ಆಗಿ ಬಣ್ಣ ಹಚ್ಚಲಿರುವ 'ಚಮಕ್' ಚಿತ್ರದಲ್ಲಿ ಇದೇ ಪ್ರಪ್ರಥಮ ಬಾರಿಗೆ ಗಣೇಶ್ ಡಾಕ್ಟರ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಡಾಕ್ಟರ್ ಗಣೇಶ್ ಗೆ ಜೋಡಿ ಆಗುವ ರಶ್ಮಿಕಾ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದು ತಿಳಿದುಬಂದಿಲ್ಲ.

ಅರ್ಜುನ್ ಜನ್ಯಾ ಸಂಗೀತ

'ಚಮಕ್' ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ನೀಡಲಿದ್ದಾರೆ. ಇನ್ನೂ ಇತರೆ ತಾರಾಬಳಗದ ಬಗ್ಗೆ ಮಾಹಿತಿ ಬಿಟ್ಟುಕೊಡದ ನಿರ್ದೇಶಕ ಸಿಂಪಲ್ ಸುನಿ, ಏಪ್ರಿಲ್ 14 ರಿಂದ ಚಿತ್ರದ ಶೂಟಿಂಗ್ ಶುರುಮಾಡಲಿದ್ದಾರೆ.

English summary
Golden Star Ganesh and Rashmika Mandanna Starrer, Simple Suni Directorial 'Chamak' Movie Launched, Shootin from April 14th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada