»   » ಹೆಬ್ಬಾವಿನ ಜೊತೆ ಗೋಲ್ಡನ್ ಸ್ಟಾರ್ ಪುತ್ರನ ಚೆಲ್ಲಾಟ

ಹೆಬ್ಬಾವಿನ ಜೊತೆ ಗೋಲ್ಡನ್ ಸ್ಟಾರ್ ಪುತ್ರನ ಚೆಲ್ಲಾಟ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದೆಡೆ, ಮಳೆ ಹುಡುಗ ಮಾತ್ರ ಪತ್ನಿ ಶಿಲ್ಪ ಗಣೇಶ್ ಮತ್ತು ಮಕ್ಕಳ ಜೊತೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.

ಅದರಲ್ಲೂ ಹೆಬ್ಬಾವಿನ ಜೊತೆ ಗಣೇಶ್ ಮತ್ತು ಪುತ್ರ ವಿಹಾನ್ ಅವರು ಆಟವಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗಣೇಶ್ ಮಗನ ಧೈರ್ಯ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಹಾಗಿದ್ದರೇ, ಗಣೇಶ್ ಮತ್ತು ಫ್ಯಾಮಿಲಿ ಎಲ್ಲಿಗೆ ಹೋಗಿದ್ದಾರೆ. ಹೇಗಿದೆ ಅವರ ಹಾಲಿಡೇ ಟ್ರಿಪ್ ಅಂತ ಚಿತ್ರಗಳ ಸಮೇತ ಮುಂದೆ ನೀಡಲಾಗಿದೆ ನೋಡಿ......

ಹೆಬ್ಬಾವಿನ ಜೊತೆ ಚೆಲ್ಲಾಟ

ಹಾಲಿಡೇ ಎಂಜಾಯ್ ಮಾಡುತ್ತಿರುವ ನಟ ಗಣೇಶ್ ಮತ್ತು ಗಣೇಶ್ ಪುತ್ರ ವಿಹಾನ್ ಹೆಬ್ಬಾವಿನ ಜೊತೆ ಚೆಲ್ಲಾಟ ವಾಡಿದ್ದಾರೆ. ಗಣೇಶ್ ತಮ್ಮ ಕೊರಳಿಗೆ ಹೆಬ್ಬಾವನ್ನ ಸುತ್ತಿಕೊಂಡು ಫೋಸ್ ಕೊಟ್ಟಿದ್ದಾರೆ. ಈ ವೇಳೆ ಪುತ್ರ ವಿಹಾನ್ ಭಯವಿಲ್ಲದೆ ಹಾವಿನ ಜೊತೆ ಆಟವಾಡಿದ್ದಾರೆ.

ಕೊಲಂಬೊದಲ್ಲಿ ಗಣಿ ಫ್ಯಾಮಿಲಿ

ಸತತ ಚಿತ್ರೀಕರಣದಿಂದ ರಿಲ್ಯಾಕ್ಸ್ ಮೂಡ್ ಗೆ ಬಂದಿರುವ ಗಣೇಶ್ ಅವರು, ತಮ್ಮ ಕುಟುಂಬದ ಜೊತೆ ಶ್ರೀಲಂಕದ ಕೊಲಂಬೊಗೆ ಪ್ರವಾಸಕ್ಕೆ ಹೋಗಿದ್ದಾರೆ.

ವಿಡಿಯೋ: ಗೋಲ್ಡನ್ ಸ್ಟಾರ್ 'ಬಾಹುಬಲ'ಕ್ಕೆ ಉಘೇ.!

ಮೀನುಗಳಿಗೆ ಆಹಾರ ಹಾಕಿದ ವಿಹಾನ್

ಕೊಲೊಂಬೊದ ರೆಸಾರ್ಟ್ ವೊಂದರಲ್ಲಿ ಮೀನುಗಳಿಗೆ ಆಹಾರ ನೀಡುವಲ್ಲಿ ಗಣೇಶ್ ಅವರ ಪುತ್ರ ತಲ್ಲಿನರಾಗಿದ್ದಾಗ ಈ ಫೋಟೋ ಕ್ಲಿಕ್ಕಿಸಲಾಗಿದೆ.

ಮಕ್ಕಳ ಜೊತೆ ಗಣೇಶ್ ರಿಲ್ಯಾಕ್ಸ್

ಗಣೇಶ್ ಮತ್ತು ಪತ್ನಿ ಶಿಲ್ಪ ಗಣೇಶ್ ಜೊತೆಗೂಡಿ ತಮ್ಮ ಮಕ್ಕಳೊಂದಿಗೆ ಗೋಲ್ಡನ್ ಸ್ಟಾರ್ ಫುಲ್ ರಿಲ್ಯಾಕ್ಸ್ ಆಗುತ್ತಿದ್ದಾರೆ. ಸದ್ಯ, ಸಿಂಪಲ್ ಸುನಿ ನಿರ್ದೇಶನದ 'ಚಮಕ್' ಚಿತ್ರದಲ್ಲಿ ಅಭಿನಯಿಸುತ್ತಿರುವ ಗೋಲ್ಡನ್ ಸ್ಟಾರ್, ಪ್ರಶಾಂತ್ ರಾಜ್ ನಿರ್ದೇಶನದ 'ಆರೆಂಜ್' ಚಿತ್ರವನ್ನ ಆರಂಭಿಸಿದ್ದಾರೆ.

ಹೆಬ್ಬಾವಿನ ಜೊತೆ ಗೋಲ್ಡನ್ ಸ್ಟಾರ್ ಪುತ್ರನ ಚೆಲ್ಲಾಟ ವಿಡಿಯೋ ನೋಡಿ

English summary
Kannada Actor, Golden star Ganesh and his Family is Enjoying Holiday Trip at Colombo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada