»   » ಟ್ವಿಟ್ಟರ್ ನಲ್ಲಿ 'ನಮಸ್ಕಾರ ನಮಸ್ಕಾರ ನಮಸ್ಕಾರ' ಗಣೇಶ್

ಟ್ವಿಟ್ಟರ್ ನಲ್ಲಿ 'ನಮಸ್ಕಾರ ನಮಸ್ಕಾರ ನಮಸ್ಕಾರ' ಗಣೇಶ್

Posted By:
Subscribe to Filmibeat Kannada

ಕೋಟ್ಯಾಂತರ ಅಭಿಮಾನಿಗಳಿಗೆ ತಮ್ಮ ಸ್ಟಾರ್ ನಟರನ್ನು ಭೇಟಿ ಮಾಡಿ, ಮಾತನಾಡುವ ಕನಸು. ಆದ್ರೆ ಅದೆಷ್ಟು ಜನಕ್ಕೆ ತಾನೆ ಅದು ಈಡೇರುತ್ತೆ ಹೇಳಿ. ಎಲ್ಲರಿಗೂ ಸ್ಟಾರ್ ಗಳು ಅಷ್ಟು ಸುಲಭವಾಗಿ ಸಿಕ್ಕಲ್ಲ. ಸಿಕ್ಕಿದರೂ, ಮಾತನಾಡುವುದು ಅಷ್ಟು ಸುಲಭವಲ್ಲ!

ಹೀಗಿದ್ದರೂ, ಅಭಿಮಾನಿಗಳ ಮನಸ್ಸು ನೋಯಿಸಬಾರದು ಅನ್ನುವ ಕಾರಣಕ್ಕೆ ಬಹುತೇಕ ಸ್ಟಾರ್ ಗಳು ಫೇಸ್ ಬುಕ್, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫ್ಯಾನ್ಸ್ ಜೊತೆ ಒಡನಾಟ ಇಟ್ಟುಕೊಂಡಿರುತ್ತಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಸೂಪರ್ ಸ್ಟಾರ್ ರಜನಿಕಾಂತ್ ರಿಂದ ಹಿಡಿದು ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್....ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ತಮ್ಮ ಫ್ಯಾನ್ಸ್ ಜೊತೆ ಕನೆಕ್ಟ್ ಆಗುವುದು ಟ್ವಿಟ್ಟರ್ ನಲ್ಲಿ. ನಮ್ಮ ಗಾಂಧಿನಗರದವರಲ್ಲಿ, ಕಿಚ್ಚ ಸುದೀಪ್, ದರ್ಶನ್, ಜಗ್ಗೇಶ್, ಹರ್ಷಿಕಾ ಪೂಣಚ್ಚ ಟ್ವಿಟ್ಟರ್ ನಲ್ಲಿ ತುಂಬಾ ಸಕ್ರಿಯ.

ganesh

ಇದೇ ಲಿಸ್ಟ್ ಗೆ ಇದೀಗ ಲೇಟೆಸ್ಟ್ ಎಂಟ್ರಿ ಕೊಡುತ್ತಿರುವವರು ನಿಮ್ಮೆಲ್ಲರ ಪ್ರೀತಿಯ ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್. ಚಿತ್ರರಂಗಕ್ಕೆ ಎಂಟ್ರಿಕೊಟ್ಟು ವರ್ಷಗಳೇ ಉರುಳಿದರೂ, ಗಣಿ ಇಲ್ಲಿಯವರೆಗೂ ಒಂದು ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿರಲಿಲ್ಲ. (ಗಣೇಶ್ ಹೆಸರಲ್ಲಿ ಅನೇಕ ಅಕೌಂಟ್ ಗಳು ಇವೆ. ಆದ್ರೆ, ಅದ್ಯಾವುದನ್ನೂ ಗಣೇಶ್ ನಿರ್ವಹಿಸುವುದಿಲ್ಲ)

ಯಾರಿಂದಲೋ ತಮ್ಮ ಹೆಸರು ದುರ್ಬಳಿಕೆ ಆಗಬಾರದು ಅನ್ನುವ ಕಾರಣಕ್ಕೆ ಗಣಿ ತಮ್ಮ ಸ್ವಂತ ಟ್ಟಿಟ್ಟರ್ ಖಾತೆ ತೆರೆದಿದ್ದಾರೆ. @Official_Ganesh ಅನ್ನುವ ಹ್ಯಾಂಡಲ್ ಮೂಲಕ ಟ್ವಿಟ್ಟರ್ ಜಗತ್ತಿಗೆ ಅಧಿಕೃತ ಪದಾರ್ಪಣೆ ಮಾಡಿದ್ದಾರೆ ಗಣಿ. [ಖಾಕಿ ತೊಟ್ಟು 'ಕನ್ವರ್ ಲಾಲ್' ಆದ ಗಣೇಶ್]

ganesh

ಹೊಸ ವರ್ಷದಂದು ತಮ್ಮ 'ಖುಷಿ ಖುಷಿಯಾಗಿ' ಚಿತ್ರ ಕೂಡ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಟ್ವಿಟ್ಟರ್ ಖಾತೆ ತೆರೆದರೆ, ಚಿತ್ರಕ್ಕೆ ಮೈಲೇಜ್ ಸಿಗಬಹುದು ಅನ್ನುವುದು ಗಣಿ ಕ್ಯಾಂಪಿನ ಮತ್ತೊಂದು ಲೆಕ್ಕಾಚಾರ. [ಹೊಸ ವರ್ಷಕ್ಕೆ ಗೆಲುವಿನ 'ಖುಷಿ' ಯಾರಿಗೆ?]

ಹಾಗಾದ್ರೆ, ಇನ್ಯಾಕೆ ತಡ 'ಖುಷಿ ಖುಷಿಯಾಗಿ' ಸಿನಿಮಾ ಬಗ್ಗೆ ತಿಳ್ಕೋಬೇಕು...ಗಣಿ ಜೊತೆ ಮಾತನಾಡಬೇಕು ಅಂದ್ರೆ @Official_Ganesh ಅಕೌಂಟ್ ಗೆ ಒಮ್ಮೆ ವಿಸಿಟ್ ಹಾಕಿ....(ಫಿಲ್ಮಿಬೀಟ್ ಕನ್ನಡ)

English summary
Golden Star Ganesh has opened his official Twitter Account. Follow Official_Ganesh, It is his Twitter Handle.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada