ಮೂರು ಚಿತ್ರಗಳಲ್ಲಿ ಗಣೇಶ್: ಯಾವುದು, ಯಾವಾಗ ಶುರು.?
ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್, ಮಳೆ ಹುಡುಗ ಗಣೇಶ್ ಇಂದು ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ, ಸಿಹಿ ಹಂಚಿ ಜನಮದಿನ ಸಂಭ್ರಮಿಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ಗಣೇಶ್ ಅವರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ಪತ್ನಿ ಶಿಲ್ಪಾ ಗಣೇಶ್ ಮಕ್ಕಳಾದ ವಿನೀಶ್ ಮತ್ತು ಚಾರಿತ್ಯ್ರ ಕೂಡ ಭಾಗಿಯಾಗಿದ್ದರು.
ಈ ವೇಳೆ ಫಿಲ್ಮಿಬೀಟ್ ಕನ್ನಡ ಜೊತೆಯಲ್ಲಿ ನಟ ಗಣೇಶ್ ಮಾತನಾಡಿದರು. ಬರ್ತಡೇ ಸಂಭ್ರಮ ಹೇಗಿತ್ತು.? ಮುಂದಿನ ಸಿನಿಮಾ ಯಾವುದು.? ಯಾವ ರೀತಿಯ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬುದನ್ನ ಹಂಚಿಕೊಂಡರು.

ಮಲ್ಟಿಸ್ಟಾರ್ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ, ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರದಲ್ಲಿ ನಟಿಸುವ ಕುರಿತು, ತಮ್ಮ ಮಕ್ಕಳ ಭವಿಷ್ಯದ ಕುರಿತು ಗಣೇಶ್ ತಿಳಿಸಿದರು.
More from Filmibeat
English summary
Kannada actor, golden star ganesh interview. ganesh celebrating his 38th birthday with fans.


Click it and Unblock the Notifications











