ಮರಿ ಗೋಲ್ಡನ್ ಸ್ಟಾರ್ ವಿಹಾನ್ ಸಿನಿಮಾಕ್ಕೆ ಎಂಟ್ರಿ

By ಫಿಲ್ಮಿಬೀಟ್ ಡೆಸ್ಕ್

ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಕ್ಕಳು ತನ್ನದೇ ಹಾದಿಯಲ್ಲಿ ನಡೆಯಲಿ ಎಂಬುದು ಬಹುತೇಕರ ಆಸೆ ಅಂತೆಯೇ ಮಗ ವಿಹಾನ್ ಸಹ ನಟನಾಗಲಿ ಎಂಬ ಉದ್ದೇಶದಿಂದ ಈಗಲೇ ಬಣ್ಣ ಹಚ್ಚಿಸಿದ್ದಾರೆ ನಟ ಗಣೇಶ್.

ಗಣೇಶ್ ನಟಿಸುತ್ತಿರುವ 'ಸಖತ್' ಸಿನಿಮಾದಲ್ಲಿ ವಿಹಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗಣೇಶ್ ಪಾತ್ರದ ಸಣ್ಣ ವಯಸ್ಸಿನ ಪಾತ್ರದಲ್ಲಿ ವಿಹಾನ್ ಕಾಣಿಸಿಕೊಳ್ಳಲಿದ್ದಾರೆ. 'ಗಾಳಿಪಟ 2' ಸಿನಿಮಾದಲ್ಲೂ ವಿಹಾನ್ ನಟಿಸಿದ್ದಾರೆ ಎನ್ನಲಾಗುತ್ತಿದೆ.

ವಿಹಾನ್ ಹುಟ್ಟುಹಬ್ಬದ ಸಂದರ್ಭ ಅವರ ಪೋಸ್ಟರ್‌ಗಳನ್ನು 'ಸಖತ್' ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುಭಾಶಯ ಕೋರಿತ್ತು.

Golden Star Ganeshs Son Vihan Acting In Movie Sakath

ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಗಣೇಶ್, ''ಮೊಳಕೆಯ ಬೆಳೆಯುವ ಸಿರಿಯನು ತೆರೆಯ ಮೇಲೆ ನೀವೆ ನೋಡಿ ಹರಸಿ. 'ಜೂನಿಯರ್ ಬಾಲು ಆಗಿ ವಿಹಾನ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ'' ಎಂದಿರುವ ಗಣೇಶ್, ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಿದ್ದಾರೆ.

ನಟ ಗಣೇಶ್ ಹಾಗೂ ಶಿಲ್ಪಾ ದಂಪತಿಗೆ ಇಬ್ಬರು ಮಕ್ಕಳು. ವಿಹಾನ್ ಹಾಗೂ ಚಾರಿತ್ರ್ಯ. ಮಗಳು ಚಾರಿತ್ಯ್ರ ಈಗಾಗಲೇ ಅಪ್ಪನ 'ಚಮಕ್' ಸಿನಿಮಾದಲ್ಲಿ ನಟಿಸಿದ್ದಾಳೆ. ಇದೀಗ ಮಗನ ಸರದಿ.

ಮಕ್ಕಳ ಮೇಲೆ ಬಹುಪ್ರೀತಿಯುಳ್ಳ ಗಣೇಶ್ ಆಗಾಗ್ಗೆ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದಷ್ಟೆ ಚಾರಿತ್ರ್ಯ, ವಿಹಾನ್‌ಗೆ ರಾಖಿ ಕಟ್ಟುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

'ಸಖತ್' ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಿಶಾ ವೆಂಕಟ್ ಕೋನಂಕಿ ಮತ್ತು ನಿಶಾಂತ್. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಬಹುಭಾಷಾ ನಟಿ ಸುರ್ಭಿ ಹಾಗೂ ನಿಶಿಕಾ ನಾಯ್ಡು ಈ ಸಿನಿಮಾದಲ್ಲಿ ಗಣೇಶ್ ಜೊತೆ ಹೆಜ್ಜೆ ಹಾಕಲಿದ್ದಾರೆ.

ಸಿನಿಮಾದಲ್ಲಿ ಗಣೇಶ್‌ರದ್ದು ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಯುವಕನ ಪಾತ್ರ ಎನ್ನಲಾಗಿದೆ. ನಿಶಿಕಾರದ್ದು ಶಿಕ್ಷಕಿಯ ಪಾತ್ರವಂತೆ. ಜೊತೆಗೆ ನಾಯಕನ ಉಡಾಳ ಬುದ್ಧಿಗೆ ಸರಿದಾರಿ ತೋರುವ ಘನವಾದ ಪಾತ್ರದಲ್ಲಿ ನಿಶಿಕಾ ನಟಿಸುತ್ತಿದ್ದಾರೆ.

More from Filmibeat

English summary
Golden star Ganesh's son Vihan acting in movie Sakath as Ganesh's childhood character.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X