»   » ಸಂಬಂಧ-ಸಹಕಾರ-ಸಹಬಾಳ್ವೆಯ ಬಗ್ಗೆ 'ಗೋಲ್ಡನ್ ಸ್ಟಾರ್' ಪಾಠ

ಸಂಬಂಧ-ಸಹಕಾರ-ಸಹಬಾಳ್ವೆಯ ಬಗ್ಗೆ 'ಗೋಲ್ಡನ್ ಸ್ಟಾರ್' ಪಾಠ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ತನ್ನ ಅಭಿಮಾನಿಗಳಿಗೆ ಹಾಗೂ ರಾಜ್ಯದ ಜನತೆಗೆ ಕಿವಿ ಮಾತನ್ನ ಹೇಳಿದ್ದಾರೆ. ಫೇಸ್ ಬುಕ್ ಮೂಲಕ ಅಭಿಮಾನಿಗಳಿಗೆ ತಿಳಿ ಹೇಳುವ ಕೆಲಸ ಮಾಡ್ತಿದ್ದಾರೆ 'ಚೆಲ್ಲಾಟ'ದ ಹುಡುಗ. ಇತ್ತೀಚಿನ ಯುಗದಲ್ಲಿ ಸಂಬಂಧದ ಬೆಲೆ ಕಳೆದುಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಹೇಗೆ ಜೀವನ ರೂಪಿಸಿಕೊಳ್ಳಬೇಕೆಂದು ಸಣ್ಣ ಮೆಸೇಜ್ ನೀಡಿದ್ದಾರೆ.

ಸದಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಗಣೇಶ್ ತಮ್ಮನ್ನ ಪ್ರೀತಿ ಮಾಡುವ ಅಭಿಮಾನಿಗಳ ಬಗ್ಗೆ ಕಾಳಜಿ ತೋರಿದ್ದಾರೆ. ಒಬ್ಬರೇ ಮನೆಯಲ್ಲಿದ್ದಾಗ ಏನೆಲ್ಲಾ ಆಗುವ ಸಾಧ್ಯತೆಗಳಿವೆ ಎನ್ನುವುದನ್ನ ಉದಾಹರಣೆ ಸಹಿತ ವಿಡಿಯೋ ತೋರಿಸಿ ಅರ್ಥ ಮಾಡಿಸುತ್ತಿದ್ದಾರೆ. ಹಾಗಾದ್ರೆ ಗಣೇಶ್ ಯಾರ ಹಾಗೂ ಯಾವ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಬಾಂಧವ್ಯ ಬೆಳಸಿ ಆರಾಮಾಗಿರಿ

''ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ನಮ್ಮ ನಮ್ಮ ಮನೆಯವರೇ ಪರಕೀಯರಾಗುತ್ತಿದ್ದಾರೆ. ದೂರದ ಎಲ್ಲೋ ಇರುವ ಮುಖಪರಿಚಯವೂ ಇಲ್ಲದವರೊಂದಿಗೆ ಘಂಟೆಗಳ ಕಾಲ ಹರಟುತ್ತೇವೆ ಆದರೆ, ಅಕ್ಕ ಪಕ್ಕದವರೊಂದಿಗೆ ಸ್ನೇಹದ ಮಾತು ಬಿಡಿ, ಮುಖ ಪರಿಚಯವೂ ಇರುವುದಿಲ್ಲ. ನಮ್ಮಲ್ಲಿ ಎಷ್ಟೋ ಜನರಿಗೆ ಅವರ ಪಕ್ಕದ ಮನೆಯಲ್ಲಿ ಯಾರು ವಾಸವಾಗಿದ್ದಾರೆ ಎನ್ನುವ ಮಾಹಿತಿ ಕೂಡ ಇರುವುದಿಲ್ಲ. ಮನುಷ್ಯ ಸಂಘಜೀವಿ, ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕುವ ಸಂತೋಷ ಯಾವುದರಲ್ಲೂ ಸಿಗಲಾರದು'' - ಗಣೇಶ್, ನಟ

ಮುನ್ನೆಚ್ಚರಿಕೆಯಿಂದ ಸುರಕ್ಷಿತವಾಗಿರಿ

''ಮನೆಯಲ್ಲಿ ಅಮೂಲ್ಯ ವಸ್ತುಗಳು ಇರಲಿ, ಇಲ್ಲದಿರಲಿ ಯಾವುದೇ ಆಗಂತುಕರು ಬಂದು ಬಾಗಿಲು ಬಡಿದರೆ ಯಾರು ಎಂದು ನೋಡದೇ ಬಾಗಿಲು ತೆರೆದರೆ ಎಂತಹ ಘೋರ ಪರಿಣಾಮ ಆಗುತ್ತದೆ. ದರೋಡೆಕೋರರು ಬಂದು ಎಲ್ಲಾ ದೋಚಿದ ಮೇಲೆ ಸುಮ್ಮನೆ ಪೋಲಿಸರ ವಿರುದ್ಧ ಕೂಗಾಡಿದರೆ ಏನು ಪ್ರಯೋಜನ.? ಪ್ರತಿಯೊಬ್ಬರ ಹಿಂದೆ ಒಬ್ಬೊಬ್ಬ ಪೋಲಿಸರನ್ನು ನೇಮಿಸುವಷ್ಟು ನಮ್ಮ ದೇಶ ಅಭಿವೃದ್ಧಿ ಆಗಿಲ್ಲ. ಆದ್ದರಿಂದ ತಮ್ಮ ತಮ್ಮ ರಕ್ಷಣೆಯ ಜೊತೆಗೆ ಅಕ್ಕಪಕ್ಕದವರ ರಕ್ಷಣೆಗೂ ಸ್ವಲ್ಪ ಗಮನ ಹರಿಸಿ. ಆಗಂತುಕರಿಗೆ ಮನೆ ಬಾಗಿಲು ತೆರೆಯದಿರಿ, ನೆರೆಹೊರೆಯವರೊಡನೆ ಸಹಕಾರದಿಂದ ಬಾಳಿ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ'' ಗಣೇಶ್ -ನಟ

ಮಾನವೀಯತೆ ಕಾಪಾಡಲಿದೆ ಘನತೆ

''ಏನಾದರೂ ಆಗು ಮೊದಲು ಮಾನವನಾಗು'' ಅಂತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಸುರಕ್ಷತೆ ಮತ್ತು ಸಹಬಾಳ್ವೆ ಬಗ್ಗೆ ತನ್ನ ಅಭಿಮಾನಿಗಳಿಗೆ ತಿಳಿಸೋದ್ರ ಜೊತೆಗೆ ಮಾನವೀಯತೆ ಎಷ್ಟು ಮುಖ್ಯ ಅನ್ನೋದನ್ನೂ ತಿಳಿಸಿದ್ದಾರೆ. ಇವೆಲ್ಲವೂ ಗಣೇಶ್ ತಮ್ಮ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಹೇಳಿದ್ದಾರೆ. ಈ ಮೂಲಕ ಅನೇಕ ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಸ್ಫೂರ್ತಿಯಾಗಿದ್ದಾರೆ.

ಹೊಸ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡಿದ್ರಾ ಗಣೇಶ್.?

ಜನರಿಗೆ ಸಂದೇಶ ಸಾರುವ ಬೆನ್ನಲ್ಲೇ ಗಣೇಶ್ ತನ್ನ ಹೊಸ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ಟ್ವಿಟ್ಟರ್ ಮೂಲಕ ತಮ್ಮ ಹೊಸ ಹೇರ್ ಸ್ಟೈಲ್ ಫೋಟೋ ವನ್ನ ಅಪ್ಲೋಡ್ ಮಾಡಿದ್ದಾರೆ. ಸದ್ಯ ಚಮಕ್ ಸಿನಿಮಾ ಚಿತ್ರೀಕರಣ ಮುಗಿಸಿರೋ ಗೋಲ್ಡನ್ ಸ್ಟಾರ್ ಹೊಸ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

English summary
Golden star Ganesh has taken his facebook account to convey valuable message to fans. ಫೇಸ್ ಬುಕ್ ಮೂಲಕ ತಮ್ಮ ಸಂದೇಶವನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada