For Quick Alerts
  ALLOW NOTIFICATIONS  
  For Daily Alerts

  ಮೂವರು ನಾಯಕಿಯರ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಮಸ್ತ್ ಡಾನ್ಸ್

  |

  ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಗಣೇಶ್ ಸದ್ಯ ಸಖತ್, ತ್ರಿಬಲ್ ರೈಡಿಂಗ್ ಮತ್ತು ಗಾಳಿಪಟ-2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ವಿದೇಶದಲ್ಲಿ ಗಾಳಿಪಟ-2 ಸಿನಿಮಾದ ಚಿತ್ರೀಕರಣ ಮುಗಿಸಿ ಬಂದಿದ್ದ ಗೋಲ್ಡನ್ ಸ್ಟಾರ್ ಬಳಿಕ ಸಖತ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

  ಇದೀಗ ಮತ್ತೆ ತ್ರಿಬಲ್ ರೈಡಿಂಗ್ ಸಿನಿಮಾ ಸೆಟ್ ಸೇರಿದ್ದಾರೆ. ಚಿತ್ರದ ಹಾಡಿನ ಚಿತ್ರೀಕರಣ ಪ್ರಾರಂಭವಾಗಿದ್ದು, ಗಣೇಶ್ ಮೂವರು ನಾಯಕಿಯರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಕಿರುತೆರೆ ನಟಿ ಮೇಘಾ ಶೆಟ್ಟಿ, ಲವ್ ಮಾಕ್ ಟೇಲ್ ಖ್ಯಾತಿಯ ರಚನಾ ಮತ್ತು ನಟಿ ಅದಿತಿ ಪ್ರಭುದೇವ ಈ ಮೂವರು ನಾಯಕಿರ ಜೊತೆ ಡಾನ್ಸ್ ಮಾಡುತ್ತಿದ್ದಾರೆ.

  15 ವರ್ಷದ ಜರ್ನಿಯಲ್ಲಿ ಮೊದಲ ಸಲ ವಿಶೇಷ ಪಾತ್ರದಲ್ಲಿ ಗಣೇಶ್ ನಟನೆ15 ವರ್ಷದ ಜರ್ನಿಯಲ್ಲಿ ಮೊದಲ ಸಲ ವಿಶೇಷ ಪಾತ್ರದಲ್ಲಿ ಗಣೇಶ್ ನಟನೆ

  ಈ ಹಾಡಿಗಾಗಿ ಈಗಾಗಲೇ ಅದ್ದೂರಿ ಸೆಟ್ ಹಾಕಲಾಗಿದ್ದು, ಸಖತ್ ರಿಚ್ ಆಗಿ ಹಾಡು ಮೂಡಿಬರುತ್ತಿದೆ. ಅಂದಹಾಗೆ ಈ ಹಾಡಿಗೆ ಮುರಳಿ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ವಿಭಿನ್ನ ಹಾಡಿಗೆ ಚಂದನ್ ಶೆಟ್ಟಿ ಸಾಹಿತ್ಯ ರಚಿಸಿ ಧ್ವನಿ ನೀಡಿದ್ದಾರೆ. ಸಂಭ್ರಮದ ಹಾಡು ಇದಾಗಿದ್ದು, ಅದ್ದೂರಿಯಾಗಿ ಸೆರೆಹಿಡಿಯಲು ಚಿತ್ರತಂಡ ನಿರ್ಧರಿಸಿದೆ.

  ಈಗಾಗಲೇ ಟಾಕಿ ಭಾಗ ಮುಗಿಸಿರುವ ಸಿನಿಮಾತಂಡ ಸದ್ಯ ಹಾಡಿನ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಲಿದೆ. ಇನ್ನು ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಕೊರೊನಾ ಹೆಚ್ಚಾಗುತ್ತಿರುವ ಕಾರಣ ಸಿನಿಮಾ ಬಿಡುಗಡೆ ಇನ್ನು ತಡವಾಗುವ ಸಾಧ್ಯತೆ ಇದೆ.

  ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಅಡುಗೆ ಮಾಡೋದನ್ನ ಬಿಡೋಲ್ಲ ಕಿಚ್ಚ ಸುದೀಪ್ | Filmibeat Kannada

  ರಾಮಗೋಪಾಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಹಾಸ್ಯ ನಟ ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಡಿಂಗ್ರಿ ನಾಗರಾಜ್ ಸೇರಿದಂತೆ ಅನೇಕ ಪ್ರಸಿದ್ಧ ಕಲಾವಿದರಿದ್ದಾರೆ. ಸ್ಯಾಂಡಲ್ ವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಟ್ರಿಬಲ್ ರೈಡಿಂಗ್ ಯಾವಾಗ ತೆರೆಗೆ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Golden Star Ganesh shaking a leg with the three female leads for Tibble Riding song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X