For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಮಗಳ ಅಡುಗೆ ವಿಡಿಯೋ ವೈರಲ್; ಯೂಟ್ಯೂಬ್ ಪ್ರಭಾವ ಎಂದ ಗಣೇಶ್

  |

  ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚರಿತ್ರ್ಯಾ ಚಿಕ್ಕ ವಯಸ್ಸಿನಲ್ಲೇ ಅಡುಗೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಲಾಕ್ ಡೌನ್ ಶೆಫ್ ಆಗಿ ಬದಲಾಗಿರುವ ಗಣೇಶ್ ಪುತ್ರಿ ಅಡುಗೆ ಮಾಡುವುದನ್ನು ಪ್ರಾರಂಭಿಸಿದ್ದಾರೆ. ಮಗಳು ಅಡುಗೆ ಮಾಡುತ್ತಿರುವ ಮುದ್ದಾದ ವಿಡಿಯೋವನ್ನು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಗಣೇಶ್ ಮುದ್ದು ಮಗಳು ಚಾರಿತ್ರ್ಯಾ ಅಡುಗೆ ಮಾಡುವುದನ್ನು ಕಲಿತಿರುವುದು ಯೂ ಟ್ಯೂಬ್ ನೋಡಿಯಂತೆ. ಯೂಟ್ಯೂಬ್ ನಲ್ಲಿ ಕಲಿತ ಅಡುಗೆಯನ್ನು ಮನೆಯಲ್ಲಿ ಪ್ರಯೋಗ ಮಾಡಿ ಮನೆಯನರಿಗೆ ಬಡಿಸುತ್ತಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಗಣೇಶ್ ಶೇರ್ ಮಾಡಿರುವ ವಿಡಿಯೋದಲ್ಲಿ ಮಗಳೇ ಏನು ಮಾಡುತ್ತಿದ್ದೀಯಾ? ಎಂದು ಕೇಳುತ್ತಾರೆ, ಮಗಳು ಇಂಗ್ಲಿಷ್ ನಲ್ಲಿ ವಿವರಣೆ ಕೊಡುತ್ತಾಳೆ. ಬಳಿಕ ಮತ್ತೆ ಗಣೇಶ್ ಏನು ಮಾಡುತ್ತಿದ್ದೀಯಾ ಮಗಳೇ ಸರಿಯಾಗಿ ಹೇಳು ಎಂದು ಕೇಳುತ್ತಾರೆ, ಆಗ ಮಗಳು ಕನ್ನಡದಲ್ಲಿ ಅಮ್ಲೆಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

  'ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರ'

  ವಿಡಿಯೋದಲ್ಲಿ ಗಣೇಶ್ ಪುತ್ರ ಸಹ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಗಣೇಶ್ ಶೇರ್ ಮಾಡಿ, 'ಅಮ್ಲೆಟ್ ಮಾಡೋದು ಹೇಗೆ? ತುಂಬಾ ಸರಳ. ಯೂಟ್ಯೂಬ್ ಪ್ರಭಾವ' ಎಂದು ಹೇಳಿದ್ದಾರೆ.

  Rajinikanth ಅಭಿಮಾನಿಗಳಿಗೆ ಆತಂಕ | Filmibeat Kannada

  ಅಂದಹಾಗೆ ಗಣೇಶ್ ಪುತ್ರಿ ಆಗಾಗ ಟಿಕ್ ಟಾಕ್ ವಿಡಿಯೋ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಅಲ್ಲದೆ ಸಿನಿಮಾದಲ್ಲೂ ನಟಿಸಿದ್ದಾರೆ. ಇದೀಗ ಅಡುಗೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಗಣೇಶ್ ಮಗಳ ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ ಹರಿದುಬರುತ್ತಿದೆ.

  English summary
  Golden star Ganesh shares his daughter charitriya cooking video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X