»   » ಅಪ್ಪನಂತೆ 'ಮುಗುಳುನಗೆ' ಬೀರುತ್ತಿರುವ ಜೂನಿಯರ್ ಗೋಲ್ಡನ್ ಸ್ಟಾರ್

ಅಪ್ಪನಂತೆ 'ಮುಗುಳುನಗೆ' ಬೀರುತ್ತಿರುವ ಜೂನಿಯರ್ ಗೋಲ್ಡನ್ ಸ್ಟಾರ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರಕ್ಕಾಗಿ ಗಣಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ ಈ ಚಿತ್ರ ಇದೇ ತಿಂಗಳು ತೆರೆಗೆ ಬರಲಿದೆ. ಈ ಮಧ್ಯೆ 'ಮುಗುಳುನಗೆ' ಚಿತ್ರದಲ್ಲಿ ಗಣೇಶ್ ಅವರ ಲುಕ್, ಸ್ಟೈಲ್ ಟ್ರೆಂಡ್ ಆಗಿದ್ದು, ಫ್ಯಾನ್ಸ್ ಕೂಡ ಮಳೆ ಹುಡುಗನ ಸ್ಟೈಲ್ ನ ಫಾಲೋ ಮಾಡ್ತಿದ್ದಾರೆ.

ಹೀಗಿರುವಾಗ, ಗೋಲ್ಡನ್ ಸ್ಟಾರ್ ಮಗ ಜೂನಿಯರ್ ಗೋಲ್ಡನ್ ಸ್ಟಾರ್ ವಿಹಾನ್ ಈಗ 'ಮುಗುಳುನಗೆ' ಸ್ಟೈಲ್ ನ ಫಾಲೋ ಮಾಡಿದ್ದಾರೆ. ಈ ಫೋಟೋಗಳನ್ನ ಸ್ವತಃ ಗಣೇಶ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಮಗನ ಈ ಗೆಟಪ್ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

Golden Star Ganesh Son Vihaan is in Mugulunage style

ಅಂದ್ಹಾಗೆ, ಗಣೇಶ್ ಪುತ್ರ ವಿಹಾನ್ ಅವರಿಗೆ ಇದು ಮೊದಲ ಮೇಕ್ ಓವರ್ ಆಗಿದ್ದು, ಚೊಚ್ಚಲ ಸ್ಟೈಲ್ ನಲ್ಲೇ ಅಪ್ಪನಂತೆ ಕಂಗೊಳಿಸಿರುವುದು ಆಕರ್ಷಣೆಯಾಗಿದೆ. ಶಾರ್ಟ್ ಹೇರ್ ಸ್ಟೈಲ್ ನಲ್ಲಿ, ಕಣ್ಣಿಗೆ ಸ್ಟೈಲಿಶ್ ಕನ್ನಡಕ ಹಾಕ್ಕೊಂಡು ಮಿರಮಿರ ಮಿಂಚಿದ್ದಾರೆ. ಪ್ರಶಾಂತ್ ಎಂಬುವವರು ವಿಹಾನ್ ಗೆ ಮೇಕ್ ಓವರ್ ಮಾಡಿದ್ದು, ಗಣೇಶ್ ಪುತ್ರ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸದ್ಯ, ಆಡಿಯೋ ಬಿಡುಗಡೆ ಮಾಡಿರುವ ಮುಗುಳುನಗೆ ಆಗಸ್ಟ್ 25 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯೋಗರಾಜ್ ಭಟ್ ನಿರ್ದೇಶನವಿದ್ದು, ಸೈಯಾದ್ ಸಲಾಂ ನಿರ್ಮಾಣ ಮಾಡಿದ್ದಾರೆ. ಆಶಿಕಾ ರಂಗನಾಥ್, ನಿಖಿತ ನಾರಾಯಣ್, ಅಪೂರ್ವ, ಮತ್ತು ವಿಶೇಷ ಪಾತ್ರದಲ್ಲಿ ಅಮೂಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

English summary
Kannada Actor Ganesh has taken his twitter account to Share his Son Vihaan Stylish Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada