For Quick Alerts
  ALLOW NOTIFICATIONS  
  For Daily Alerts

  'ತ್ರಿಬಲ್ ರೈಡಿಂಗ್' ಮುಗಿಸಿದ ಸಂತಸದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

  By ಫಿಲ್ಮಿಬೀಟ್ ಡೆಸ್ಕ್
  |

  ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಗಣೇಶ್ ಸದ್ಯ 'ಸಖತ್', 'ತ್ರಿಬಲ್ ರೈಡಿಂಗ್' ಮತ್ತು 'ಗಾಳಿಪಟ-2' ಸಿನಿಮಾಗಳು ಗಣೇಶ್ ಕೈಯಲ್ಲಿವೆ. ಇದೀಗ ಒಂದು ಸಿನಿಮಾದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಕೊರೊನಾ ನಡುವೆಯೂ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ಸಂತಸದಲ್ಲಿದ್ದಾರೆ ಗಣೇಶ್ ಅಂಡ್ ಟೀಂ.

  ಗಣೇಶ್ ನಟನೆಯ ಬಹುನಿರೀಕ್ಷೆಯ ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹೇಶ್ ಗೌಡ ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾ ಯಶಸ್ವಿಯಾಗಿ ಮುಗಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಮುಂದೆ ಓದಿ...

  ಮೂವರು ನಾಯಕಿಯರ ಜೊತೆ ಗಣೇಶ್ ತ್ರಿಬಲ್ ರೈಡಿಂಗ್

  ಮೂವರು ನಾಯಕಿಯರ ಜೊತೆ ಗಣೇಶ್ ತ್ರಿಬಲ್ ರೈಡಿಂಗ್

  ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಮೂವರು ನಾಯಕಿಯರು ಕಾಣಿಸಿಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ, ಲವ್ ಮಾಕ್ಟೈಲ್ ಸಿನಿಮಾ ಖ್ಯಾತಿಯ ನಟ ರಚನಾ ಮತ್ತು ಅದಿತಿ ಪ್ರಭುದೇವ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾ ಅದ್ದೂರಿ ಹಾಡು ಸೆರೆಹಿಡಿದಿದ್ದು, ಗಣೇಶ್ ಮೂವರು ನಾಯಕಿಯರ ಜೊತೆ ಹೆಜ್ಜೆಹಾಕಿದ್ದಾರೆ.

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಹಾಸ್ಯ ನಟ ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಡಿಂಗ್ರಿ ನಾಗರಾಜ್ ಸೇರಿದಂತೆ ಅನೇಕ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ತ್ರಿಬಲ್ ರೈಡಿಂಗ್ ಯಾವಾಗ ತೆರೆಗೆ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  ಸಖತ್ ಮತ್ತು ಗಾಳಿಪಟ-2ನಲ್ಲಿ ನಟನೆ

  ಸಖತ್ ಮತ್ತು ಗಾಳಿಪಟ-2ನಲ್ಲಿ ನಟನೆ

  ಇನ್ನು ಈ ಸಿನಿಮಾ ಜೊತೆಗೆ ಗಣೇಶ್ ನಿರ್ದೇಶಕ ಸಿಂಪಲ್ ಸುನಿ ಜೊತೆ ಸಖತ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅಂಧ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ಜೊತೆ ಗಾಳಿಪಟ-2 ಸಿನಿಮಾದ ಚಿತ್ರೀಕರಣ ಕೂಡ ಪ್ರಾರಂಭ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ದಿ ಸ್ಟೋರಿ ಆಫ್ ರಾಯಗಢ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

  ಸಫಾರಿ ವಿಡಿಯೋ ಹಂಚಿಕೊಂಡಿದ್ದ ಗಣೇಶ್

  ಇನ್ನು ನಟ ಗಣೇಶ್ ಸಿನಿಮಾಗಳ ಜೊತೆಗೆ ಪ್ರವಾಸಕ್ಕೂ ತೆರಳಿದ್ದರು. ಕುಟುಂಬದ ಸಫಾರಿ ಹೊರಟಿದ್ದ ಗಣೇಶ್ ಚಿರತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಕುಟುಂಬ ಸಮೇತ ಕಬಿನಿ ಜಲಾಶಯಕ್ಕೆ ಪ್ರವಾಸಕ್ಕೆ ತೆರಳಿದ್ದರು ಗಣೇಶ್. ಪ್ರವಾಸದ ಫೋಟೋಗಳು ಮತ್ತು ವಿಡಿಯೋಗಳನ್ನು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಮತ್ತೆ ಕಿರುತೆರೆಗೆ ಬರ್ತಿದ್ದಾರೆ ಗಣೇಶ್

  ಮತ್ತೆ ಕಿರುತೆರೆಗೆ ಬರ್ತಿದ್ದಾರೆ ಗಣೇಶ್

  ಸಿನಿಮಾಗಳ ಜೊತೆಗೆ ಗಣೇಶ್ ಕಿರುತೆರೆಗೂ ವಾಪಸ್ಸಾಗುತ್ತಿದ್ದಾರೆ. ಮನೊರಂಜನಾ ಲೋಕದ ತಮ್ಮ ವೃತ್ತಿಯನ್ನು ಟಿವಿ ಮೂಲಕವೇ ಆರಂಭಿಸಿದ ಗಣೇಶ್, ನಟನೆ ಜೊತೆಗೆ ನಿರೂಪಕರಾಗಿಯೂ ಜನಪ್ರಿಯರು. 'ಕಾಮಿಡಿ ಟೈಂ' ಮೂಲಕ ವೃತ್ತಿ ಆರಂಭಿಸಿದ ಗಣೇಶ್, ಬಳಿಕ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇದೀಗ ಜೀ ವಾಹಿನಿಯಲ್ಲಿ ಹೊಸ ರೀತಿಯ ರಿಯಾಲಿಟಿ ಶೋ ಒಂದನ್ನು ಗಣೇಶ್ ನಡೆಸಿಕೊಡಲಿದ್ದಾರಂತೆ. ಈ ಬಗ್ಗೆ ಈಗಾಗಲೇ ಅಧಿಕೃತ ಪ್ರೋಮೋ ಒಂದನ್ನು ಹೊರಡಿಸಲಾಗಿದೆ. ಆದರೆ ರಿಯಾಲಿಟಿ ಶೋ ಹೇಗಿರುತ್ತದೆ. ಯಾವಾಗ ಪ್ರಸಾರ ಆಗುತ್ತದೆ ಇನ್ನುಳಿದ ಮಾಹಿತಿಗಳನ್ನು ಇನ್ನೂ ಹಂಚಿಕೊಂಡಿಲ್ಲ.

  English summary
  Golden Star Ganesh starrer Tribble Riding team wraps up shooting for film, the Actor shares a few pics from the sets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X