ಆಟೋದಲ್ಲಿ ಪ್ರಯಾಣ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
ನಟ ಗೋಲ್ಡನ್ ಸ್ಟಾರ್ ಗಣೇಶ್ ಈಗ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ. ಯಾವಾಗಲೂ ಕಾರ್ ನಲ್ಲಿ ಸುತ್ತಾಡುವ ಈ ಸ್ಟಾರ್ ನಟ ಈಗ ಆಟೋ ಏರಿ ಕುಳಿತಿದ್ದಾರೆ.
ಗಣೇಶ್ ಮತ್ತು ಅವರ ಸ್ನೇಹಿತ ನಟ ರವಿಶಂಕರ್ ಇಬ್ಬರು ಆಟೋದಲ್ಲಿ ಜರ್ನಿ ಮಾಡಿದ್ದಾರೆ. ಈ ವಿಡಿಯೋವನ್ನು ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತುಂಬ ದಿನಗಳ ನಂತರ ಆಟೋದಲ್ಲಿ ಓಡಾಡುತ್ತಿರುವುದು ಖುಷಿ ನೀಡುತ್ತಿದೆ ಎಂದು ಗಣೇಶ್ ಹೇಳಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ತೋಡಗಿದ ಗಣೇಶ್
ಇನ್ನೊಂದು ಕಡೆ ಗಣೇಶ್ ಚುನಾವಣಾ ಪ್ರಚಾರದಲ್ಲಿ ಬಿಜಿ ಇದ್ದಾರೆ. ಪದ್ಮನಾಬ ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ಆರ್.ಅಶೋಕ್ ಅವರ ಪರವಾಗಿ ಜನರ ಬಳಿ ಮತಯಾಚನೆ ಮಾಡಿದ್ದಾರೆ. ಪತ್ನಿ ಶಿಲ್ಪಾ ಗಣೇಶ್ ಅವರಿಗೆ ಟಿಕೆಟ್ ಸಿಕ್ಕರೆ ನನ್ನ ಸಂಪೂರ್ಣ ಬೆಂಬಲ ಇರಲಿದೆ ಎಂದಿದ್ದ ಗಣೇಶ್, ಟಿಕೆಟ್ ಕೈ ತಪ್ಪಿದ ನಂತರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
English summary
Golden Star Ganesh traveled in auto with his friend, kannada actor Ravishankar.


Click it and Unblock the Notifications