»   » ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರಾಧಿಕಾ ಪಂಡಿತ್

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರಾಧಿಕಾ ಪಂಡಿತ್

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರತಿಭಾನ್ವಿತ ತಾರೆ ರಾಧಿಕಾ ಪಂಡಿತ್ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. 'ಲವ್ ಗುರು' ಪ್ರಶಾಂತ್ ರಾಜ್ ಆಕ್ಷನ್ ಕಟ್ ಹೇಳುತ್ತಿರುವ 'ಜೂಮ್' ಚಿತ್ರದಲ್ಲಿ ಒಂದಾಗುತ್ತಿದ್ದಾರೆ.

ಗಣೇಶ್ ಅವರ ಹುಟ್ಟುಹಬ್ಬದ ದಿನ ಹಾಡುಗಳ ರೆಕಾರ್ಡಿಂಗ್ ಗೆ ಚಾಲನೆ ನೀಡಲಾಗಿದೆ. ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುತ್ತವೆ ಮೂಲಗಳು. ಪ್ರಶಾಂತ್ ರಾಜ್ ಚಿತ್ರದಲ್ಲಿ ಗಣೇಶ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಚಿತ್ರದ ಶೀರ್ಷಿಕೆ, ಪಾತ್ರವರ್ಗ, ತಾಂತ್ರಿಕ ಬಳಗ ಪಕ್ಕಾ ಆಗಿರಲಿಲ್ಲ. [ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ವಿಶೇಷಗಳು]

Golden Star Ganesh Zoom heroine Radhika Pandit

ಇದೀಗ ಎಲ್ಲವೂ ಪಕ್ಕಾ ಆಗಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪವರ್' ಚಿತ್ರಕ್ಕೆ ಸಂಗೀತ ನೀಡಿರುವ ಎಸ್ ಎಸ್ ತಮನ್ ಅವರ ಸಂಗೀತ ಚಿತ್ರಕ್ಕಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಯಲ್ಲಿ ಚಿತ್ರತಂಡ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಿದೆ.

ಲವ್ ಗುರು, ಗಾನ ಬಜಾನಾ ಹಾಗೂ ವಿಜಲ್ ಚಿತ್ರಗಳ ಬಳಿಕ ಪ್ರಶಾಂತ್ ರಾಜ್ ನಿರ್ದೇಶಿಸುತ್ತಿರುವ ಚಿತ್ರ 'ಜೂಮ್'. ಶೀರ್ಷಿಕೆಯಲ್ಲೇ ಒಂದು ರೀತಿಯ ಆಕರ್ಷಣೆ ಇದ್ದು, ವಿಭಿನ್ನ ಚಿತ್ರಗಳನ್ನು ಕೊಡುತ್ತಾ ಬಂದಿರುವ ಪ್ರಶಾಂತ್ ಈ ಬಾರಿ ಏನೆಲ್ಲಾ ಮಾಡುತ್ತಾರೋ ಎಂಬ ಕುತೂಹಲವೂ ಇದೆ. (ಏಜೆನ್ಸೀಸ್)

English summary
Golden Star Ganesh and Radhika Pandit has paired up for the first time in upcoming movie 'Zoom'. The movie directed by Prashanth Raj. Music director S S Thaman scoring the music.
Please Wait while comments are loading...