For Quick Alerts
  ALLOW NOTIFICATIONS  
  For Daily Alerts

  ತುಳುವಿನಲ್ಲೂ ಬಂದಿದೆ 'ಗೋಲ್‍ ಮಾಲ್' ಸಿನಿಮಾ

  |

  ಹಿಂದಿಯಲ್ಲಿ 'ಗೋಲ್ ಮಾಲ್' ಸೀರಿಸ್ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗ ತುಳುಭಾಷೆಯಲ್ಲಿಯೂ ಗೋಲ್‍ಮಾಲ್' ಸಿನಿಮಾ ಬರುತ್ತಿದೆ.

  ನಾಯಕ ನಟನ ಕಿರಿಕ್ : ನಟಿ ಮೇಲೆ ಹಲ್ಲೆ ನಡೆಸಿದ ನಟ ನಾಯಕ ನಟನ ಕಿರಿಕ್ : ನಟಿ ಮೇಲೆ ಹಲ್ಲೆ ನಡೆಸಿದ ನಟ

  ಶ್ರೀ ಮಹಾಕಾಳಿ ಮಹಾಮಂತ್ರ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಮಂಜುನಾಥ ನಾಯಕ್ ಕಾರ್ಕಳ ಮತ್ತು ಅಕ್ಷಯ ಪ್ರಭು ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನದ 'ಗೋಲ್‍ಮಾಲ್' ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಜ್ಯೋತಿ ಚಲನ ಚಿತ್ರಮಂದಿರದಲ್ಲಿ ನಡೆಯಿತು.

  ಯಶಸ್ವಿ 25 ದಿನ ಪೂರೈಸಿದ ತುಳು ಹಾಸ್ಯ ಸಿನಿಮಾ 'ದಗಲ್ ಬಾಜಿಲು' ಯಶಸ್ವಿ 25 ದಿನ ಪೂರೈಸಿದ ತುಳು ಹಾಸ್ಯ ಸಿನಿಮಾ 'ದಗಲ್ ಬಾಜಿಲು'

  ಸಮಾರಂಭದಲ್ಲಿ ತುಳು ಚಲನ ಚಿತ್ರ ನಿರ್ದೇಶಕರಾದ ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್ , ನಿರ್ಮಾಪಕರಾದ ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಆರ್. ಧನರಾಜ್, ವಿಜಯ ಕುಮಾರ್ ಕಾರ್ಕಳ, ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಡಾ. ಸದಾನಂದ ಪೆರ್ಲ, ವಿ.ಜಿ ಪಾಲ್, ಗಂಗಾಧರ ಶೆಟ್ಟಿ ಅಳಕೆ, ಸುಧಾಕರ ಕುದ್ರೋಳಿ, ಚೇತನ್ ಮುಂಡಾಡಿ, ಮೋಹನ್ ಕೊಪ್ಪಲ, ಪ್ರೇಮ್ ಶೆಟ್ಟಿ ಸುರತ್ಕಲ್, ಗೋಲ್‍ಮಾಲ್ ಚಲನ ಚಿತ್ರದ ನಿರ್ಮಾಪಕರಾದ ಮಂಜುನಾಥ ನಾಯಕ್, ಅಕ್ಷಯ್ ಪ್ರಭು, ನಿರ್ದೇಶಕ ರಮಾನಂದ ನಾಯಕ್, ನಟ ಪೃಥ್ವಿ ಅಂಬರ್, ಶ್ರೇಯಾ ಅಂಚನ್, ನಿರೀಕ್ಷಾ ಶೆಟ್ಟಿ, ಅರವಿಂದ ಬೋಳಾರ್, ಸುನಿಲ್ ನೆಲ್ಲಿಗುಡ್ಡೆ, ಭೋಜರಾಜ್ ವಾಮಂಜೂರು, ಸುನಾದ್ ಗೌತಮ್, ಸಂದೀಪ್ ಶೆಟ್ಟಿ ಮಾಣಿ ಬೆಟ್ಟು, ರೂಪೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

  'ಗೋಲ್‍ಮಾಲ್' ತುಳು ಚಲನಚಿತ್ರ ಮಂಗಳೂರು, ಉಡುಪಿ, ಮಣಿಪಾಲ, ಮೂಡುಬಿದ್ರೆ, ಕಾರ್ಕಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಂಡಿದೆ.

  ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸುನಿಲ್ ನೆಲ್ಲಿಗುಡ್ಡೆ, ಸುಂದರ ರೈ ಮಂದಾರ, ಸತೀಶ್ ಬಂದಲೆ, ಪೃಥ್ವಿ ಅಂಬರ್, ಶ್ರೇಯಾ ಅಂಚನ್, ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತುಳುವಿನಲ್ಲಿ ಅದ್ದೂರಿ ಬಜೆಟ್ ನ ಸಿನಿಮಾ ಇದಾಗಿದ್ದು ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ.

  English summary
  'Golmal' tulu movie running successfully in Mangaluru, Mudabidri, Manipal, Sullia, and Udupi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X