'ಕಾಂತಾರ' ಪ್ರೀಕ್ವೆಲ್ ರಿಲೀಸ್ ಡೇಟ್ ಕನ್ಫರ್ಮ್!: ಥ್ಯಾಂಕ್ಯೂ ಗೂಗಲ್!
ಬರೀ ಫಸ್ಟ್ ಲುಕ್ ಟೀಸರ್‌ನಿಂದಲೇ 'ಕಾಂತಾರ' ಚಾಪ್ಟರ್-1 ಕ್ರೇಜ್ ದುಪ್ಪಟ್ಟಾಗಿದೆ. ಚಿತ್ರದ ಮುಹೂರ್ತ ನೆರವೇರಿಸಿ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಜಬರ್ದಸ್ತ್ ಸ್ಯಾಂಪಲ್‌ನಲ್ಲಿ ರಿಷಬ್ ವಿಶ್ವರೂಪ ನೋಡಿದ ಸಿನಿ ರಸಿಕರು ಫಿದಾ ಆಗಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವುದು ಫಿಕ್ಸ್ ಎಂದು ಹೇಳುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಟೀಸರ್ ಧೂಳೆಬ್ಬಿಸಿದೆ.
ಒಂದೇ ವಿಡಿಯೋದಲ್ಲಿ 6 ಭಾಷೆಗಳಲ್ಲಿ 'ಕಾಂತಾರ' ಚಾಪ್ಟರ್-1 ಟೀಸರ್ ಹೊರಬಂದಿದೆ. ಸೆಟ್ಟಿಂಗ್ಸ್‌ನಲ್ಲಿ ನೋಡುಗರು ಆಡಿಯೋ ಬದಲಿಸಿಕೊಂಡು ಆಯಾ ಭಾಷೆಯಲ್ಲಿ ಟೀಸರ್ ವೀಕ್ಷಿಸುವ ಅವಕಾಶ ಸಿಕ್ಕಿದೆ. ಪರಭಾಷಿಕರು ಕೂಟ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಹಂಡ್ರೆಡ್ ಪರ್ಸೆಂಟ್ ಹಿಟ್ ಎನ್ನುತ್ತಿದ್ದಾರೆ. ಕಳೆದ ವರ್ಷ ದಸರಾ ಸಂಭ್ರಮದಲ್ಲಿ ಬಂದಿದ್ದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ ತಮ್ಮ ಎಲ್ಲಾ ಕಮೀಟ್‌ಮೆಂಟ್ ಬದಿಗಿಟ್ಟು ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್ ಕೈಗೆತ್ತಿಕೊಂಡಿದ್ದರು.

ಹಲವು ದಿನಗಳಿಂದ ಮಂಗಳೂರಿನಲ್ಲಿ ಬೀಡುಬಿಟ್ಟು ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಪ್ರೀ ಪ್ರೊಡಕ್ಷನ್ ಮುಗಿಸಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಟ್ಟಿದೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದೆ. ಇಂಗ್ಲೀಷ್‌ನಲ್ಲೂ ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಲಿದೆ. ಈ ವರ್ಷದ ಆರಂಭದಲ್ಲಿ ಮುಹೂರ್ತ ನೆರವೇರಿಸಿ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಹಿಂದೆ ನಿರ್ಮಾಪಕರು ಹೇಳಿದ್ದರು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ. ತಡವಾದರೂ ಪ್ರೇಕ್ಷಕರ ನಿರೀಕ್ಷೆ ಮೀರಿಸುವಂತೆ ಸಿನಿಮಾ ಮಾಡಲು ತಂಡ ಸಿದ್ಧವಾಗಿದೆ.
ಹಿಂದಿನ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಫಸ್ಟ್ ಚಾಪ್ಟರ್ ಕಟ್ಟಿಕೊಡಲಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ, ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಕಾಸ್ಟ್ಯೂಮ್ ಡಿಸೈನ್ ಚಿತ್ರಕ್ಕಿರಲಿದೆ. ಇನ್ನು ಸಿನಿಮಾ ಯಾವಾಗ ರಿಲೀಸ್ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಈ ಬಗ್ಗೆ ಗೂಗಲ್ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿದೆ. 2024ರಲ್ಲೇ ಕಾಂತಾರ ಚಾಪ್ಟರ್-1 ರಿಲೀಸ್ ಎಂದು ಹೇಳಿದೆ. ಆದರೆ ಕೆಲವರು ಅಷ್ಟು ಸುಲಭಕ್ಕೆ ಸಾಧ್ಯವಿಲ್ಲ. ಹೆಚ್ಚಿನ ಸಮಯ ತೆಗೆದುಕೊಂಡು ಒಳ್ಳೆ ಸಿನಿಮಾ ಕೊಡಿ ಎಂದು ಹೇಳುತ್ತಿದ್ದಾರೆ. ಕಾಂತಾರ- 1 ಟೀಸರ್ ನೋಡಿರುವುದಾಗಿ ಹೇಳಿ ರಿಲೀಸ್ ಡೇಟ್ ಬಗ್ಗೆ ಕುತೂಹಲ ಮೂಡಿಸಿರುವ ಗೂಗಲ್ ಇಂಡಿಯಾ ಪೋಸ್ಟ್‌ಗೆ ನೆಟ್ಟಿಗರು 'ಥ್ಯಾಂಕ್ಯು ಗೂಗಲ್' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

'ಕಾಂತಾರ ಚಾಪ್ಟರ್-1' ಫಸ್ಟ್ ಲುಕ್ ಟೀಸರ್ 24 ಗಂಟೆಗಳಲ್ಲಿ 10 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿದೆ. ಇದೀಗ ನಿಧಾನವಾಗಿ ಹೊಂಬಾಳೆ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ 6 ಭಾಷೆಯ ಟೀಸರ್‌ಗಳನ್ನು ಪ್ರತ್ಯೇಕವಾಗಿ ಹಂಚಿಕೊಂಡಿದೆ. ಇನ್ನು ಟ್ವಿಟ್ಟರ್ ಇಂಡಿಯಾ ಪೋಸ್ಟ್ ಅನ್ನು ಕೂಡ ರೀಟ್ವೀಟ್ ಮಾಡಿದ್ದು ಮುಂದಿನ ವರ್ಷವೇ ಸಿನಿಮಾ ತೆರೆಗೆ ತರುವ ಬಗ್ಗೆ ಸುಳಿವು ಕೊಟ್ಟಿದೆ.
ಮೊದಲ ಭಾಗದಲ್ಲಿ ರಿಷಬ್ ಶೆಟ್ಟಿ ಪ್ರೇಕ್ಷಕರನ್ನು ಕದಂಬರ ಕಾಲಕ್ಕೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. "ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ" ಎಂದು ಹೇಳಿ ಹೊಂಬಾಳೆ ಸಂಸ್ಥೆ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.


Click it and Unblock the Notifications











