»   » ವಿ.ನಾಗೇಂದ್ರ ಪ್ರಸಾದ್ 'ಗೂಗಲ್' ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗೆ

ವಿ.ನಾಗೇಂದ್ರ ಪ್ರಸಾದ್ 'ಗೂಗಲ್' ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗೆ

Posted By:
Subscribe to Filmibeat Kannada

ಇಷ್ಟು ದಿನಗಳ ಕಾಲ ಹಾಡುಗಳ ಮತ್ತು ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಾಡಿದ್ದ 'ಗೂಗಲ್' ಸಿನಿಮಾ ಇದೇ ಶುಕ್ರವಾರ ಅಂದರೆ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಸಿನಿಮಾದ ಮೂಲಕ ಮತ್ತೆ ವಿ.ನಾಗೇಂದ್ರ ಪ್ರಸಾದ್ ನಿರ್ದೇಶನಕ್ಕೆ ಮರಳಿದ್ದಾರೆ. 'ಗೂಗಲ್' ಇಂದು ಅಂತರಂಗದ ಸರ್ಚ್ ಎಂದು ಹೇಳಿರುವ ನಾಗೇಂದ್ರ ಪ್ರಸಾದ್ ಸಿನಿಮಾದ ಬಗ್ಗೆ ಕುತೂಹಲ ಹುಟ್ಟಿಸಿದ್ದಾರೆ. ಈ ಸಿನಿಮಾ ಒಂದು ಕೌಟುಂಬಿಕ ಮನರಂಜನೆಯ ಸಿನಿಮಾವಾಗಿದೆ. ವಿಶೇಷ ಅಂದರೆ ಚಿತ್ರದಲ್ಲಿ ಮೊದಲ ಬಾರಿಗೆ ಶುಭಾ ಪೂಂಜಾ ಗೃಹಿಣಿಯ ಪಾತ್ರದಲ್ಲಿ ನಟಿಸಿದ್ದಾರೆ.

ಬಿಡುಗಡೆಗೂ ಮುಂಚೆಯೇ 'ಗೂಗಲ್' ಚಿತ್ರಕ್ಕೆ ಭಾರಿ ಡಿಮ್ಯಾಂಡ್

ಇನ್ನು 'ಗೂಗಲ್' ಚಿತ್ರಕ್ಕೆ ಕನ್ನಡ ಸಾಕಷ್ಟು ಸ್ಟಾರ್ ಗಳು ಶುಭ ಕೋರಿದ್ದಾರೆ. ನಟ ಅಂಬರೀಶ್, ಶಿವಣ್ಣ, ಸುದೀಪ್, ದರ್ಶನ್, ಪ್ರೇಮ್ ಸೇರಿದಂತೆ ಸಾಕಷ್ಟು ಗಣ್ಯರು ವಿಶ್ ಮಾಡಿದ್ದಾರೆ.

Google kannada movie will be released tomorrow

ಅಂದಹಾಗೆ, 17ವರ್ಷದ ಹಿಂದೆ ನಡೆದ ನೈಜ ಘಟನೆ ಆಧರಿತ ಚಿತ್ರ. ಇಲ್ಲಿ 8 ಪಾತ್ರಗಳು ಬಂದು ಹೋಗುತ್ತವೆ. ಈ ಪಾತ್ರಗಳೇ ಚಿತ್ರದ ಜೀವಾಳ. ಉತ್ಸವ್ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಸಿನಿಮಾವನ್ನು ವಿ. ನಾಗೇಂದ್ರ ಪ್ರಸಾದ್‌ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಚಿತ್ರದ ಹಾಡುಗಳ ಸಾಹಿತ್ಯ ಹಾಗೂ ಸಂಗೀತ ಕೂಡಾ ನಾಗೇಂದ್ರ ಪ್ರಸಾದ್‌ ಅವರದೇ.

English summary
Kannada actres Shubha Punja and V Nagendra Prasad's Google kannada movie will releasing tomorrow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada