For Quick Alerts
  ALLOW NOTIFICATIONS  
  For Daily Alerts

  ಅಚ್ಚರಿ: ಭಾರತೀಯ ಚಿತ್ರರಂಗಕ್ಕೆ ನಟ ದರ್ಶನ್ ಬಾಸ್!?

  |

  ಕನ್ನಡದ ಸ್ಟಾರ್‌ ನಟ ದರ್ಶನ್ ಬಗ್ಗೆ ಕುತೂಹಲಕಾರಿ ವಿಚಾರವೊಂದು ಹರಿದಾಡುತ್ತಿದೆ. ದರ್ಶನ್ ಕನ್ನಡದ ಟಾಪ್‌ ಸ್ಟಾರ್‌ ನಟರಲ್ಲಿ ಒಬ್ಬರು. ದರ್ಶನ್ ಅವರಿಗೆ ತಮ್ಮದೇ ಆದ ಮಾಸ್‌ ಅಭಿಮಾನಿ ಬಳಗ ಇದೆ. ದರ್ಶನ್ ಅವರಿಗೆ ಸಿನಿಮಾಗಳನ್ನು ಮಾಡಲು ನಿರ್ಮಾಪಕರು ತುದಿಗಾಲಲ್ಲಿ ನಿಂತು ಕಾಯುತ್ತಾ ಇರುತ್ತಾರೆ. ಅದಕ್ಕೆ ಕಾರಣ ಅವರ ಸ್ಟಾರ್‌ ಡಮ್ ಹೊರತು ಮತ್ತೇನೂ ಅಲ್ಲ.

  ಸದ್ಯ ದರ್ಶನ್ ಬಗ್ಗೆ ಅಚ್ಚರಿಯ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಇದೆ. ದರ್ಶನ್ ಅವರನ್ನು ಅವರ ಅಭಿಮಾನಿಗಳು ದೇವರ ಹಾಗೆ ಆರಾಧಿಸುತ್ತಾರೆ. ಅಲ್ಲದೆ ದರ್ಶನ್ ಅವರನ್ನು ಬಾಸ್‌ ಎಂದೇ ಅವರ ಅಭಿಮಾನಿಗಳು ಕರೆಯುತ್ತಾರೆ.

  ಇತ್ತೀಚೆಗೆ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಅವರ ಬಗ್ಗೆ ಒಂದು ಪೋಸ್ಟರನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ ದರ್ಶನ್ ಅವರ ಬಗ್ಗೆ ಅಚ್ಚರಿ ಸಂಗತಿ ಒಂದು ಹೊರ ಬಿದ್ದಿದೆ. ಅದೇನು ಎನ್ನುವುದನ್ನು ತಿಳಿಯಲು ಮುಂದೆ ಓದಿ...

  ಗೂಗಲ್ ಹೇಳುತ್ತಿದೆ ದರ್ಶನ್ ಬಗ್ಗೆ ವಿಶೇಷ ಸಂಗತಿ!

  ಗೂಗಲ್ ಹೇಳುತ್ತಿದೆ ದರ್ಶನ್ ಬಗ್ಗೆ ವಿಶೇಷ ಸಂಗತಿ!

  ನಟ ದರ್ಶನ್ ಅವರ ಬಗ್ಗೆ ಗೂಗಲ್‌ ಸರ್ಚ್ ಇಂಜಿನ್ ಅಚ್ಚರಿ ಮತ್ತು ವಿಶೇಷವಾದ ವಿಚಾರವನ್ನು ಹೇಳುತ್ತಿದೆ. ಗೂಗಲ್ ಪ್ರಕಾರ ಭಾರತೀಯ ಚಿತ್ರರಂಗದ ಬಾಸ್ ನಟ ದರ್ಶನ್ ಅವರಂತೆ. ನೀವೇನಾದರು ಗೂಗಲ್‌ನಲ್ಲಿ 'ಬಾಸ್ ಆಫ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿ' ಎಂದು ಸರ್ಚ್ ಮಾಡಿದರೆ. ಈ ಅಚ್ಚರಿಯ ಉತ್ತರ ನಿಮಗೂ ಸಿಗುತ್ತದೆ. ಈ ರೀತಿ ಟೈಪ್‌ ಮಾಡಿ ಸರ್ಚ್ ಮಾಡಿದರೆ. ನಟ ದರ್ಶನ್ ಅವರ ಹೆಸರು, ಅವರ ಪ್ರೊಫೈಲ್ ಉತ್ತರವಾಗಿ ಸಿಗುತ್ತದೆ.

  ದರ್ಶನ್ ಅವರನ್ನು ಬಾಸ್ ಎಂದೇ ಕರೆಯುವ ಅಭಿಮಾನಿಗಳು!

  ದರ್ಶನ್ ಅವರನ್ನು ಬಾಸ್ ಎಂದೇ ಕರೆಯುವ ಅಭಿಮಾನಿಗಳು!

  ನಟ ದರ್ಶನ್ ಅವರನ್ನು ಅವರ ಅಭಿಮಾನಿಗಳು ಬಾಸ್, ಡಿ ಬಾಸ್ ಎಂದು ಕರೆಯುತ್ತಾರೆ. ದರ್ಶನ್ ಹೆಸರಿನ ಜೊತೆಗೆ ಬಾಸ್ ಎನ್ನುವ ಪದ ಸದಾ ಬಳಕೆ ಆಗುತ್ತದೆ. ಸಾಮಾಜಿಕ ಜಾತಾಣಗಳಲ್ಲಿ ಅವರ ಅಭಿಮಾನಿಗಳು ದರ್ಶನ‌ ಅವರನ್ನು ಬಾಸ್ ಎನ್ನುವ ಪದ ಬಳಸಿಯೇ ಕರೆಯುತ್ತಾರೆ. ಜೊತೆಗೆ ಸಾಕಷ್ಟು ಸುದ್ದಿಗಳು, ವರದಿಗಳಲ್ಲಿ ಡಿ ಬಾಸ್ ಎಂದು ಬಳಸಲಾಗಿರುತ್ತದೆ. ಹಾಗಾಗಿ ದರ್ಶನ್ ಅವರ ಹೆಸರಿನ ಜೊತೆಗೆ ಬಾಸ್ ಎನ್ನುವುದು ಸೇರಿ ಹೋಗಿದೆ. ಹಾಗಾಗಿ ಗೂಗಲ್‌ನಲ್ಲೂ ಅದು ಪ್ರತಿನಿಧಿಸುತ್ತಿದೆ. ಆದರೆ ಇಂಡಿಯನ್‌ ಸಿನಿಮಾಗೆ ಬಾಸ್ ಯಾರು ಎಂದರೆ ದರ್ಶನ್ ಅವರ ಹೆಸರು ಬರುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಇದೇ ಪೋಸ್ಟರ್ ಹಂಚಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  ಸಂಕ್ರಾತಿ ಸಂಭ್ರಮ ಹೆಚ್ಚಿಸಿದ ದರ್ಶನ್ ಹುಟ್ಟು ಹಬ್ಬ!

  ಸಂಕ್ರಾತಿ ಸಂಭ್ರಮ ಹೆಚ್ಚಿಸಿದ ದರ್ಶನ್ ಹುಟ್ಟು ಹಬ್ಬ!

  ನಟ ದರ್ಶನ್ ಅಭಿಮಾನಿಗಳು ದರ್ಶನ್ ಹುಟ್ಟು ಹಬ್ಬವನ್ನು ಸಂಭ್ರಮಿಸಲು ಸಿದ್ಧವಾಗಿ ಬಿಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ದರ್ಶನ್ ಅವರ ಹುಟ್ಟು ಹಬ್ಬವನ್ನೂ ಕೂಡ ಆಚರಿಸಲು ಅಭಿಮಾನಿಗಳು ಸಿದ್ಧವಾಗಿದ್ದಾರೆ. ಇದೇ ಫೆಬ್ರವರಿ 16ರಂದು ದರ್ಶನ್ ಹುಟ್ಟು ಹಬ್ಬ ಹಾಗಾಗಿ ಅವರ ಅಭಿಮಾನಿಗಳು ದೊಡ್ಡ ಮಟ್ಟದ ಟ್ರೆಂಡ್ ಹುಟ್ಟು ಹಾಕಲು ಸಜ್ಜಾಗಿದ್ದಾರೆ. 15ನೇ ತಾರೀಕು ಟ್ರೆಂಡ್ ಹುಟ್ಟು ಹಾಕಲು ದಿನಾಂಕವನ್ನು ನಿಗದಿ ಮಾಡಿಕೊಂಡಿದ್ದಾರೆ.

  ದರ್ಶನ್ ಪಾಲಿಗೆ ಅಭಿಮಾನಿಗಳೇ ಸೆಲೆಬ್ರೆಟಿಗಳು!

  ದರ್ಶನ್ ಪಾಲಿಗೆ ಅಭಿಮಾನಿಗಳೇ ಸೆಲೆಬ್ರೆಟಿಗಳು!

  ಇನ್ನು ನಟ ದರ್ಶನ್ ಮತ್ತು ಅವರ ಅಭಿಮಾನಿಗಳ ನಡುವೆ ವಿಶೇಷವಾದ ಬಂಧ ಇದೆ. ಅಭಿಮಾನಿಗಳು ದರ್ಶನ್ ಅವರನ್ನು ಹೇಗೆ ಆರಾಧಿಸುತ್ತಾರೋ ಅದೇ ರೀತಿ ದರ್ಶನ್ ಅವರೂ ಕೂಡ ತಮ್ಮ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಅಷ್ಟಕ್ಕೂ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಅಂತನೇ ಕರೆಯುತ್ತಾರೆ.

  English summary
  Google Says Kannada Actor Darshan Is Boss Of Indian Film Industry,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X