Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಸರ್ಚ್ ಅದ 10 ಚಿತ್ರಗಳ ಪಟ್ಟಿ; ಕಾಂತಾರಕ್ಕೆ 5ನೇ ಸ್ಥಾನ, ಕೆಜಿಎಫ್‌ಗೆ ಎಷ್ಟು?
2022 ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಎಂದರೆ ತಪ್ಪಾಗಲಾರದು. ಕಳೆದೆರಡು ವರ್ಷಗಳಿಂದ ಕೋವಿಡ್ ಹೊಡೆತಕ್ಕೆ ಸಿಲುಕಿ ಸರಿಯಾದ ವ್ಯವಹಾರ ಕಾಣದೇ ಮಂಕಾಗಿದ್ದ ಎಲ್ಲಾ ಭಾಷೆಯ ಚಿತ್ರರಂಗಗಳೂ ಸುಧಾರಿಸಿಕೊಂಡದ್ದು ಈ ವರ್ಷದಲ್ಲಿ ಎಂದರೆ ತಪ್ಪಾಗಲಾರದು. ಅದರಲ್ಲಿಯೂ ದಕ್ಷಿಣ ಭಾರತ ಚಿತ್ರರರಂಗಗಳು ಈ ವರ್ಷ ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಾಗೂ ಬಾಕ್ಸ್ ಆಫೀಸ್ ಎರಡೂ ವಿಚಾರದಲ್ಲಿಯೂ ಬಾಲಿವುಡ್ ಚಿತ್ರರಂಗವನ್ನೇ ಮೀರಿಸಿದ್ದು ವಿಶೇಷ ಎನ್ನಬಹುದು.
ಕೇವಲ ಬಾಲಿವುಡ್ ಚಿತ್ರರಂಗಕ್ಕಿಂತ ಹೆಚ್ಚಿನ ಸದ್ದು ಮಾಡಿದ್ದು ಮಾತ್ರವಲ್ಲದೇ ಬಾಲಿವುಡ್ ಮಾರ್ಕೆಟ್‌ನಲ್ಲಿಯೂ ಕೋಟಿ ಕೋಟಿ ಕೊಳ್ಳೆ ಹೊಡೆದವು ಸೌತ್ ಸಿನಿಮಾಗಳು. ಹೀಗೆ ಈ ವರ್ಷ ಸಂಪೂರ್ಣವಾಗಿ ಸೌತ್ ಸಿನಿಮಾಗಳ ಪಾರುಪತ್ಯದಿಂದ ಕೂಡಿತ್ತು ಎಂದೇ ಹೇಳಬಹುದು. ಇನ್ನು ದಕ್ಷಿಣ ಭಾರತ ಚಿತ್ರಗಳ ಅಬ್ಬರದ ನಡುವೆ ಬಾಲಿವುಡ್‌ನ ಕೆಲ ಚಿತ್ರಗಳು ಸಹ ಒಳ್ಳೆಯ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿವೆ.
ಹೀಗೆ ಈ ವರ್ಷ ಹಲವಾರು ಚಿತ್ರಗಳು ಅಬ್ಬರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಈ ಚಿತ್ರಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿವೆ ಹಾಗೂ ಗೂಗಲ್‌ನಲ್ಲೂ ಸಹ ಈ ಚಿತ್ರಗಳ ಹೆಸರನ್ನು ನೆಟ್ಟಿಗರು ಹುಡುಕಾಡಿದ್ದಾರೆ. ಇನ್ನು ವರ್ಷದ ಅಂತಿಮ ತಿಂಗಳಿನಲ್ಲಿ ಯಾವ ಹತ್ತು ಚಿತ್ರಗಳನ್ನು ಭಾರತೀಯರು ಹೆಚ್ಚಾಗಿ ಗೂಗಲನ್‌ಲ್ಲಿ ಹುಡುಕಾಡಿದ್ದಾರೆ ಎಂಬ ಪಟ್ಟಿಯನ್ನು ಸ್ವತಃ ಗೂಗಲ್ ಬಿಡುಗಡೆಗೊಳಿಸಿದ್ದು, ಆ ಪಟ್ಟಿ ಈ ಕೆಳಕಂಡಂತಿದೆ..

ಗೂಗಲ್‌ನಲ್ಲಿ ಅತಿಹೆಚ್ಚು ಸರ್ಚ್ ಆದ ಹತ್ತು ಚಿತ್ರಗಳ ಪಟ್ಟಿ
2022ರಲ್ಲಿ ಗೂಗಲ್‌ನಲ್ಲಿ ಭಾರತೀಯರು ಅತಿಹೆಚ್ಚು ಹುಡುಕಾಡಿದ ಚಿತ್ರಗಳ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..
1. ಬ್ರಹ್ಮಾಸ್ತ್ರ - ಪಾರ್ಟ್ 1 ಶಿವ
2. ಕೆಜಿಎಫ್ ಚಾಪ್ಟರ್ 2
3. ದಿ ಕಾಶ್ಮೀರ್ ಫೈಲ್ಸ್
4. ಆರ್ ಆರ್ ಆರ್
5. ಕಾಂತಾರ
6. ಪುಷ್ಪ - ದಿ ರೈಸ್
7. ವಿಕ್ರಮ್
8. ಲಾಲ್ ಸಿಂಗ್ ಛಡ್ಡಾ
9. ದೃಶ್ಯಂ 2
10. ಥೋರ್: ಲವ್ ಅಂಡ್ ಥಂಡರ್

ಕನ್ನಡದ ಎರಡು ಚಿತ್ರಗಳು
ಇನ್ನು ಕನ್ನಡದ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಈ ವರ್ಷ ಗೂಗಲ್‌ನಲ್ಲಿ ಭಾರತೀಯರಿಂದ ಅತಿಹೆಚ್ಚು ಬಾರಿ ಹುಡುಕಲ್ಪಟ್ಟ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಕೆಜಿಎಫ್ ಸೃಷ್ಟಿಸಿದ್ದ ಹೈಪ್ ಹಾಗೂ ಬಿಡುಗಡೆಯಾದ ನಂತರ ಮಾಡಿದ ಮೋಡಿ ಮತ್ತು ಕಲೆಕ್ಷನ್‌ನಿಂದಾಗಿ ಹೆಚ್ಚು ಹುಡುಕಲ್ಪಟ್ಟರೆ, ಕಾಂತಾರ ಚಿತ್ರವನ್ನೂ ಸಹ ನೆಟ್ಟಿಗರು ಹೆಚ್ಚಿನ ಮಟ್ಟದಲ್ಲಿ ಹುಡುಕಾಡಿದ್ದಾರೆ.

ಎರಡೇ ತಿಂಗಳಲ್ಲಿ ಅತಿಹೆಚ್ಚಾಗಿ ಹುಡುಕಲ್ಪಟ್ಟ ಕಾಂತಾರ
ಇನ್ನು ಈ ಪಟ್ಟಿಯಲ್ಲಿ ಕಾಂತಾರ ಐದನೇ ಸ್ಥಾನ ಗಿಟ್ಟಿಸಿಕೊಂಡಿರುವುದು ಬಲು ವಿಶೇಷ ಎಂದೇ ಹೇಳಬಹುದು. ಏಕೆಂದರೆ ಉಳಿದೆಲ್ಲಾ ಚಿತ್ರಗಳಿಗೂ ಬಿಡುಗಡೆಗೂ ಮುಂಚಿನಿಂದಲೂ ಹೈಪ್ ಇತ್ತು. ಹೀಗಾಗಿ ಆ ಚಿತ್ರಗಳ ಬಗ್ಗೆ ನೆಟ್ಟಿಗರು ಹುಡುಕಾಟ ನಡೆಸಿದ್ದರು. ಆದರೆ ಕಾಂತಾರ ಚಿತ್ರ ಬಿಡುಗಡೆಗೂ ಮುನ್ನ ಹೆಚ್ಚೇನೂ ಹುಡುಕಲ್ಪಟ್ಟಿರಲಿಲ್ಲ. ಇನ್ನು ಕಾಂತಾರ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಬಿಡುಗಡೆಗೊಂಡಿತ್ತು. ಹೀಗಾಗಿ ಕೇವಲ ಎರಡು ತಿಂಗಳುಗಳ ಅಂತರದಲ್ಲಿ ಕಾಂತಾರ ಚಿತ್ರದ ಬಗ್ಗೆ ಗೂಗಲ್‌ನಲ್ಲಿ ಇಷ್ಟರ ಮಟ್ಟಕ್ಕೆ ನೆಟ್ಟಿಗರು ಹುಡುಕಿರುವುದು ವಿಶೇಷವೇ ಸರಿ.