ದೇಶದ ಗಮನ ಸೆಳೆದಿದ್ದಾರೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಸಿನಿಮಾರಂಗದ ಬ್ಯುಸಿ ನಟಿಯರಲ್ಲಿ ಒಬ್ಬರು. ಕೊಡಗಿನ ಈ ಚೆಲುವೆ ಕನ್ನಡದಿಂದ ನಟನಾವೃತ್ತಿ ಪ್ರಾರಂಭಿಸಿದರಾದರೂ ಈಗ ಮಿಂಚುತ್ತಿರುವುದು ತೆಲುಗು ತಮಿಳಿನಲ್ಲಿ.

ತೆಲುಗು, ತಮಿಳಿನಲ್ಲಿ ದೊಡ್ಡ ಅಭಿಮಾನಿವರ್ಗ ಹೊಂದಿರುವ ರಶ್ಮಿಕಾ ಮಂದಣ್ಣ, ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್. ದೇಶದಾದ್ಯಂತ ಹಲವರು ರಶ್ಮಿಕಾ ಕ್ಯೂಟ್‌ನೆಸ್‌ಗೆ ಮನಸೋತಿದ್ದಾರೆ.

ಕರ್ನಾಟಕದ ಕ್ರಶ್ ಎಂದು ಕರೆಸಿಕೊಳ್ಳುತ್ತಿದ್ದ ಚೆಲುವೆ ರಶ್ಮಿಕಾ ಮಂದಣ್ಣ, ಈಗ ದೇಶದ ಕ್ರಶ್ ಆಗಿದ್ದಾರೆ. ಈ ವಿಷಯವನ್ನು ಹೇಳುತ್ತಿರುವುದು ಸ್ವತಃ ಗೂಗಲ್. ಹೌದು, ಗೂಗಲ್‌ನಲ್ಲಿ 'ನ್ಯಾಷನಲ್ ಕ್ರಶ್ ಆಫ್ ಇಂಡಿಯಾ' ಎಂದು ಟೈಪಿಸಿದರೆ ರಶ್ಮಿಕಾ ಮಂದಣ್ಣ ಚಿತ್ರ ಮೂಡುತ್ತಿದೆ.

ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಮಂದಣ್ಣ

ಹೌದು, ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿದ್ದಾರೆ, ಈ ಹಿಂದೆ ನ್ಯಾಷನಲ್ ಕ್ರಶ್ ಎನಿಸಿಕೊಂಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್, ದಿಶಾ ಪಟಾನಿ ಅವರುಗಳನ್ನು ಹಿಂದಿಕ್ಕಿ 'ನ್ಯಾಷನಲ್ ಕ್ರಶ್ ಆಫ್‌ ದಿ ಇಂಡಿಯಾ' ಎಸಿನಿಕೊಂಡಿದ್ದಾರೆ ರಶ್ಮಿಕಾ.

ರಶ್ಮಿಕಾ ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿವೆ

ರಶ್ಮಿಕಾ ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿವೆ

ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಮಾತ್ರವೇ ರಶ್ಮಿಕಾ ನಟಿಸಿದ್ದಾರೆ. ಆದರೆ ಅವರ ನಟನೆಯ ಹಲವು ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿ ಸಾಕಷ್ಟು ಮಂದಿಯಿಂದ ವೀಕ್ಷಿಸಲ್ಪಟ್ಟಿದ್ದು, ರಾಷ್ಟ್ರಮಟ್ಟದಲ್ಲಿ ರಶ್ಮಿಕಾ ಗಮನ ಸೆಳೆದಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ

ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ

ರಶ್ಮಿಕಾ ಮಂದಣ್ಣ ಅವರ ಮುಂದಿನ ಸಿನಿಮಾ ಪುಷ್ಪ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ದಕ್ಷಿಣದ ಭಾಷೆಗಳ ಜೊತೆಗೆ ಹಿಂದಿ ಭಾಷೆಯಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತಿದೆ. ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಬಾಲಿವುಡ್ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರೆ ಅಚ್ಚರಿಯಿಲ್ಲ.

Recommended Video

ನೂರಾರು ಅಭಿಮಾನಿಗಳ ಮುಂದೆಯೇ ಬಿಂದಾಸ್ ಆಕ್ಟಿಂಗ್ ಮಾಡಿದ ಶಿವಣ್ಣ | Shivanna | Filmibeat Kannada
ಎರಡು ಸಿನಿಮಾ ಬಿಡುಗಡೆಗೆ ರೆಡಿ

ಎರಡು ಸಿನಿಮಾ ಬಿಡುಗಡೆಗೆ ರೆಡಿ

ಕನ್ನಡದ ಪೊಗರು ಸಿನಿಮಾದ ಚಿತ್ರೀಕರಣ ಈಗಷ್ಟೆ ಮುಗಿಸಿರುವ ರಶ್ಮಿಕಾ ಮಂದಣ್ಣ, ತೆಲುಗಿನ ಬಹುನಿರೀಕ್ಷಿತ ಸಿನಿಮಾ ಪುಷ್ಪಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ತಮಿಳಿನ ಸುಲ್ತಾನ್ ಚಿತ್ರೀಕರಣ ಸಹ ಮುಗಿಸಿರುವ ರಶ್ಮಿಕಾ, 'ಆಡೋಳ್ಳು ಮೀಕು ಜೋಹಾರ್ಲು' ಸಿನಿಮಾಕ್ಕೆ ಎಸ್ ಅಂದಿದ್ದಾರೆ.

More from Filmibeat

English summary
Google showing actress Rrashmika Mandanna as national crush of India. Rashmika surpasses Priya Prakash varrier, Disha Patani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X