For Quick Alerts
  ALLOW NOTIFICATIONS  
  For Daily Alerts

  ಕನ್ನಡ ನಟಿ ಪೂಜಾ ಗಾಂಧಿ ಆ ಬಾಲಿವುಡ್ ನಟನ ಪತ್ನಿಯಂತೆ.!

  |

  'ಮಳೆ' ಹುಡುಗಿ ಪೂಜಾ ಗಾಂಧಿ ಎಲ್ಲೋದ್ರೂ ಎಂಬ ಪ್ರಶ್ನೆ ಕೆಲವರಿಗೆ ಕಾಡಿದೆ. ದಂಡುಪಾಳ್ಯ 2 ಮತ್ತು ದಂಡುಪಾಳ್ಯ 3 ಸಿನಿಮಾಗಳ ಬಳಿಕ ಪೂಜಾ ತೆರೆಮೇಲೆ ಕಾಣಿಸಿಲ್ಲ.

  ಈ ಮಧ್ಯೆ 'ಸಿಂಹಾರಿಣಿ' ಎಂಬ ಹೆಸರಿನಲ್ಲಿ ಸಾಹಸ ಪ್ರಧಾನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಪೂಜಾಗಾಂಧಿ, ಫಸ್ಟ್ ಲುಕ್ ಪೋಸ್ಟರ್ ನಿಂದ ಗಮನ ಸೆಳೆದಿದ್ದರು. ಇದಾದ ಮೇಲೂ ಪೂಜಾ ಗಾಂಧಿ ಆಗಲಿ ಅಥವಾ ಅವರ ಸಿನಿಮಾ ಬಗ್ಗೆ ಆಗಲಿ ಅಪ್ಡೇಟ್ ಇಲ್ಲ.

  ಪೂಜಾ ಗಾಂಧಿ ನಟನೆಯ ಹೊಸ ಸಿನಿಮಾ ಶುರುಪೂಜಾ ಗಾಂಧಿ ನಟನೆಯ ಹೊಸ ಸಿನಿಮಾ ಶುರು

  ಇದೀಗ, ಪೂಜಾ ಗಾಂಧಿ ಅವರ ಹೆಸರು ಬಾಲಿವುಡ್ ನಟನ ಜೊತೆ ಸದ್ದು ಮಾಡ್ತಿದೆ. ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪೂಜಾ ಗಾಂಧಿ, ನಂತರ ಆ ಮದುವೆಗೆ ಬ್ರೇಕ್ ಹಾಕಿದ್ದರು. ಈ ಘಟನೆ ಬಳಿಕ ಪೂಜಾ ಗಾಂಧಿ ಮದುವೆ ವಿಚಾರ ಎಲ್ಲೂ ಕೇಳಿಬಂದಿರಲಿಲ್ಲ. ಇದೀಗ, ಬಾಲಿವುಡ್ ನಟನ ಜೊತೆಯಲ್ಲಿ ಮದ್ವೆ ಆಗಿದ್ಯಾ ಎಂಬ ವಿಷಯಕ್ಕೆ ಕಾರಣವಾಗಿದೆ ಆ ಒಂದು ಎಡವಟ್ಟು? ಏನದು? ಮುಂದೆ ಓದಿ....

  ಸನ್ನಿ ಡಿಯೋಲ್ ಪತ್ನಿಯಾದ್ರಾ ಪೂಜಾಗಾಂಧಿ?

  ಸನ್ನಿ ಡಿಯೋಲ್ ಪತ್ನಿಯಾದ್ರಾ ಪೂಜಾಗಾಂಧಿ?

  ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಪತ್ನಿಯಾದ್ರಾ ಪೂಜಾ ಗಾಂಧಿ ಎಂಬ ಪ್ರಶ್ನೆ, ಅನುಮಾನ ಕಾಡ್ತಿದೆ. ಇದಕ್ಕೆ ಕಾರಣ ಗೂಗಲ್ ಮಾಡಿರುವ ಎಡವಟ್ಟು. ಗೂಗಲ್ ನಲ್ಲಿ ಸನ್ನಿ ಡಿಯೋಲ್ ವೈಫ್ ಎಂದು ಹುಡುಕಿದರೆ, ಪೂಜಾ ಡಿಯೋಲ್ ಎಂದು ಬರುತ್ತೆ. ಆ ಹೆಸರಿಗೆ ಕನ್ನಡ ನಟಿ ಪೂಜಾ ಗಾಂಧಿ ಫೋಟೋ ತೋರಿಸುತ್ತೆ.

  ''ನಾನು ಯಾರ ಜೊತೆಯೂ ರೂಮ್ ಬುಕ್ ಮಾಡಿಲ್ಲ'' : ಪೂಜಾಗಾಂಧಿ ಸ್ಪಷ್ಟನೆ

  ಹೆಸರು ನಿಜಾ, ಫೋಟೋ ತಪ್ಪು

  ಹೆಸರು ನಿಜಾ, ಫೋಟೋ ತಪ್ಪು

  ಸನ್ನಿ ಡಿಯೋಲ್ ಅವರ ಪತ್ನಿ ಹೆಸರು ಲಿಂಡಾ ಡಿಯೋಲ್ ಅಲಿಯಾಸ್ ಪೂಜಾ ಡಿಯೋಲ್. ಗೂಗಲ್ ನಲ್ಲಿ ಹೆಸರು ಸರಿಯಾಗಿ ತೋರಿಸುತ್ತಿದೆ. ಆದರೆ, ಪೂಜಾ ಡಿಯೋಲ್ ಫೋಟೋ ಬದಲು, ಪೂಜಾ ಗಾಂಧಿ ಫೋಟೋ ಬರುತ್ತಿದೆ.

  ರವಿಚಂದ್ರನ್ ಫೋಟೋ ತಂದ ಗೊಂದಲ: ಇದು ಯಾರ ಎಡವಟ್ಟು?ರವಿಚಂದ್ರನ್ ಫೋಟೋ ತಂದ ಗೊಂದಲ: ಇದು ಯಾರ ಎಡವಟ್ಟು?

  ಈಗಲೂ ರವಿಚಂದ್ರನ್ ಫೋಟೋ ಬರುತ್ತೆ

  ಈಗಲೂ ರವಿಚಂದ್ರನ್ ಫೋಟೋ ಬರುತ್ತೆ

  ಗೂಗಲ್ ಈ ರೀತಿ ತಪ್ಪು ತೋರಿಸುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಹಲವು ಸಲ ಇಂತಹದ್ದೇ ತಪ್ಪುಗಳನ್ನ ಮಾಡಿದೆ. ಈ ಹಿಂದೆ ವೇಣು ರವಿಚಂದ್ರನ್ ಎಂಬುವರ ಹೆಸರು ಹುಡುಕಿದರೆ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಫೋಟೋ ಬರುತ್ತಿತ್ತು. ದುರಂತ ಈಗಲೂ ರವಿಚಂದ್ರನ್ ಫೋಟೋ ಬರುತ್ತೆ.

  ಗೊತ್ತಿಲ್ಲದವರು ನಿಜಾ ಎಂದು ನಂಬುತ್ತಾರೆ

  ಗೊತ್ತಿಲ್ಲದವರು ನಿಜಾ ಎಂದು ನಂಬುತ್ತಾರೆ

  ರವಿಚಂದ್ರನ್ ಯಾರು, ವೇಣು ರವಿಚಂದ್ರನ್ ಯಾರು, ಪೂಜಾ ಗಾಂಧಿ ಯಾರು, ಪೂಜಾ ಡಿಯೋಲ್ ಯಾರು ಎಂಬ ಪರಿಚಯ ಇರುವವರು, ಸರಿ ಗೂಗಲ್ ತಪ್ಪು ತೋರಿಸುತ್ತಿದೆ ಎಂದು ಗಮನಿಸುತ್ತಾರೆ. ಒಂದು ವೇಳೆ ಅವರ ಪರಿಚಯವಿಲ್ಲದವರು, ಅದನ್ನ ನಿಜಾ ಎಂದು ನಂಬುವಂತಾಗುತ್ತೆ. ಇದೀಗ, ಕನ್ನಡದ ಪೂಜಾ ಗಾಂಧಿ ಅವರ ಫೋಟೋವನ್ನ ಪೂಜಾ ಡಿಯೋಲ್ ಎಂದು ಕೆಲವು ಯೂಟ್ಯುಬ್ ಚಾನಲ್ ಗಳು ನಂಬಿ, ಫೋಟೋ ಬಳಸಿಕೊಂಡಿದೆ.

  English summary
  Google showing wrong result when people are searched for sunny deol wife name and photo.
  Monday, November 4, 2019, 17:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X