»   » ಕಳೆದ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು

ಕಳೆದ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು

Posted By:
Subscribe to Filmibeat Kannada

ಕಳೆದ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ಯಾವುದು ಇರಬಹುದು ಎಂಬ ಕುತೂಹಲ ಕಾಡುವುದು ಸಹಜ. ಈ ಕುತೂಹಲಕ್ಕೆ ಗೂಗಲ್ ಟ್ರೆಂಡ್ ಉತ್ತರ ನೀಡಿದೆ. ಹಾಗಿದ್ದರೇ, 2017ರಲ್ಲಿ ಹೆಚ್ಚು ಪ್ರಚಾರ ಪಡೆದುಕೊಂಡ ಹಾಗೂ ಅತಿ ಹೆಚ್ಚು ಸುದ್ದಿಯಾದ ಸಿನಿಮಾ ಯಾವುದು?

ವರ್ಷವೀಡಿ ಸೌಂಡ್ ಮಾಡಿದ ಚಿತ್ರಗಳನ್ನ ಗೂಗಲ್ ರೇಟಿಂಗ್ ಮೂಲಕ ಪಟ್ಟಿ ಮಾಡಿದೆ. ಭಾರತದಲ್ಲಿ ಯಾವ ಚಿತ್ರದ ಬಗ್ಗೆ ತಿಳಿದುಕೊಳ್ಳಲು ಜನ ಹೆಚ್ಚು ಆಸಕ್ತಿ ಹೊಂದಿದ್ದರು ಎಂಬುದು ಬಹಿರಂಗವಾಗಿದೆ.

ಈ ವರ್ಷ ಅತಿ ಹೆಚ್ಚು ಸೌಂಡ್ ಮಾಡಿದ ಡೈಲಾಗ್ ಯಾವುದು?

ನಿರೀಕ್ಷೆಯಂತೆ ಈ ಪಟ್ಟಿಯಲ್ಲಿ ಬಾಹುಬಲಿ ಚಿತ್ರವೇ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಬೇರೆ ಬೇರೆ ಚಿತ್ರಗಳಿವೆ. ಹಾಗಿದ್ರೆ, ಕಳೆದ ವರ್ಷ ಗೂಗಲ್ ನಲ್ಲಿ ಟ್ರೆಂಡ್ ಆಗಿದ್ದ ಚಿತ್ರಗಳು ಯಾವುದು ಎಂದು ತಿಳಿಯಲು ಮುಂದೆ ಓದಿ.....

ಬಾಹುಬಲಿ ದಿ ಕನ್ ಕ್ಲೂಷನ್

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ ದಿ ಕನ್ ಕ್ಲೂಷನ್' ಚಿತ್ರದ ಬಗ್ಗೆ ತಿಳಿಯಲು ಜನರು ಹೆಚ್ಚು ಹುಡುಕಿದ್ದಾರೆ. ಪ್ರಭಾಸ್, ರಾಣಾ, ತಮನ್ನಾ, ಅನುಷ್ಕಾ ಸೇರಿದಂತೆ ಹಲವರು ಅಭಿನಯಿಸಿದ್ದರು. ಮೊದಲ ಭಾಗ 2015ರಲ್ಲಿ ರಿಲೀಸ್ ಆಗಿತ್ತು. ಎರಡನೇ ಭಾಗ 2017ರ ಏಪ್ರಿಲ್ 28ರಂದು ಬಿಡುಗಡೆಯಾಗಿತ್ತು.

ದಂಗಲ್

'ಬಾಹುಬಲಿ' ಚಿತ್ರದ ನಂತರ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದ ಬಗ್ಗೆ ಜನರು ಹೆಚ್ಚು ಹುಡುಕಿದ್ದಾರೆ. ಡಿಸೆಂಬರ್ 21ರಂದು ಬಿಡುಗಡೆಯಾಗಿದ್ದ ದಂಗಲ್, ಬಾಹುಬಲಿ ಚಿತ್ರದ ಗಳಿಕೆಯನ್ನ ಹಿಂದಿಕ್ಕಿತ್ತು.

ಈ ವರ್ಷ ಮುಗಿಯಿತು, ಮುಂದಿನ ವರ್ಷ ಅಬ್ಬರಿಸಲಿರುವ ಅದ್ಧೂರಿ ಚಿತ್ರಗಳು

ಹಾಫ್ ಗರ್ಲ್ ಫ್ರೆಂಡ್

ಅರ್ಜುನ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಅಭಿನಯದಲ್ಲಿ ಮೂಡಿ ಬಂದಿದ್ದ 'ಹಾಫ್ ಗರ್ಲ್ ಫ್ರೆಂಡ್' ಚಿತ್ರದ ಬಗ್ಗೆ ಪ್ರೇಕ್ಷಕರು ಹೆಚ್ಚು ಹುಡುಕಿದ್ದಾರೆ. ಮೇ 19 ರಂದು ಈ ಸಿನಿಮಾ ರಿಲೀಸ್ ಆಗಿತ್ತು.

ಬದ್ರಿನಾಥ್ ಕಿ ದುಲ್ಹನಿಯಾ

ವರುಣ್ ಧವನ್ ಮತ್ತು ಆಲಿಯಾ ಭಟ್ ಅಭಿನಯಿಸಿದ್ದ 'ಬದ್ರಿನಾಥ್ ಕಿ ದುಲ್ಹನಿಯಾ' ಚಿತ್ರವೂ ಕಳೆದ ವರ್ಷ ಹೆಚ್ಚು ಗಮನ ಸೆಳೆದಿದೆ. ಮಾರ್ಚ್ 10 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.

ಮುನ್ನ ಮೈಕಲ್

ಟೈಗರ್ ಶ್ರಾಫ್, ನವಾಜ್ಜುದ್ದಿನ್ ಸಿದ್ದಿಕಿ, ನಿಧಿ ಅಗರ್ ವಲ್ ಅಭಿನಯದ 'ಮುನ್ನ ಮೈಕಲ್' ಚಿತ್ರದ ಬಗ್ಗೆ ಜನರು ಹುಡುಕಿದ್ದಾರೆ. ಜುಲೈ 21 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.

2017ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳು

ಜಗ್ಗ ಜಾಸೂಸ್

ರಣ್ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ 'ಜಗ್ಗ ಜಾಸೂಸ್' ಸಿನಿಮಾ ಕಳೆದ ವರ್ಷ ಬಿಡುಗಡೆಯಾದ ಚಿತ್ರ. ಬಿಡುಗಡೆಗೆ ಮುಂಚೆ ಹೆಚ್ಚು ಸುದ್ದಿ ಮಾಡಿತ್ತಾದ್ರೂ, ಬಿಡುಗಡೆಯ ನಂತರ ಫ್ಲಾಫ್ ಆಗಿತ್ತು. ಶಾರೂಖ್ ಖಾನ್ ಅಭಿನಯದ 'ರಯೀಸ್', 'ಫಾಸ್ಟ್ ಅಂಡ್ ಫ್ಯೂರಿಯಸ್', 'ರಬ್ತಾ', 'ಒಕೆ ಜಾನು' ಚಿತ್ರಗಳು ನಂತರದ ಸ್ಥಾನದಲ್ಲಿದೆ.

English summary
Recently, Google India has declared the most searched movies of 2017 in India. Like every year, this year too, Bollywood remains one of the most dominating searches. The list includes Baahubali 2, Dangal, etc.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X