ಸಿನ್ಮಾ ಟೈಟಲ್ಗೆ ಟ್ರೈಲರ್, ಯಶ್ 'ಗೂಗ್ಲಿ' ಕಮಾಲ್

By Mahesh

ಪವನ, ಟೈಟಲ್ಗೆ ಟ್ರೈಲರ್ರಾ.. ಜನ ಮುಖ್ ಉಗಿಯೋಲ್ವ. ಪರ್ವಾಗಿಲ್ಲ ಬಿಡಿ ಫಸ್ಟ್ ಸಿನ್ಮಾದಲ್ಲೇ ಸಕತ್ತಾಗಿ ಉಗಿಸಿಕೊಂಡಿದ್ವಿ ಎಂದು ನಿರ್ದೇಶಕ ಪವನ್ ಹೇಳುತ್ತಾರೆ. ಪಂಚಿಂಗ್ ಡೈಲಾಗ್ ಮೂಲಕ ಪ್ರೇಕ್ಷಕರ ಮನಗೆದ್ದ ಯುವ ನಿರ್ದೇಶಕ ಪವನ್ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು.. ಯಶ್ ಹಾಗೂ ಗೋವಿಂದಾಯ ನಮಃ ಖ್ಯಾತಿಯ ಪವನ್ ಒಡೆಯರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸಂಗಮದ ಹೊಸ ಚಿತ್ರ ಗೂಗ್ಲಿ ಟೈಟಲ್ ಟ್ರೈಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

ಗೋವಿಂದಾಯ ನಮಃ 'ಸೂಪರ್ ಹಿಟ್' ಚಿತ್ರದ ಸಾಲಿಗೆ ಸೇರಿದೆ. ಯೋಗರಾಜ್ ಭಟ್ ಶಿಷ್ಯರಾಗಿರುವ ಪವನ್ ಒಡೆಯರ್, ತಮ್ಮ ಮೊಟ್ಟಮೊದಲ ಚಿತ್ರದಲ್ಲೇ ಸ್ಯಾಂಡಲ್ ವುಡ್ ಪ್ರೇಕ್ಷಕರ ಪ್ರೀತಿ ಗಳಿಸಿದ್ದಾರೆ. 'ಗೋವಿಂದಾಯ ನಮಃ' ಚಿತ್ರ 100 ದಿನಗಳ ಯಶಸ್ವಿ ಪ್ರದರ್ಶನ ದಾಖಲಿಸಿದ ಚಿತ್ರವಾಗಿ ಹೊರಹೊಮ್ಮಿದೆ.

ಟ್ರೈಲರ್ ನಲ್ಲಿ ಏನಿದೆ?: ಈ ಗೂಗ್ಲಿ ಎಂದರೆ ನೋಡ್ಕೊಂಡು ಬನ್ನಿ ಎಂದು ಪವನ್ ಒಡೆಯರ್ ಹೇಳುತ್ತಾರೆ.ಗೂಗ್ಲಿ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೇಳಲಾಗುತ್ತೆ. ಹಲವರು ಕ್ರಿಕೆಟ್ ಸ್ಪಿನ್ ಬಗ್ಗೆ ಹೇಳುತ್ತಾರೆ ಒಬ್ಬರಂತೂ ಗೂಬೆ ಇರ್ಬೇಕು ಎನ್ನುತ್ತಾರೆ.

ಲವ್ವಿಗೂ ಗೂಗ್ಲಿಗೂ ಏನ್ ಸಂಬಂಧ? : ಈ ಲವ್ವು ಅಂದ್ರೆನೇ ಒಂಥರಾ ಗೂಗ್ಲಿ ಬಾಲ್ ಇದ್ದಂಗೆ, ಹಂಗ್ ಅಂದ್ಕೊಂಡ್ರೆ ಹಂಗ್ ಆಗಲ್ಲ, ಹಿಂಗ್ ಅಂದ್ಕೊಂಡ್ರೆ ಹಿಂಗ್ ಆಗಲ್ಲ. ಮೊದಲೆ ನಮ್ಗೆ ಗಾರ್ಡ್ ಹಾಕ್ಕೊಂಡ್ ಆಡಿ ಅಭ್ಯಾಸ ಇಲ್ಲ. ಅದ್ಕೆ ನಾವ್ ಲವ್ವೇ ಮಾಡಲ್ಲ

ಯಶ್ ಹಾಗೂ ಕೃತಿ ಕರಬಂದ ಜೋಡಿಯ ಈ ಚಿತ್ರಕ್ಕೆ ತೆಲುಗಿನ ಜೋಶುವ ಶ್ರೀಧರ್ ಸಂಗೀತವಿದೆ. ಎಂದಿನಂತೆ ಸಾಹಿತ್ಯ ಪವನ್ ಒಡೆಯರ್ ಹಾಗೂ ಅವರ ಗುರು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಅವರದ್ದಾಗಿರುತ್ತದೆ.

ಸಕಲೇಶಪುರ, ಮೂಡುಬಿದರೆ, ಮಂಗಳೂರು ಕಡೆ ಸುಮಾರು 40 ಚಿತ್ರಗಳ ಚಿತ್ರೀಕರಣ ಮಾಡುವ ಶ್ಯೂಡೆಲ್ ಚಿತ್ರಕ್ಕಿದೆ. ಒಟ್ಟಾರೆ ಪ್ರೇಕ್ಷಕರ ಆಸಕ್ತಿ ಕೆರಳಿಸುತ್ತಿರುವ ಈ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಪಾಪ್ಯುಲರ್ ಆಗಿ ಬಿಟ್ಟಿದೆ.

More from Filmibeat

English summary
‘Govindayanamaha’ fame film director Pawan Wadiyar's ‘Googly’ is making good spin in the You Tube. Googly Kannada movie has actor Yash and Kriti Karabanda in the lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X