For Quick Alerts
  ALLOW NOTIFICATIONS  
  For Daily Alerts

  ಹೊಸ ಸಾಹಸಕ್ಕೆ ಕೈ ಹಾಕಿದ 'ಗೂಗ್ಲಿ' ನಿರ್ದೇಶಕ ಪವನ್ ಒಡೆಯರ್

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶನದ ಪವನ್ ಒಡೆಯರ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಂದೆಯಾಗುತ್ತಿರುವ ಖುಷಿಲ್ಲಿರುವ ಪವನ್ ಒಡೆಯರ್ ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶ ಮಾಡಿರುವ ಪವನ್ ಒಡೆಯರ್ ಇದೀಗ ನಿರ್ಮಾಣದ ಕಡೆ ಮುಖ ಮಾಡಿದ್ದಾರೆ.

  ಗೋವಿಂದಾಯ ನಮಹ, ಗೂಗ್ಲಿ, ರಣವಿಕ್ರಮ, ಜೆಸ್ಸಿ, ನಟರಾಜ ಸರ್ವಿಸ್ ಮತ್ತು ನಟಸಾರ್ವಭೌಮ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪವನ್ ಒಡೆಯರ್ ಇದೀಗ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 'ಒಡೆಯರ್ ಮೂವಿಸ್' ಎನ್ನುವ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿರುವ ಪವನ್ ಮೊದಲ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.

  ಪವನ್ ಒಡೆಯರ್ ನಿರ್ದೇಶನದ 'ರೆಮೋ' ಮೂರು ಭಾಷೆಯಲ್ಲಿ ಬಿಡುಗಡೆ!ಪವನ್ ಒಡೆಯರ್ ನಿರ್ದೇಶನದ 'ರೆಮೋ' ಮೂರು ಭಾಷೆಯಲ್ಲಿ ಬಿಡುಗಡೆ!

  ಪವನ್ ಒಡೆಯರ್ ನಿರ್ಮಾಣದಲ್ಲಿ ಬರ್ತಿರುವ ಮೊದಲ ಸಿನಿಮಾದ ಬಗ್ಗೆ ಮಾಹಿತಿ ರಿವೀಲ್ ಆಗಿದ್ದು, ನಿರ್ದೇಶಕ ಮತ್ತು ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ 'ಡೊಳ್ಳು' ಎಂದು ಹೆಸರಿಟ್ಟಿದ್ದು, ಚಿತ್ರಕ್ಕೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡುತ್ತಿದ್ದಾರೆ. ಸಾಗರ್ ಪುರಾಣಿಕ್ ಈ ಮೊದಲು ಕಿರುಚಿತ್ರ ನಿರ್ಮಾಣ ಮಾಡಿ, ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

  ಡೊಳ್ಳು ಹೆಸರೇ ಹೇಳುವ ಹಾಗೆ ಇದು ಜನಪ್ರಿಯ ಜಾನಪದ ನತ್ಯವಾದ ಡೊಳ್ಳು ಕುಣಿತದ ಬಗ್ಗೆ ಇರುವ ಸಿನಿಮಾವಾಗಿದೆ. ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಾಹೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಿಧಿ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ನಿಧಿ ಹೆಗ್ಡೆ ತೆಲುಗು ಮತ್ತು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

  ಹೊಸ ಜನ್ಮ ಸಿಕ್ಕಷ್ಟೇ ಖುಷಿ ಆಗುತ್ತೆ ನಂಗೆ | Filmibeat Kannada

  ಇನ್ನು ವಿಶೇಷ ಎಂದರೆ ಚಿತ್ರಕ್ಕಾಗಿ ವೃತ್ತಿಪರ ಜಾನಪದ ಕಲಾವಿದರನ್ನು ಕರೆತಂದಿದ್ದಾರಂತೆ. ಚಿತ್ರಕ್ಕಾಗಿ ನಟ ಕಾರ್ತಿಕ್ ಡೊಳ್ಳು ಕುಣಿತವನ್ನು ಕಲಿಯುತ್ತಿದ್ದಾರಂತೆ. ಸದ್ಯ ಎಲ್ಲಾ ತಯಾರಿಗಳನ್ನು ಮಾಡುಕೊಳ್ಳುತ್ತಿರುವ ಸಿನಿಮಾತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.

  English summary
  Googly movie fame Director Pavan Wadeyar turns producer for Dollu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X