ಕನ್ನಡ ನಟ ಕರಣ್ ಮಹಾದೇವ್ ವಿರುದ್ಧ ಅತ್ಯಾಚಾರ ಆರೋಪ

'ಗೂಳಿಹಟ್ಟಿ' ಚಿತ್ರದಲ್ಲಿ ಅಭಿನಯಿಸಿದ್ದ ಕನ್ನಡ ನಟ ಮತ್ತು ನೃತ್ಯ ಸಂಯೋಜಕ ಕರಣ್ ಮಹಾದೇವ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಹಿಳೆಯೊಬ್ಬರು ದೂರು ದಾಖಲು ಮಾಡಿದ್ದಾರೆ.

ದೂರು ಕೊಟ್ಟಿರುವ ಮಹಿಳೆಗೆ ಕರಣ್ ಮಹಾದೇವ್ ಅಲಿಯಾಸ್ ಮಂಜುನಾಥ್ ಎರಡು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದರಂತೆ. ಡ್ಯಾನ್ಸ್ ಟೀಚರ್ ಕೂಡ ಆಗಿರುವ ಕರಣ್ ಮಹಾದೇವ್, ಆ ಮಹಿಳೆಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದರಂತೆ.

ಹಲವು ಬಾರಿ ಮಹಿಳೆಯೊಂದಿಗೆ ಫೋನಿನಲ್ಲಿ ಮಾತನಾಡಿದ್ದ ಕರಣ್ ಮಹಾದೇವ್, ಒಮ್ಮೆ ಉಳ್ಳಾಲ ಉಪನಗರದಲ್ಲಿ ಇರುವ ತಮ್ಮ ಸ್ಟುಡಿಯೋಗೆ ಬರುವಂತೆ ಹೇಳಿದ್ದರು. ಪ್ರತಿದಿನ ಸ್ಟುಡಿಯೋಗೆ ಹೋಗಿ ಡ್ಯಾನ್ಸ್ ಕಲಿಯುತ್ತಿದ್ದ ಮಹಿಳೆ ಜೊತೆಗೆ ಕರಣ್ ಮಹಾದೇವ್ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ಅತ್ಯಾಚಾರ ಕೂಡ ಎಸಗಿದ್ದಾರೆ ಎಂದು ಆ ಮಹಿಳೆ ದೂರಿದ್ದಾರೆ.

Goolihatti Film Actor Karan Mahadev booked on rape charges

ಆ ಮಹಿಳೆ ಗರ್ಭಿಣಿ ಆಗಿದ್ದಾರೆ ಎಂದು ಗೊತ್ತಾದ್ಮೇಲೆ, ಗರ್ಭಪಾತ ಮಾಡಿಸಿಕೊಳ್ಳುವಂತೆ ಕರಣ್ ಮಹಾದೇವ್ ಒತ್ತಡ ಹೇರಿದ್ದರು ಎನ್ನುತ್ತಾರೆ ಮಹಿಳೆ.

ಅಸಲಿಗೆ, ಆ ಮಹಿಳೆಗೆ ಅದಾಗಲೇ ನಿಶ್ಚಿತಾರ್ಥ ಆಗಿತ್ತು. ಆ ನಿಶ್ಚಿತಾರ್ಥ ಮುರಿದು ಬೀಳಲು ಕರಣ್ ಮಹಾದೇವ್ ಕಾರಣ ಎಂದು ಆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಕರಣ್ ಮಹಾದೇವ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆಯೇ, ಕರಣ್ ಮಹಾದೇವ್ ಎಸ್ಕೇಪ್ ಆಗಿದ್ದಾನೆ. ಆರೋಪಿಯನ್ನ ಹುಡುಕುವಲ್ಲಿ ಪೊಲೀಸರು ತಲ್ಲೀನರಾಗಿದ್ದಾರೆ.

More from Filmibeat

English summary
'Goolihatti' Film Actor Karan Mahadev booked on rape charges.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X