ಕನಸು ನನಸಾಯ್ತು : ತಾಯಿ ಮಗನ ಕಣ್ಣಲ್ಲಿ ನೀರು ಬಂತು

ಸಿನಿಮಾಗೆ ಅದೆಂಥ ಆಕರ್ಷಣೆಯ ಶಕ್ತಿ ಇದೆಯೋ ಗೊತ್ತಿಲ್ಲ. ಅಯಸ್ಕಾಂತ ಕಬ್ಬಿಣವನ್ನ ತನ್ನ ಕಡೆ ಎಳೆದುಕೊಳ್ಳುವ ಹಾಗೆ, ಸಿನಿಮಾ ಎಲ್ಲರನ್ನು ತನ್ನ ಕಡೆಗೆ ಸೆಳೆದು ಬಿಡುತ್ತದೆ.

ಇದೆ ರೀತಿ ಹಾವೇರಿಯ ಒಬ್ಬ ಹುಡುಗ ಸಿನಿಮಾ ಕನಸು ಕಾಣುತ್ತಿದ್ದ. ತನ್ನ ಕನಸು ನನಸು ಮಾಡಲು ಬೆಂಗಳೂರಿಗೆ ಬಂದ. ಮೊದಲು ಅಲ್ಲಿ ಇಲ್ಲಿ ಕೆಲಸ ಮಾಡಲು ಶುರು ಮಾಡಿ., ಸಾಕಷ್ಟು ನಿರ್ದೇಶಕ ಮನೆಯ ಬಾಗಿಲು ತಟ್ಟಿದ. ಆದರೆ, ಯಾವುದು ಪ್ರಯೋಜನ ಆಗಲಿಲ್ಲ.

ಕೊನೆಗೆ ಆ ಹುಡುಗ ಸುದ್ದಿವಾಹಿನಿಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸಕ್ಕೆ ಸೇರಿದ. ಆಗ ಸಿನಿಮಾ ಆತನ ಕೈ ಅಳತೆ ದೂರದಲ್ಲಿ ಇತ್ತು. ನಂತರ, ಎಷ್ಟೋ ಕಷ್ಟ ಪಟ್ಟು ಈಗ ಹೀರೋ ಆಗಿದ್ದಾನೆ. ಇವತ್ತು ಗಾಂಧಿನಗರದಲ್ಲಿ ತನ್ನ ಕಟ್ ಔಟ್ ಹಾಕಿಸಿಕೊಳ್ಳಲು ಸಿದ್ಧವಾಗಿದ್ದಾನೆ. ಅಂದಹಾಗೆ, ಆ ಹುಡುಗ ಹೆಸರು ಕಿರಣ್.

ಮೊದಲ ಸಿನಿಮಾ ಲಾಂಚ್

ಮೊದಲ ಸಿನಿಮಾ ಲಾಂಚ್

ಕನ್ನಡದ ಸುದ್ದಿ ವಾಹಿನಿಯಲ್ಲಿ ರಿಪೋಟರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಇಂದು ನಾಯಕ ನಟನಾಗಿದ್ದಾರೆ. ಅವರ ಮೊದಲ ಸಿನಿಮಾ 'ಗೋರಿ' ನಿನ್ನೆ ಲಾಂಚ್ ಆಗಿದೆ. ಸಂಪಂಗಿರಾಮ ನಗರದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಕಿರಣ್ ತಾಯಿ ಕೂಡ ಭಾಗಿಯಾಗಿದ್ದು, ಮಗ ಹೀರೋ ಆಗಿದ್ದು, ಕಂಡು ಅವರ ಕಣ್ಣೀರು ಹಾಕಿದರು. ಅಮ್ಮನ ಆನಂದ ನೋಡಿ ಕಿರಣ್ ಕಣ್ಣು ಕೂಡ ವದ್ದೆಯಾಯ್ತು.

'ಗೋರಿ' ಕಟ್ಟಿದ ನಿರ್ದೇಶಕ

'ಗೋರಿ' ಕಟ್ಟಿದ ನಿರ್ದೇಶಕ

ಒಂದು ಕಡೆ ನಾಯಕನ ಕಥೆ ಇದಾದರೆ, ಚಿತ್ರದ ನಿರ್ದೇಶಕ ಗೋಪಾಲ ಕೃಷ್ಣ ಕೂಡ ತುಂಬ ಕಷ್ಟ ಪಟ್ಟಿದ್ದಾರೆ. ಅವರ ತಂದೆ ಮನೆ ಕಟ್ಟುವ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ಸಿನಿಮಾವೇ ಜೀವನ ಎಂದು ಭಾವಿಸಿದ್ದ ಗೋಪಾಲ್ ಇಂದು ಡೈರೆಕ್ಟರ್ ಆಗಿದ್ದಾರೆ. ಅವರ ಮೊದಲ ಸಿನಿಮಾಗೆ ಜಿತೇಂದ್ರ ಬಂಡವಾಳ ಹಾಕುತ್ತಿದ್ದಾರೆ.

ಅಭಿಮಾನಿಗೆ ಗಣೇಶ್ ಶುಭಾಶಯ

ಅಭಿಮಾನಿಗೆ ಗಣೇಶ್ ಶುಭಾಶಯ

ಕಿರಣ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿಮಾನಿ. ಹೀಗಿರುವಾಗ, ಗಣೇಶ್ ತಮ್ಮ ಅಭಿಮಾನಿಯ ಸಿನಿಮಾಗೆ ಶುಭ ಹಾರೈಸಿದ್ರು. 'ಕಿರಣ್ ನಮ್ಮ ಹುಡುಗ ಅವನಿಗೆ ಒಳ್ಳೆಯದಾಗಲಿ' ಎಂದರು. ಉಳಿದಂತೆ, ಮುಹೂರ್ತ ಕಾರ್ಯಕ್ರಮಕ್ಕೆ ನಿರ್ದೇಶಕ ಬಹದ್ದೂರ್ ಚೇತನ್ ಹಾಗೂ ಮಹೇಶ್ ಕುಮಾರ್ ಭಾಗಿಯಾಗಿದ್ದರು.

ಮಾನವೀಯತೆ ದೊಡ್ಡದು

ಮಾನವೀಯತೆ ದೊಡ್ಡದು

'ಗೋರಿ' ಸಿನಿಮಾದ ಮೂಲಕ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನ ಚಿತ್ರತಂಡ ಹೇಳುತ್ತಿದೆ. ಜಾತಿ ಧರ್ಮಕ್ಕಿಂತ ಸ್ನೇಹ, ಪ್ರೀತಿ ದೊಡ್ಡದು. ಸ್ನೇಹ ಪ್ರೀತಿಗಿಂತ ಮಾನವೀಯತೆ ದೊಡ್ಡದು ಎಂಬುದರ ಮೇಲೆ ಕಥೆ ಹೆಣೆಯಲಾಗಿದೆ. ನಾಯಕಿಯಾಗಿ ಶ್ವೇತ, ನಟ ಅಮಿತ್ ನಟಿಸುತ್ತಿದ್ದಾರೆ. ಜನವರಿಯಲ್ಲಿ ಚಿತ್ರದ ಶೂಟಿಂಗ್ ಶುರು ಆಗುತ್ತಿದೆ.

More from Filmibeat

English summary
Kannada actor Kiran's 'Goori' kannada movie launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X