ಬರ್ತಿದೆ 'ಚುಟು ಚುಟು..' ಶೈಲಿಯ ಮತ್ತೊಂದು ಜವಾರಿ ಹಾಡು

'ಚುಟು ಚುಟು..' ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಹಿಟ್ಸ್ ಪಡೆದ ಕನ್ನಡದ ನಂಬರ್ ಒನ್ ಹಾಡಾಗಿದೆ. ಈಗ ಇದೇ ಹಾಡಿನ ಶೈಲಿಯಲ್ಲಿ ಮತ್ತೊಂದು ಹಾಡು ಬಿಡುಗಡೆ ಆಗುತ್ತಿದೆ. 'ಚುಟು ಚುಟು..' ಹಾಡು ಬರೆದ ಸಾಹಿತಿ ಮತ್ತು ಗಾಯಕರೇ ಇಲ್ಲಿಯೂ ಜೊತೆಯಾಗಿದ್ದಾರೆ.

'ಗೋರಿ' ಸಿನಿಮಾ ಹಾಡುಗಳು ಇದೇ ತಿಂಗಳ 26 ರಂದು ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾದ ''ಅದು ಬ್ಯಾರೇನ ಐತಿ..'' ಹಾಡು ಚಿತ್ರರಂಗದವರ ಗಮನ ಸೆಳೆದಿದೆ. ನಿರ್ದೇಶಕ ಯೋಗರಾಜ್ ಭಟ್, ಆರ್ ಚಂದ್ರು, ನಟರಾದ ಶರಣ್, ನೀನಾಸಂ ಸತೀಶ್, ನಟಿ ಹರಿಪ್ರಿಯಾ, ಸೋನು ಗೌಡ, ಬಿಗ್ ಬಾಸ್ ಖ್ಯಾತಿಯ ಕವಿತಾ ಸೇರಿದಂತೆ ಹಲವರು ಹಾಡನ್ನು ಕೇಳಿ ಇಷ್ಟ ಪಟ್ಟಿದ್ದಾರೆ. ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಇದಾಗಿದೆ.

Gori Kannada Film Audio Will Be Releasing On August 26th.

ಚಿತ್ರದ ನಾಲ್ಕು ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಶಿವು ಬೇರ್ಗಿ, ಕೆ ಕಲ್ಯಾಣ್, ಎಂ ಹೆಚ್ ಜಗ್ಗೀನ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರವೀಂದ್ರ ಸೊರಗಾವಿ, ಸರಿಗಮಪ ಖ್ಯಾತಿಯ ಮೆಹಬೂಬ್ ಸಾಬ್, ಸಂತೋಷ ವೆಂಕಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Gori Kannada Film Audio Will Be Releasing On August 26th.

ಕಿರಣ್ ಸಿನಿಮಾದ ನಾಯಕನಾಗಿದ್ದಾರೆ. ಮೊದಲ ಬಾರಿಗೆ ಗೋಪಾಲ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸ್ಮೀತಾ ಮತ್ತು ಶ್ವೇತ ಚಿತ್ರದ ನಾಯಕಿಯರಾಗಿದ್ದಾರೆ. ಹಾವೇರಿ ಟಾಕೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. 'ಚುಟು ಚುಟು..' ಶೈಲಿಯ ಈ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿದೆ.

More from Filmibeat

English summary
Actor Kiran Haveri's 'Gori' kannada film audio will be releasing on August 26th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X